masthmagaa.com: ಸಂಸದ ಸ್ಥಾನದಿಂದ ಅನರ್ಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ ರೇವಣ್ಣಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿದೆ. ಇದ್ರಿಂದ ಪ್ರಜ್ವಲ್‌ಗೆ ರಿಲೀಫ್‌ ಸಿಕ್ಕಿದ್ದು, ಸಂಸದರಾಗಿ ಮುಂದುವರೆಯಲಿದ್ದಾರೆ. ಪ್ರಜ್ವಲ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ರು. ಇದೀಗ ಕೋರ್ಟ್‌ ಮಧ್ಯಂತರ ತಡೆ ನೀಡಿದೆ.   -masthmagaa.com Share on: WhatsAppContact Us for AdvertisementRead More →

masthmagaa.com: ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸೋಕೆ ದೇಶದ ವಿವಿಧ ರಾಜ್ಯಗಳಿಂದ ಮಾತ್ರವಲ್ದೇ ವಿದೇಶಗಳಿಂದಲೂ ಅರ್ಜಿ ಬಂದಿವೆ. ಈವರೆಗೆ 637 ಅರ್ಜಿಗಳು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಗೆ ತಲುಪಿವೆ. 9 ದಿನ ನಡೆಯುವ ದಸರಾ ಭಾಗವಾಗಿ ಅರಮನೆಯ ಮುಖ್ಯ ವೇದಿಕೆ ಸೇರಿದಂತೆ ನಗರದ 8 ಕಡೆ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ಕಛೇರಿ ಹಾಗೂ ನಾಟಕ ಪ್ರದರ್ಶನ ಇರುತ್ತದೆ. ಈ ಹಿನ್ನೆಲೆ ದೇಶ ವಿದೇಶಗಳಿಂದ ಅನೇಕ ಕಲಾವಿದರು ಅರ್ಜಿ ಸಲ್ಲಿಸುತ್ತಿದ್ದಾರೆ. ಪಂಜಾಬ್‌, ಅಸ್ಸಾಂ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಸೇರಿದಂತೆ ಕೆನಡಾ, ಅಮೆರಿಕಾ, ಬ್ರಿಟನ್‌ನಿಂದಲೂ ಕಲಾವಿದರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ ಅಂತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್‌ ತಿಳಿಸಿದ್ದಾರೆ. ಈ ವರ್ಷ ಅರ್ಜಿ ಆಹ್ವಾನಿಸುವ ಮುನ್ನವೇ 450 ಅರ್ಜಿಗಳು ಬಂದಿದ್ದವು. ಅರ್ಜಿ ಕರೆ ಮಾಡಿದ 4 ದಿನಕ್ಕೆ 200 ಅರ್ಜಿಗಳು ಬಂದಿವೆ. ಸೆಪ್ಟಂಬರ್‌ 25 ರಂದು ಅರ್ಜಿ ಸಲ್ಲಿಸೋಕೆ ಕೊನೆಯ ದಿನಾಂಕ. ಹೆಚ್ಚಿನ ಅರ್ಜಿಗಳು ಬರುವ ನಿರೀಕ್ಷೆಯಿದೆ ಅಂತRead More →

masthmagaa.com: ಪ್ರಸ್ತುತ AIADMK- ಬಿಜೆಪಿ ನಡುವೆ ಯಾವುದೇ ಮೈತ್ರಿ ಇಲ್ಲ ಅಂತ ತಮಿಳುನಾಡಿನ ಪ್ರತಿಪಕ್ಷ ಹೇಳಿದೆ. ನಾವು ಮೈತ್ರಿ ಬಗ್ಗೆ ಚುನಾವಣೆಗೂ ಮುನ್ನ ನಿರ್ಧಾರ ತೆಗೆದುಕೊಳ್ಳುತ್ತೇವೆ ಅಂತ ಹೇಳಿರುವ AIADMK ಹಿರಿಯ ನಾಯಕ ಡಿ ಜಯಕುಮಾರ್, ಅಣ್ಣಾಮಲೈ ವಿರುದ್ಧ ಹರಿಹಾಯ್ದಿದ್ದಾರೆ. ʻಅಣ್ಣಾಮಲೈ ಬಿಜೆಪಿ ರಾಜ್ಯ ಅಧ್ಯಕ್ಷರಾಗಿರಲು ಯೋಗ್ಯರಲ್ಲ. ತಮ್ಮನ್ನ ತಾವು ಬಿಂಬಿಸಿಕೊಳ್ಳುವ ಸಲುವಾಗಿಯಷ್ಟೇ ಅವರು ದಿವಂಗತ ನಾಯಕರ ಕುರಿತು ಕೆಟ್ಟದಾಗಿ ಮಾತನಾಡುತ್ತಾರೆ ಅಂತ ಆರೋಪಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಅಣ್ಣಾದೊರೈ ಅವರ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಮಾಡಿರುವ ಟೀಕೆಗೆ ಜಯಕುಮಾರ್‌ ಕಿಡಿಕಾರಿದ್ದಾರೆ. ಜೊತೆಗೆ ಬಿಜೆಪಿ ಕಾರ್ಯಕರ್ತರು ಬಯಸಿದ್ದರೂ, ಎಐಎಡಿಎಂಕೆ ಜತೆ ಮೈತ್ರಿ ಹೊಂದುವ ಬಯಕೆ ಅಣ್ಣಾಮಲೈಗೆ ಇಲ್ಲ. ಬಿಜೆಪಿಗೆ ಇಲ್ಲಿ ಹೆಜ್ಜೆ ಇಡೋದು ಸಾಧ್ಯವಿಲ್ಲ. ನಿಮ್ಮ ಮತ ಬ್ಯಾಂಕ್ ಯಾವುದು ಅಂತ ಗೊತ್ತಿದೆ. ನೀವು ನಮ್ಮ ಕಾರಣದಿಂದಾಗಿ ಇಲ್ಲಿ ಪರಿಚಿತರಾಗಿದ್ದೀರಿ ಅಂತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ಜೂನ್‌ ತಿಂಗಳಲ್ಲಿ ಜಯಲಲಿತಾ ಬಗ್ಗೆ ಅಣ್ಣಾಮಲೂ ನೀಡಿದ್ದ ಹೇಳಿಕೆ AIADMK ಕೆಂಗಣ್ಣಿಗೆ ಗುರಿಯಾಗಿತ್ತು. ತಮಿಳುನಾಡಿನಲ್ಲಿ ಬಿಜೆಪಿಗೆ ಏಕೈಕRead More →

