ಪಾಕ್‌ನ ಗ್ವದಾರ್‌ ಪೋರ್ಟ್‌ ಬಳಿ ಸೇನಾ ನೆಲೆ ಸ್ಥಾಪಿಸಲಿದೆಯಾ ಚೀನಾ?

masthmagaa.com:

ಭಾರತದ ಸುತ್ತ ಸ್ಟ್ರಿಂಗ್‌ ಆಫ್‌ ಪಲ್ಸ್‌ (String of Pearls) ಹೆಸರಲ್ಲಿ ದೊಡ್ಡ ಬಲೆಯನ್ನ ಹೆಣಿಯುತ್ತಿರೋ ಚೀನಾ ಈಗ ಪಾಕಿಸ್ತಾನವನ್ನ ಮಿಲಿಟರಿ ಬೇಸ್‌ ಮಾಡಿಕೊಳ್ಳೋಕೆ ಮುಂದಾಗಿದೆ. ಪಾಕಿಸ್ತಾನದ ಗ್ವದಾರ್‌ ಬಂದರಿನಲ್ಲಿ ಚೀನಾ ತನ್ನ ಮಿಲಿಟರಿ ಬೇಸ್‌ ಸ್ಥಾಪನೆ ಮಾಡೋಕೆ ತಯಾರಿ ಮಾಡ್ತಿದೆ ಅಂತ ವರದಿಯಾಗಿದೆ. ಪಾಕಿಸ್ತಾನದೊಂದಿಗೆ ಸೇನಾ ಸಹಕಾರವನ್ನ ವಿಸ್ತರಿಸೋ ಕುರಿತು ಚೀನಾ ಇತ್ತೀಚೆಗೆ ತಾನೇ ಘೋಷಣೆ ಮಾಡಿತ್ತು.ಇದಕ್ಕೆ ಸಂಬಂಧಿಸಿದಂತೆ, ಕೆಲವು ದಿನಗಳ ಹಿಂದೆ ಪಾಕಿಸ್ತಾನದ ನೇವಿ ಮುಖ್ಯಸ್ಥ ಅಮ್ಜದ್‌ ಖಾನ್‌ ನಿಯಾಜಿ ಚೀನಾಗೆ ಭೇಟಿ ಕೊಟ್ಟಿದ್ರು. ಅಲ್ಲಿ ಈ ಸೇನಾ ನೆಲೆ ಸ್ಥಾಪನೆ ಕುರಿತು ಮಹತ್ವದ ಮಾತುಕತೆ ನಡೆದಿದೆ ಅಂತ ಸುದ್ದಿಯಾಗಿದೆ. ಆದ್ರೆ ಎರಡೂ ದೇಶಗಳಿಂದ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಒಂದು ವೇಳೆ ಇದು ಬೇಗ ಕಾರ್ಯರೂಪಕ್ಕೆ ಬಂದ್ರೆ ಭಾರತಕ್ಕೆ ಖಂಡಿತಾ ಆತಂಕದ ವಿಷಯವಾಗಲಿದೆ ಅಂತ ಅಮೆರಿಕ ಹೇಳಿದೆ. ಯಾಕಂದರೆ ಈ ಗ್ವದಾರ್‌ ಬಂದರನ್ನ ಚೀನಾ ನಾನು ಅಭಿವೃದ್ದಿ ಮಾಡ್ತೀನಿ ಅಂತ ಈಗಾಗಲೇ ಪಾಕಿಸ್ತಾನದ ಕೈಯಿಂದ ತನ್ನ ಕೈಗೆ ತಗೊಂಡಿದೆ. ಅಲ್ದೇ 2017ರಲ್ಲಿ ಆಫ್ರಿಕಾದಲ್ಲಿ ಬರುವ ಜಿಬೋಟಿಯಲ್ಲಿ ಚೀನಾ ಸೇನಾ ನೆಲೆಯನ್ನೂ ಸ್ಥಾಪಿಸಿದೆ. ಈಗ ಅರಬ್ಬೀ ಸಮುದ್ರದಲ್ಲಿ ಮತ್ತೊಂದು ಸೇನಾ ನೆಲೆಗೆ ಪಾಕಿಸ್ತಾನವೇ ಜಾಗ ಆಗೋದು ಭಾರತದ ರಕ್ಷಣಾ ದೃಷ್ಟಿಯಿಂದ ತುಂಬಾ ಅಪಾಯಕಾರಿ ಅಂತ ಅಮೆರಿಕದ ರಕ್ಷಣಾ ಕಚೇರಿ ಪೆಂಟಗಾನ್‌ ಹೇಳಿದೆ. ನೇಪಾಳ, ಶ್ರೀಲಂಕಾ, ಬಾಂಗ್ಲಾ, ಮಯನ್ಮಾರ್‌ ಮೂಲಕ ಭಾರತವನ್ನ ಸುತ್ತುವರೆ ಯೋಜನೆ ಹಾಕಿಕೊಂಡಿರೋ ಚೀನಾ, ಈಗ ಪಾಕಿಸ್ತಾನದಲ್ಲಿ ನೇರವಾಗಿ ಸೇನಾ ನೆಲೆಯನ್ನೇ ಸ್ಥಾಪಿಸೋಕೆ ಮುಂದಾಗಿರೋದು ನಿಜಕ್ಕೂ ದೊಡ್ಡ ಬೆದರಿಕೆ ಅಂತ ವಾರ್ನ್ ಮಾಡಲಾಗಿದೆ.‌ ಇನ್ನು ಹಣದ ಆಸೆಯಿಂದ, ಚೀನಾ ಮಾತು ಕೇಳಿ ಪಾಕಿಸ್ತಾನ ಚೀನಾಗೆ ಸೇನೆ ನೆಲೆಗೆ ಜಾಗ ಕೊಟ್ಟಿದ್ದೇ ಆದ್ರೆ ಭಾರತ ಹಾಗೂ ಪಾಕ್‌ ನಡುವೆ, ಭಾರತ ಹಾಗೂ ಚೀನಾ ನಡುವೆ ದೊಡ್ಡ ಬಿರುಕು ಏಳಬೋದು ಅಂತ ವಿಶ್ಲೇಷಣೆ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply