ಮಾಧ್ಯಮಗಳನ್ನು ಕಂಟ್ರೋಲ್ ಮಾಡೋಕೆ ಚೀನಾ ಹೊಸ ಪ್ಲಾನ್!

masthmagaa.com:

ಇಷ್ಟು ದಿನ ಉದ್ಯಮಿಗಳ ಮೇಲೆ ಕೆಂಗಣ್ಣು ಬೀರುತ್ತಿದ್ದ ಚೀನಾ ಸರ್ಕಾರ ಈಗ ಮಾಧ್ಯಮಗಳನ್ನು ಗುರಿಯಾಗಿಸಿದೆ. ಸುದ್ದಿಸಂಸ್ಥೆಗಳ ಮೇಲೆ ಖಾಸಗಿ ಬಂಡವಾಳ ಹೂಡಿಕೆಯನ್ನು ಬ್ಯಾನ್ ಮಾಡುವ ಒಂದು ಪ್ರಸ್ತಾವನೆಯನ್ನು ಚೀನೀ ಅಧಿಕಾರಿಗಳು ಮುಂದಿಟ್ಟಿದ್ದಾರೆ ಅಂತ ವಾಯ್ಸ್ ಆಫ್ ಅಮೆರಿಕ ವರದಿ ಮಾಡಿದೆ. ಈ ಕರಡಿನ ಪ್ರಕಾರ ಖಾಸಗಿ ಮಾಲೀಕತ್ವದ ಸಂಸ್ಥೆಗಳು ಸುದ್ದಿ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳೋದು, ನಡೆಸೋದು, ವಿದೇಶಿ ಮಾಧ್ಯಮಗಳಲ್ಲಿ ಉತ್ಪತ್ತಿಯಾದ ಸುದ್ದಿಗಳನ್ನು ಮರುಪ್ರಕಟಿಸೋದಕ್ಕೆ ಅವಕಾಶ ಇರೋದಿಲ್ಲ. ಈ ಮೂಲಕ ಚೀನಾದ ಕಮ್ಯೂನಿಸ್ಟ್​ ಸರ್ಕಾರ ತನ್ನ ವಿರೋಧಿಗಳ ಧ್ವನಿಯನ್ನು ಅದುಮೋ ಪ್ರಯತ್ನ ನಡೆಸ್ತಿದೆ. ಎಲ್ಲಾ ಸುದ್ದಿ ಸಂಸ್ಥೆಗಳನ್ನು ತನ್ನ ಕಂಟ್ರೋಲ್​​ಗೆ ಒಳಪಡಿಸೋ ಹುನ್ನಾರ ಅಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದ್ರ ನಡುವೆ ಇವತ್ತು ಚೀನಾ ವಿಶ್ವಸಂಸ್ಥೆಗೆ ವಾಪಸ್ಸಾಗಿ 50 ವರ್ಷ ಪೂರ್ಣಗೊಂಡಿದೆ. ಇದ್ರ ಅಂಗವಾಗಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಚೀನಾ ಅಧ್ಯಕ್ಷ ಶಿ ಜಿನ್​ಪಿಂಗ್​​, ಭಯೋತ್ಪಾದನೆ, ಹವಾಮಾನ ಬದಲಾವಣೆ ಮತ್ತು ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಸಹಕಾರ ಅಗತ್ಯ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply