ಚೀನಾಗೆ ದುಬೈನಲ್ಲೂ ಇದೆ ಡಿಟೆಂಕ್ಷನ್ ಸೆಂಟರ್!

masthmagaa.com:

ಚೀನಾ ತನ್ನ ಗಡಿಯಾಚೆಯೂ ಗೌಪ್ಯವಾಗಿ ದುರ್ಬುದ್ಧಿ ತೊರ್ಸುತ್ತೆ ಅನ್ನೋಕ್ಕೆ ಸಾಕ್ಷಿ ಸಿಕ್ಕಿದೆ. ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿ ಉಘರ್ ಮುಸ್ಲಿಮರಿಗೆ ಭೂಮಿ ಮೇಲೆಯೇ ನರಕ ತೋರಿಸ್ತಿರೋ ಚೀನಾ, ದುಬೈನಲ್ಲೂ ರಹಸ್ಯವಾದ ಜೈಲು ಹೊಂದಿದೆ ಅಂತ ಗೊತ್ತಾಗಿದೆ. ಚೀನಾ ಮೂಲದ ವು ಹುವಾನ್​​​ ಎಂಬ 26 ವರ್ಷದ ಯುವತಿ ಈ ವಿಚಾರ ಬಹಿರಂಗಪಡಿಸಿದ್ದಾರೆ. ದುಬೈನಲ್ಲಿ ಉಘರ್ ಮುಸ್ಲಿಮರ ಜೊತೆ ನನ್ನನ್ನು ಬಂಧನದಲ್ಲಿಡಲಾಗಿತ್ತು. 8 ದಿನಗಳ ಬಳಿಕ ಅಲ್ಲಿಂದ ಬಿಡುಗಡೆ ಮಾಡಲಾಯ್ತು ಅಂತ ಹೇಳಿದ್ದಾರೆ. ದುಬೈ ಹೋಟೆಲ್​​ನಲ್ಲಿದ್ದ ನನ್ನನ್ನು ಅಪಹರಣ ಮಾಡಿದ ಚೀನೀ ಅಧಿಕಾರಿಗಳು, ಜೈಲಾಗಿ ಮಾರ್ಪಾಡು ಮಾಡಲಾಗಿದ್ದ ವಿಲ್ಲಾದಲ್ಲಿ ಇರಿಸಿದ್ರು. ನಂತರ ಚೀನೀ ಭಾಷೆಯಲ್ಲಿ ಮಾತನಾಡಿದ ಅಧಿಕಾರಿಗಳು ನನಗೆ ಬೆದರಿಕೆ ಹಾಕಿದ್ರು. ನನ್ನ ಭಾವಿ ಪತಿ ನನಗೆ ಕಿರುಕುಳ ನೀಡ್ತಿದ್ದಾರೆ ಅಂತ ಆರೋಪಿಸಿದ ದಾಖಲೆಗಳಿಗೆ ಸಹಿ ಹಾಕಿಸಿಕೊಂಡ್ರು. ನಂತರ ನನ್ನ ಬಿಡುಗಡೆ ಮಾಡಿದ್ರು. ನಾನೀಗ ನೆದರ್​ಲ್ಯಾಂಡ್​​ನಲ್ಲಿ ಆಶ್ರಯ ಕೇಳ್ತಿದ್ದೀನಿ ಅಂತ ಹೇಳಿಕೊಂಡಿದ್ದಾರೆ. ಅಂದಹಾಗೆ ಚೀನಾದಲ್ಲಿ ಬ್ಲಾಕ್​ಸೈಟ್​​​ಗಳು ಸಾಮಾನ್ಯ.. ಆದ್ರೆ ಮತ್ತೊಂದು ದೇಶದಲ್ಲಿ ಈ ರೀತಿಯ ಬ್ಲಾಕ್​ಸೈಟ್​​​ಗಳನ್ನು ಹೊಂದಿದೆ ಅನ್ನೋದಕ್ಕೆ ಈವರೆಗೆ ಯಾವುದೇ ಸಾಕ್ಷ್ಯ ಸಿಕ್ಕಿರಲಿಲ್ಲ. ಅಂಥಾ ದುಬೈನಲ್ಲೇ ಚೀನಾ ತನ್ನ ಬ್ಲಾಕ್​ಸೈಟ್​ ಅಂದ್ರೆ ಜೈಲು ಹೊಂದಿದೆ ಅಂದ್ರೆ ತನ್ನ ಅಂತಾರಾಷ್ಟ್ರೀಯ ಪ್ರಭಾವವನ್ನ ಹೇಗೆ ಬಳಸಿಕೊಳ್ತಿದೆ ಅನ್ನೋದು ಗೊತ್ತಾಗುತ್ತೆ. ವಿದೇಶದಲ್ಲಿರೊ ನಾಗರಿಕರನ್ನು ವಾಪಸ್ ಕರೆತರಲು, ಸರ್ಕಾರದ ವಿರೋಧಿಗಳು, ಭ್ರಷ್ಟಾಚಾರದ ಶಂಕಿತರು ಮತ್ತು ಉಘರ್ ಮುಸ್ಲಿಮರನ್ನು ಮಟ್ಟಹಾಕಲು ಏನೆಲ್ಲಾ ತಂತ್ರ ಅನುಸರಿಸ್ತಿದೆ ಅನ್ನೋದಕ್ಕೆ ಇದು ಉದಾಹರಣೆಯಾಗಿದೆ. ಆದ್ರೆ ಈ ಆರೋಪದ ಬಗ್ಗೆ ದುಬೈ ಆಗಲೀ ಚೀನಾ ಆಗಲಿ, ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

-masthmagaa.com

Contact Us for Advertisement

Leave a Reply