ಬ್ರಿಟನ್‌ ಸೇನೆ ಮೇಲೆ ಸೈಬರ್‌ ದಾಳಿ! ಚೀನಾ ವಿರುದ್ದ ಆರೋಪ!

masthmagaa.com:

ಬ್ರಿಟನ್‌ ಸೇನೆಯಲ್ಲಿ ಕೆಲಸ ಮಾಡೋ ಸಾವಿರಾರು ಸೈನಿಕರು ಹಾಗೂ ಸಿಬ್ಬಂದಿಯ ಬ್ಯಾಂಕ್‌ ಡಿಟೇಲ್ಸ್‌ನ್ನ ಸೈಬರ್‌ ಕಳ್ಳರು ಹ್ಯಾಕ್‌ ಮಾಡಿದ್ದಾರೆ. ಬ್ರಿಟನ್‌ ಸೇನೆಯ ಪೇರೋಲ್‌ ಸಿಸ್ಟಮ್‌ ಮೇಲೆ ಸೈಬರ್‌ ದಾಳಿ ನಡೆಸಿ ಸುಮಾರು 2,72,000 (ಎರಡು ಲಕ್ಷದ ಎಪ್ಪತ್ತೆರಡು ಸಾವಿರ) ಸೇನಾ ಸಿಬ್ಬಂದಿಯ ಬ್ಯಾಂಕ್‌ ಡಿಟೇಲ್ಸ್‌ ಹ್ಯಾಕ್‌ ಮಾಡಲಾಗಿದೆ. ಸದ್ಯ ಈ ಬಗ್ಗೆ ತನಿಖೆ ಶುರು ಮಾಡಲಾಗಿದೆ ಅಂತ ಬ್ರಿಟನ್‌ನ ರಕ್ಷಣಾ ಕಾರ್ಯದರ್ಶಿ ಗ್ರಾಂಟ್‌ ಶಾಪ್ಸ್‌ ಹೇಳ್ಕೊಂಡಿದ್ದಾರೆ. ಅಂದ್ಹಾಗೆ ಈ ಸುದ್ದಿ ಹೊರ ಬೀಳೋ ಮೊದಲೇ ಬ್ರಿಟನ್‌ ಸೇನೆಯ ಪೇರೋಲ್‌ ಸಿಸ್ಟಮ್‌ ಮೇಲೆ ಚೀನಾ ಸೈಬರ್‌ ದಾಳಿ ನಡೆಸಿದೆ ಅಂತ ಬಿಬಿಸಿ ರಿಪೋರ್ಟ್‌ ಮಾಡಿತ್ತು. ಆದ್ರೆ ಇದ್ರಲ್ಲಿ ಚೀನಾದ ಕೈವಾಡವಿರೋ ಬಗ್ಗೆ ಸದ್ಯ ಬ್ರಿಟನ್‌ ಸರ್ಕಾರ ಯಾವ್ದೇ ರೀತಿ ಹೇಳಿಕೆ ನೀಡಿಲ್ಲ. ಅತ್ತ ಬಿಬಿಸಿಯ ಈ ರಿಪೋರ್ಟ್‌ನ್ನ ಚೀನಾ ನಿರಾಕರಿಸಿದೆ.

-masthmagaa.com

Contact Us for Advertisement

Leave a Reply