ಚೀನಾದಲ್ಲಿ ಹೊಸ ವೈರಸ್.. ಓರ್ವ ಬಲಿ

masthmagaa.com:

ಕೊರೋನಾದ ತವರು ಚೀನಾದಲ್ಲೀಗ ಮಂಕಿ ಬಿ ವೈರಸ್​ (BV) ಪತ್ತೆಯಾಗಿದೆ. ಬೀಜಿಂಗ್ ಮೂಲದ ವೆಟರ್ನರಿ ಸರ್ಜನ್​​ಗೆ ಈ ಸೋಂಕು ಅಂಟಿಕೊಂಡಿದ್ದು, ​ಆತ ಮೃತಪಟ್ಟಿದ್ದಾನೆ ಅಂತ ಚೀನಾ ಮಾಧ್ಯಮಗಳು ವರದಿ ಮಾಡಿವೆ.ಚೀನಾದಲ್ಲಿ ಮಂಕಿ ಬಿ ವೈರಸ್ ಕಾಣಿಸಿಕೊಂಡಿರೋದು ಮತ್ತು ಅದರಿಂದ ಸಾವು ಸಂಭವಿಸಿರೋದು ಇದೇ ಮೊದಲು. ಅಂದ್ಹಾಗೆ ಈ ವ್ಯಕ್ತಿ ಮಾರ್ಚ್‌ ತಿಂಗಳಲ್ಲಿ ಎರಡು ಮೃತ ಮಂಗಗಳ ದೇಹವನ್ನ ಕೊಯ್ದು ಅಧ್ಯಯನ ನಡೆಸಿದ್ದ. ಅದಾಗಿ ಒಂದು ತಿಂಗಳ ಬಳಿಕ ಆತನಿಗೆ ವಾಂತಿ ಶುರುವಾಗಿದೆ. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ್ರೂ ಮೇ 27ರಂದು ಆತ ಮೃತಪಟ್ಟಿದ್ದಾನೆ ಅಂತ ಚೀನಾ ಹೇಳಿದೆ. ಈತನ ಸಂಪರ್ಕದಲ್ಲಿದ್ದೋರಿಗೆ ಮಂಕಿ ಬಿ ವೈರಸ್​ ತಗುಲಿಲ್ಲ ಅಂತಾನೂ ಹೇಳಿದೆ. ಅಂದ್ಹಾಗೆ ಈ ಮಂಕಿ ಬಿ ವೈರಸ್​ 1932ರಲ್ಲಿ ಮೊದಲ ಬಾರಿ ಮಕಾಕಸ್​​ (Macaques) ಜಾತಿಯ ಮಂಗಗಳಲ್ಲಿ ಮೊದಲು ಕಾಣಿಸಿಕೊಂಡಿತ್ತು. ಮಂಗನಿಂದ ಮನುಷ್ಯರಿಗೂ ಹರಡಬಹುದು. ಜಗತ್ತಿನಾದ್ಯಂತ 51 ಜನರಿಗೆ ಈ ಸೋಂಕು ತಗುಲಿದೆ. ಅದರಲ್ಲಿ 21 ಜನ ಮೃತಪಪಟ್ಟಿದ್ದಾರೆ. ಮಂಕಿ ಬಿ ವೈರಸ್​ನಲ್ಲಿ ಸಾವಿನ ಪ್ರಮಾಣ 70ರಿಂದ 80 ಪರ್ಸೆಂಟ್​ ಇದೆ ಅಂದಾಜಿಸಲಾಗಿದೆ. ಅಂದ್ರೆ 100 ಜನರಿಗೆ ಈ ವೈರಸ್​ ತಗುಲಿದ್ರೆ 70ರಿಂದ 80 ಜನ ಪ್ರಾಣ ಕಳ್ಕೊತಾರೆ. ಮತ್ತೊಂದುಕಡೆ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಹಂದಿ ಮರಿಯೊಂದರಲ್ಲಿ ಆಫ್ರಿಕನ್​ ಸ್ವೈನ್ ಫೀವರ್ ವೈರಾಣು​ ಕಾಣಿಸಿಕೊಂಡಿದೆ. ಸಿಚುವಾನ್​ ಪ್ರಾಂತ್ಯಕ್ಕೆ ಟ್ರಕ್​ವೊಂದರಲ್ಲಿ 89 ಹಂದಿ ಮರಿಗಳನ್ನ ಅಕ್ರಮವಾಗಿ ಸಾಗಿಸಲಾಗ್ತಿತ್ತು. ಅದರಲ್ಲಿ ಒಂದು ಮರಿ ಸತ್ತಿತ್ತು. ಪರೀಕ್ಷೆ ನಡೆಸಿದಾಗ ಆಫ್ರಿಕನ್ ಸ್ವೈನ್​ ಫೀವರ್ ದೃಢಪಟ್ಟಿದೆ. ಇದರ ಬೆನ್ನಲ್ಲೇ ಉಳಿದ ಹಂದಿಮರಿಗಳನ್ನ ಸಾಯಿಸಾಲಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಅಂದ್ಹಾಗೆ 2018 ಮತ್ತು 2019ರಲ್ಲಿ ದೊಡ್ಡ ಮಟ್ಟದಲ್ಲಿ ಹಾವಳಿ ಇಟ್ಟಿದ್ದ ಆಫ್ರಿಕನ್ ಸ್ವೈನ್ ಫೀವರ್ ಚೀನಾದಲ್ಲಿದ್ದ ಅರ್ಧಕ್ಕರ್ಧ ಹಂದಿಗಳನ್ನ ಮಾರಣಹೋಮಕ್ಕೆ ಕಾರಣವಾಗಿತ್ತು. ಕಳೆದ ವರ್ಷದಿಂದ ಹಂದಿ ಬ್ಯುಸಿನೆಸ್​ ಮೆಲಕ್ಕೆದ್ದಿತ್ತು. ಆದ್ರೆ ಚೀನಾದ ಉತ್ತರ ಭಾಗದಲ್ಲಿ ಕಾಣಿಸಿಕೊಳ್ತಿರೋ ಈ ವೈರಾಣುವಿನ ರೂಪಾಂತರಿಗಳು ಈ ಉದ್ಯಮಕ್ಕೆ ಮತ್ತೆ ಪೆಟ್ಟು ಕೊಡ್ತಿದೆ.

-masthmagaa.com

Contact Us for Advertisement

Leave a Reply