ಕೊರೋನಾ ಎಫೆಕ್ಟ್! ಶಾಂಘೈನಲ್ಲಿ ಒಟ್ಟಿಗೆ ಮಲಗುವಂತಿಲ್ಲ, ಕಿಸ್​-ಹಗ್​ ಮಾಡುವಂತಿಲ್ಲ!

masthmagaa.com:

ನಮ್ಮ ಪಕ್ಕದ ದೇಶ ಚೀನಾದಲ್ಲಿ ಕೊರೋನಾ ಆರ್ಭಟ ನಿಲ್ಲೋ ಲಕ್ಷಣ ಕಾಣ್ತಿಲ್ಲ. ಕಳೆದ 24 ಗಂಟೆಯಲ್ಲಿ ದಾಖಲೆಯ 21 ಸಾವಿರಕ್ಕೂ ಹೆಚ್ಚಯ ಕೇಸ್​ ದೃಢಪಟ್ಟಿದೆ. ವೈರಸ್​ ಪೆಟ್ಟಿಗೆ ತತ್ತರಿಸಿರೋ ಶಾಂಘೈ ನಗರದ ಒಂದರಲ್ಲೇ 19 ಸಾವಿರಕ್ಕೂ ಹೆಚ್ಚು ಕೇಸ್​ ದೃಢಪಟ್ಟಿದೆ. ಚೀನಾದಲ್ಲಿ 21 ಸಾವಿರ ಜನರಿಗೆ ಕೊರೋನಾ ಪಾಸಿಟಿವ್ ಬಂದ್ರೂ, ಆ ದೇಶ ರೋಗದ ಲಕ್ಷಣ ಇರೋ ಕೇಸ್​​ಗಳನ್ನ ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುತ್ತೆ. ಚೀನಾ ಪ್ರಕಾರ 1,323 ಜನರಿಗೆ ಮಾತ್ರ ರೋಗದ ಲಕ್ಷಣ ಇದೆ, ಹೀಗಾಗಿ ಅವು ಮಾತ್ರ ಪಾಸಿಟಿವ್​ ಕೇಸಸ್​. ಉಳಿದವು ಅಸಿಂಪ್ಟೋಮ್ಯಾಟಿಕ್​ ಕೇಸಸ್​ ಅಂತ ಹೇಳುತ್ತೆ. ಇನ್ನು ಕೊರೋನಾ ಸ್ಫೋಟದ ಕೇಂದ್ರಬಿಂದುವಾಗಿರೋ ಶಾಂಘೈ ನಗರದಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್​ನಿಂದ ಜನರ ಜೀವನ ಕಷ್ಟವಾಗಿದೆ. ಸುಮಾರು ಎರಡೂವರೆ ಕೋಟಿ ಜನ ಮನೆಯಿಂದ ಹೊರಬರದಂತೆ ಆದೇಶಿಸಲಾಗಿದೆ. ಆದ್ರೂ ಕೆಲವರು ಬಾಲ್ಕನಿಗೆ ಬಂದು ಹಾಡು ಹೇಳೋದು, ಅಗತ್ಯ ವಸ್ತುಗಳು ಸಿಕ್ತಿಲ್ಲ ಅಂತೆಲ್ಲಾ ಪ್ರತಿಭಟಿಸುತ್ತಿದ್ದಾರೆ. ಹೀಗೆ ಬಾಲ್ಕನಿಗೆ ಬಂದ್ರೂ ಕೂಡ, ಸರ್ಕಾರ ಕೆಲವೇ ಕ್ಷಣಗಳಲ್ಲಿ ಡ್ರೋನ್​ ಮೂಲಕ ಅನೌನ್ಸ್​ಮೆಂಟ್​​ ಮಾಡ್ತಿದೆ. ಜನ ಕೊರೋನಾ ನಿಯಮಗಳನ್ನ ಪಾಲಿಸಿ, ಕಿಟಕಿಗಳನ್ನ ತೆಗೀಬೇಡಿ, ನಿಮ್ಮ ಫ್ರೀ ಲೈಫ್‌ ಆಸೆ ಮೇಲೆ ಹಿಡಿತವಿರಲಿ, ಕಪಲ್‌ಗಳು ಬೇರೆ ಬೇರೆಯಾಗಿ ಮಲಗಿ, ಕಿಸ್ – ಹಗ್​ ಎಲ್ಲಾ​ ಮಾಡ್ಬೇಡಿ, ಒಟ್ಟಿಗೆ ಕೂತ್ಕೊಂಡು ಊಟ ಮಾಡ್ಬೇಡಿ ಅಂತೆಲ್ಲಾ ಅನೌನ್ಸ್​ ಮಾಡಲಾಗ್ತಿದೆ. ಇದರ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

-masthmagaa.com

Contact Us for Advertisement

Leave a Reply