ಚೀನಾದಲ್ಲಿ ಕೊರೋನಾ ಸ್ಫೋಟ.. 12 ಲಕ್ಷ ಜನರಿರೋ ಪ್ರಾಂತ್ಯ ಲಾಕ್​ಡೌನ್!

masthmagaa.com:

ಚೀನಾದಲ್ಲಿ ಕೊರೋನಾದ ಡೆಲ್ಟಾ ರೂಪಾಂತರಿ ಆಟ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ. ಇವತ್ತು ಇಡೀ ಚೀನಾದ ಒಟ್ಟು 20 ನಗರಗಳಲ್ಲಿ 55 ಮಂದಿಯಲ್ಲಿ ಡೆಲ್ಟಾ ವೈರಾಣು ಪತ್ತೆಯಾಗಿದೆ. ಡೆಲ್ಟಾ ಹರಡುವಿಕೆಯನ್ನ ಗಮನದಲ್ಲಿಟ್ಟುಕೊಂಡು ಈಗಾಗಲೇ ಫುಲ್ ಅಲರ್ಟ್ ಆಗಿರೋ ಚೀನಾ, ಹಲವೆಡೆ ನಿರ್ಬಂಧಗಳನ್ನು ಜಾರಿಗೊಳಿಸಿದೆ. ರಾಜಧಾನಿ ಬೀಜಿಂಗ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಪರೀಕ್ಷೆಯನ್ನು ಜಾಸ್ತಿ ಮಾಡಲಾಗಿದೆ. ಝುಝೂ ಪ್ರಾಂತ್ಯದಲ್ಲಿ 12 ಲಕ್ಷ ಜನರನ್ನು ಮುಂದಿನ ಮೂರು ದಿನಗಳ ಕಾಲ ಕಟ್ಟುನಿಟ್ಟಿನ ಲಾಕ್​ಡೌನ್​ನಲ್ಲಿ ಇರುವಂತೆ ಸೂಚಿಸಲಾಗಿದೆ.

-masthmagaa.com

Contact Us for Advertisement

Leave a Reply