ಭಾರತದ ಜೊತೆಗಿನ ಗಡಿ ಸಮಸ್ಯೆ ಬಗೆಹರಿಸಿಕೊಳ್ತೀವಿ: ಚೀನಾ

masthmagaa.com:

ಭಾರತ ಹಾಗೂ ಚೀನಾ ಗಡಿಯಲ್ಲಿರುವ ಸಮಸ್ಯೆಗಳನ್ನ ಪರಿಹರಿಸೋಕೆ ಒಪ್ಪಿಕೊಂಡಿವೆ. ಎರಡು ದಿನಗಳ ಮಿಲಿಟರಿ ಮಾತುಕತೆ ಮುಕ್ತಾಯವಾದ ನಂತರ ಉಭಯ ದೇಶಗಳು ಜಂಟಿ ಹೇಳಿಕೆಯಲ್ಲಿ ಈ ರೀತಿ ತಿಳಿಸಿವೆ. ಲಡಾಖ್‌ಗೆ ಹೊಂದಿಕೊಂಡಿರುವ ಗಡಿಯುದ್ಧಕ್ಕೂ ಇತ್ಯರ್ಥವಾಗದ ಸಮಸ್ಯೆಗಳ ಪರಿಹಾರದ ಕುರಿತು ಉಭಯ ದೇಶಗಳು ಧನಾತ್ಮಕ ಮತ್ತು ಆಳವಾದ ಚರ್ಚೆ ನಡೆಸಿರುವುದಾಗಿ ಮಾಹಿತಿ ನೀಡಿವೆ. ಅಂದ್ಹಾಗೆ ಭಾರತ-ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ 19ನೇ ಸುತ್ತಿನ ಸಭೆ ಆಗಸ್ಟ್ 13 ಹಾಗೂ 14ರಂದು ಭಾರತ ಗಡಿಯ ಚುಶುಲ್-ಮೊಲ್ಡೊನಲ್ಲಿ ನಡೆದಿದೆ. ದೀರ್ಘಾವಧಿಯ ಗಡಿರೇಖೆ ಕುರಿತು ಇದೇ ಮೊದಲ ಬಾರಿಗೆ ಎರಡು ದಿನಗಳ ಉನ್ನತ ಮಟ್ಟದ ಮಿಲಿಟರಿ ಮಾತುಕತೆ ಆಗಿದ್ದು, ಉಳಿದಿರುವ ಸಮಸ್ಯೆಗಳನ್ನು ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಬಗೆಹರಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ ಅಂತ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply