ಚೀನಾಗೆ ತಟ್ಟಿದ ʻಅಗ್ನಿ-5ʼ ಬಿಸಿ! ಬಂಗಾಳ ಕೊಲ್ಲಿಯಲ್ಲಿ ಗೂಢಚರ್ಯೆ!

masthmagaa.com:

ಮಾರ್ಚ್‌ 11 ರಂದು ಭಾರತ ದೇಶೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ-5 ಕ್ಷಿಪಣಿಯ ಮೊದಲ ಹಾರಾಟ ಪರೀಕ್ಷೆಯನ್ನ ಯಶಸ್ವಿಯಾಗಿ ನಡೆಸಿದೆ. ಆದ್ರೆ ಭಾರತ ಈ ಪರೀಕ್ಷೆ ನಡೆಸೋ ಮುಂಚೆನೇ ಚೀನಾ ತನ್ನ ನರಿ ಬುದ್ದಿ ತೋರಿಸಿ ಭಾರತ ಏನ್‌ ಮಾಡುತ್ತೆ ಅನ್ನೋದ್ರ ಮೇಲೆ ಕಣ್ಣಿಟ್ಟಿತ್ತು ಅನ್ನೋ ಮಾಹಿತಿ ಈಗ ಸಿಕ್ಕಿದೆ. ಈ ಅಗ್ನಿ-5 ಕ್ಷಿಪಣಿ ಟೆಸ್ಟ್‌ ನಡೆಯೋ ಒಂದು ವಾರದ ಹಿಂದೆನೇ ಚೀನಾ ಫುಲ್‌ ರೆಡಿಯಾಗಿ ಭಾರತದ ಕಡಲ ತೀರಕ್ಕೆ ಎಂಟ್ರಿ ಕೊಟ್ಟಿತ್ತು. ಭಾರತದ ಈ ನೂತನ ಶಕ್ತಿ ಸಾಮರ್ಥ್ಯ ನೋಡೋಕೆ ಚೀನಾ ತನ್ನ ರಿಸರ್ಚ್‌ ಹಡಗನ್ನ ಬಂಗಾಳ ಕೊಲ್ಲಿಯಲ್ಲಿ ನಿಯೋಜನೆ ಮಾಡಿತ್ತು. ಒಡಿಶಾ ಕರಾವಳಿಯ ಡಾ ಎಪಿಜೆ ಅಬ್ದುಲ್‌ ಕಲಾಂ ದ್ವೀಪದಿಂದ ಮಾಡಲಾದ ಈ ಟೆಸ್ಟ್‌ನ ಪ್ರತಿಯೊಂದು ಹೆಜ್ಜೆಯನ್ನ ಬಹಳ ಸೂಕ್ಷ್ಮವಾಗಿ ಚೀನಾ ಗಮನಿಸ್ತಿತ್ತು ಅಂತ ಗೊತ್ತಾಗಿದೆ. 4,425 ಟನ್‌ ತೂಕದ ಈ ಚೀನಿ ಹಡಗು ಮಾರ್ಚ್‌ 10 ರಂದು ಬಂಗಾಳ ಕೊಲ್ಲಿಯಲ್ಲಿ ಇತ್ತು ಅಂತ ಈಗ ವರದಿಯಾಗಿದೆ. ಅಂದ್ಹಾಗೆ ಚೀನಾ ಇತ್ತೀಚೆಗಷ್ಟೇ ಮಾಲ್ಡೀವ್ಸ್‌ನಲ್ಲೂ ಕೂಡ ಇದೇ ರೀತಿ ರಿಸರ್ಚ್‌ ಹಡಗನ್ನ ನಿಯೋಜಿಸಿತ್ತು. ಪ್ರಶ್ನೆ ಮಾಡಿದ್ರೆ…ಇವೆಲ್ಲಾ ಕೇವಲ ಸೈನ್ಟಿಫಿಕ್‌ ರಿಸರ್ಚ್‌… ವೈಜ್ಞಾನಿಕ ಸಂಶೋಧನೆಗಾಗಿ ಮಾಡ್ತಿರೋದು ಅಂತ ಹೇಳಿತ್ತು. ಆದ್ರೆ ಭಾರತ ಮತ್ತು ಕೆಲ ದೇಶಗಳಿಗೆ ಚೀನಾದ ಈ ರಿಸರ್ಚ್‌ ವೇಷ ಹೊತ್ತ ಹಡಗಿನ ಮೇಲೆ ಸಿಕ್ಕಾಪಟ್ಟೆ ಡೌಟ್‌ ಇದೆ. ಈ ಮೂಲಕ ಚೀನಾ ಹಿಂದೂ ಮಹಾಸಾಗರದಲ್ಲಿರೋ ದೇಶಗಳ ನೌಕಾ ಪಡೆಯ ಸೂಕ್ಷ್ಮ ಡೇಟಾಗಳನ್ನ ಕಲೆಕ್ಟ್‌ ಮಾಡ್ತಿದೆ. ಇದನ್ನ ತನ್ನ ಸೇನಾ ಉದ್ದೇಶಗಳಿಗೆ…. ಪ್ರಮುಖವಾಗಿ ಸಬ್‌ಮರೀನ್‌ ಕಾರ್ಯಚರಣೆಗಳಿಗೆ ಬಳಸ್ತಿದೆ ಅಂತ ಭಾರತ ಸೇರಿ ಬೇರೆ ರಾಷ್ಟ್ರಗಳು ಅನುಮಾನ ವ್ಯಕ್ತಪಡಿಸಿವೆ. ಈಗ ಅದನ್ನೇ ಎಂಐಆರ್‌ವಿ ಕ್ಷಿಪಣಿ ಪರೀಕ್ಷೆ ವೇಳೆ ಚೀನಾ ಬಂದು ಕೂತಿತ್ತು ಅಂತ ಮಾಹಿತಿ ಹೊರಬೀಳ್ತಿದೆ.

-masthmagaa.com

Contact Us for Advertisement

Leave a Reply