ಪಾಕ್‌ ಮಾಧ್ಯಮವನ್ನ ಚೀನಾ ನಿಯಂತ್ರಣ ಮಾಡೋಕೆ ಪ್ರಯತ್ನಿಸುತ್ತಿದೆ: ಅಮೆರಿಕ

masthmagaa.com:

ತನ್ನ ಚಡ್ಡಿದೋಸ್ತ್‌ ಆದ ಪಾಕಿಸ್ತಾನದ ಮಾಧ್ಯಮವನ್ನ ಕಂಟ್ರೋಲ್‌ ಮಾಡೋಕೆ ಚೀನಾ ಯತ್ನಿಸುತ್ತಿದೆ ಅಂತ ಅಮೆರಿಕ ಹೇಳಿದೆ. ಇದಕ್ಕಾಗಿ ಚೀನಾ ಹಲವು ಅಂತಾರಾಷ್ಟ್ರೀಯ ಕಾರ್ಯಾಚರಣೆಗಳನ್ನ ಅಭಿವೃದ್ಧಿಪಡಿಸಿದೆ. ಈ ಮೂಲಕ ಸುಳ್ಳು ಮಾಹಿತಿಗಳು ಹರಡದಂತೆ ಹಾಗೂ ಪಾಕ್‌ನ ಮೀಡಿಯಾ ಮೇಲೆ ತನ್ನ ನಿಂಯತ್ರಣ ಸಾಧಿಸೋ ಕೆಲಸ ಮಾಡ್ತಿದೆ ಅಂತ ಅಮೆರಿಕ ತನ್ನ ವರದಿಯಲ್ಲಿ ಹೇಳಿದೆ. ಜೊತೆಗೆ China-Pakistan Economic Corridor (CPEC) ರ್ಯಾಪಿಡ್‌ ರೆಸ್ಪಾನ್ಸ್‌ ಇನ್‌ಫಾರ್ಮೇಶನ್‌ ನೆಟ್‌ವರ್ಕ್‌ ಲಾಂಚ್‌ ಮಾಡಿರೊ ಪಾಕ್‌ ಹಾಗೂ ಚೀನಾ, China-Pakistan Media Corridor (CPMC) ಲಾಂಚ್‌ ಮಾಡೋಕೆ ಪ್ರತಿಜ್ಞೆ ಮಾಡಿವೆ ಅಂತ ವರದಿಯಲ್ಲಿ ಉಲ್ಲೇಖಿಸಿದೆ.

-masthmagaa.com

 

 

Contact Us for Advertisement

Leave a Reply