ಕೊರೋನಾ ಮೂಲದ 2ನೇ ಹಂತದ ತನಿಖೆಗೆ ಚೀನಾ ವಿರೋಧ!

masthmagaa.com:

ಕೊರೋನಾ ಬಂದು ಹತ್ತತ್ರ 2 ವರ್ಷ ಆಗ್ತಾ ಬಂದ್ರೂ ಇನ್ನೂ ಅದ್ರ ಮೂಲ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆದ್ರೆ ಇದೀಗ ವಿಶ್ವ ಆರೋಗ್ಯ ಸಂಸ್ಥೆಯ 2ನೇ ಹಂತದ ತನಿಖೆಯ ಪ್ರಸ್ತಾಪವನ್ನು ಚೀನಾ ತಿರಸ್ಕರಿಸಿದೆ. ಇತ್ತೀಚೆಗಷ್ಟೇ ಕೊರೋನಾ ಮೂಲ ಪತ್ತೆಗೆ 2ನೇ ಹಂತದ ತನಿಖೆ ನಡೆಯಬೇಕು. ಈ ಸಲದ ತನಿಖೆ ಮಾರ್ಕೆಟ್, ಲ್ಯಾಬ್​​ಗಳನ್ನು ಒಳಗೊಂಡಂತೆ ಪಾರದರ್ಶಕವಾಗಿರಬೇಕು. ಅದಕ್ಕೆ ಚೀನಾ ಫುಲ್ ಸಪೋರ್ಟ್​ ಮಾಡ್ಬೇಕು ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಆದ್ರೀಗ ಈ ಪ್ಲಾನ್​ಗೆ ಚೀನಾ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಚೀನಾ, ಈ ರೀತಿಯ ಕೊರೋನಾ ಮೂಲ ಪತ್ತೆಹಚ್ಚುವ ಯೋಜನೆಯನ್ನು ಸ್ವೀಕರಿಸೋದಿಲ್ಲ. ಯಾಕಂದ್ರೆ ಇದ್ರಲ್ಲಿರೋ ಕೆಲವೊಂದು ಅಂಶಗಳು ಸಾಮಾನ್ಯ ಜ್ಞಾನವನ್ನೂ ಕಡೆಗಣಿಸುತ್ತವೆ. ಅದೂ ಅಲ್ಲದೆ ಚೀನಾದ ಪ್ರಯೋಗಾಲಯಗಳು ವೈರಸ್ ಸೋರಿಕೆಗೆ ಕಾರಣವಾಗಿದೆ ಅನ್ನೋ ಊಹೆಯನ್ನು ಕೂಡ ಮುಂದಿಡಲಾಗಿದೆ. ಹೀಗಾಗಿ ನಾವಿದನ್ನ ಒಪ್ಪಿಕೊಳ್ಳಲ್ಲ. ಕೊರೋನಾ ಮೂಲ ಪತ್ತೆ ವಿಚಾರದಲ್ಲಿ ರಾಜಕೀಯವನ್ನು ನಾವು ಸಹಿಸಲ್ಲ ಅಂತ ಕೂಡ ಹೇಳಿದೆ.

-masthmagaa.com

Contact Us for Advertisement

Leave a Reply