ತಾಲಿಬಾನ್ ವಿರುದ್ಧ ಕೈ ಜೋಡಿಸಿದ ಚೀನಾ-ರಷ್ಯಾ!

masthmagaa.com:

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಟೇಕೋವರ್ ಬಳಿಕ ಎದುರಾಗಬಹುದಾದ ಎಲ್ಲಾ ಅಪಾಯಗಳನ್ನು ಒಟ್ಟಾಗಿ ಎದುರಿಸಲು ರಷ್ಯಾ ಮತ್ತು ಚೀನಾ ನಿರ್ಧರಿಸಿವೆ. ಈ ಬಗ್ಗೆ ಉಭಯನಾಯಕರು ಫೋನ್ ಕಾಲ್​ನಲ್ಲಿ ಮಾತಾಡಿದ್ದಾರೆ. ಅಫ್ಘಾನಿಸ್ತಾನದ ನೆಲದಿಂದ ಎದುರಾಗಬಹುದಾದ ಭಯೋತ್ಪಾದನೆ ಭೀತಿ, ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ತಡೆಯಲು ಜಂಟಿ ಹೆಜ್ಜೆ ಇಡೋಣ.. ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ಮತ್ತು ಅಸ್ಥಿರತೆಯನ್ನು ತಡೆಯೋಣ ಅಂತ ಮಾತಾಡ್ಕೊಂಡಿದ್ದಾರೆ ಅಂತ ಮಾಹಿತಿ ಸಿಕ್ಕಿದೆ. ಮತ್ತೊಂದ್ಕಡೆ ರಷ್ಯಾ ಅಫ್ಘಾನಿಸ್ತಾನದಿಂದ 500 ಮಂದಿ ರಷ್ಯನ್ನರು ಮತ್ತು ಈ ಹಿಂದೆ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ದೇಶಗಳ ಪ್ರಜೆಗಳನ್ನು ಸ್ಥಳಾಂತರಿಸಿದೆ. ಅಂದಹಾಗೆ ತಾಲಿಬಾನ್​ ಟೇಕೋವರ್ ಬಳಿಕ ರಷ್ಯಾ ಇದೇ ಮೊದಲ ಬಾರಿಗೆ ಜನರನ್ನು ಕಾಬೂಲ್​ನಿಂದ ಸ್ಥಳಾಂತರಿಸಿದೆ.

-masthmagaa.com

Contact Us for Advertisement

Leave a Reply