ಭಾರತ- ಚೀನಾ ನಡುವೆ 10ನೇ ಸುತ್ತಿನ ಮಾತುಕತೆ

masthmagaa.com:

ನಿನ್ನೆಯಷ್ಟೇ ಗಲ್ವಾನ್ ಕಣಿವೆಯಲ್ಲಿ ತನ್ನ ಯೋಧರು ಸಾವನ್ನಪ್ಪಿದ್ದನ್ನು ಒಪ್ಪಿಕೊಂಡಿದ್ದ ಚೀನಾ ಘಟನೆ ಕುರಿತ ವಿಡಿಯೋವೊಂದನ್ನು ರಿಲೀಸ್ ಮಾಡಿತ್ತು. ಅದ್ರ ಬೆನ್ನಲ್ಲೇ ಇವತ್ತು ಭಾರತ-ಚೀನಾ ನಡುವೆ ಮೋಲ್ಡೋ ಗಡಿಯಲ್ಲಿ 10ನೇ ಸುತ್ತಿನ ಮಿಲಿಟರಿ ಕಮಾಂಡರ್ ಮಟ್ಟದ ಮಾತುಕತೆ ನಡೆದಿದೆ.

ಈ ವೇಳೆ ಪೂರ್ವ ಲಡಾಖ್​​ನ ಹಾಟ್​​​ಸ್ಪ್ರಿಂಗ್​, ಡೆಪ್ಸಂಗ್ ಮತ್ತು ಗೋಗ್ರಾದಲ್ಲಿ ಸೇನೆ ಹಿಂತೆಗೆತದ ಬಗ್ಗೆ ಚರ್ಚೆ ನಡೆಸಲಾಗಿದೆ. ಎರಡು ದಿನಗಳ ಹಿಂದಷ್ಟೇ ಪಂಗಾಂಗ್ ಸರೋವರದ ಬಳಿ ಎರಡೂ ದೇಶಗಳು ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದ್ದವು.

-masthmagaa.com

Contact Us for Advertisement

Leave a Reply