masthmagaa.com: ಇಂದಿನಿಂದ 5 ದಿನಗಳ ವಿಶೇಷ ಸಂಸತ್‌ ಅಧಿವೇಶನ ಆರಂಭಗೊಂಡಿದೆ. ಹಳೆ ಸಂಸತ್‌ ಭವನದಲ್ಲಿ ಇಂದು ಕೊನೆಯ ಕಲಾಪ ನಡೆದಿದ್ದು, ಪ್ರಧಾನಿ ಮೋದಿ ತಮ್ಮ ಕೊನೆಯ ಭಾಷಣ ಮಾಡಿದ್ದಾರೆ. ಕಳೆದ 75 ವರ್ಷಗಳಲ್ಲಿ ಸಂಸತ್ತಿನಲ್ಲಿ ನಡೆದಿರುವ ಪ್ರಮುಖ ಘಟನೆಗಳನ್ನ ಮೋದಿ ನೆನಪಿಸಿಕೊಂಡಿದ್ದಾರೆ. ಜೊತೆಗೆ ಮಾಜಿ ಪ್ರಧಾನಿಗಳಾದ ಪಂಡಿತ್‌ ಜವಹರಲಾಲ್‌ ನೆಹರೂ, ಇಂದಿರಾ ಗಾಂಧಿ ಹಾಗೂ ಅಟಲ್‌ ಬಿಹಾರಿ ವಾಜಪೇಯಿ ಅವ್ರನ್ನ ಹಾಡಿ ಹೊಗಳಿದ್ದಾರೆ. ಇನ್ನು ಹಳೆ ಸಂಸತ್‌ ಭವನದ ಬಗ್ಗೆ ಮಾತಾಡಿರೊ ಮೋದಿ, ಈ ಕಟ್ಟಡವನ್ನ ನಿರ್ಮಿಸುವ ನಿರ್ಧಾರವನ್ನ ವಿದೇಶಿಯರು ತೆಗೆದುಕೊಂಡಿದ್ರು ಅನ್ನೊದು ನಿಜ. ಆದ್ರೆ ಈ ಭವನವನ್ನ ನಾವು ಎಂದಿಗೂ ಮರೆಯೋಕೆ ಸಾಧ್ಯವಿಲ್ಲ. ನಿರ್ಮಾಣಕ್ಕೆ ವ್ಯಯಿಸಲಾಗಿರುವ ಶ್ರಮ ಹಾಗೂ ಹಣ ನನ್ನ ದೇಶವಾಸಿಗಳದ್ದು ಅನ್ನೊದನ್ನ ಹೆಮ್ಮೆಯಿಂದ ಹೇಳಬಹುದು ಅಂತ ಹೇಳಿದ್ದಾರೆ. ಇದೇ ವೇಳೆ ಈ ಸಂಸತ್ತಿನಲ್ಲಿ ಜವಹರ್‌ ಲಾಲ್‌ ನೆಹರೂ ಅವ್ರ ಮಧ್ಯರಾತ್ರಿ ಭಾಷಣ ನಮಗೆ ಸ್ಪೂರ್ತಿ ನೀಡ್ತಾನೇ ಇರುತ್ತೆ. ಇದೇ ಸಂಸತ್ತಿನಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರ ʻಸರ್ಕಾರಗಳು ಬರುತ್ವೆ, ಹೋಗುತ್ವೆ. ಪಕ್ಷಗಳು ಸ್ಥಾಪನೆಯಾಗುತ್ವೆ ಹಾಗೆRead More →

masthmagaa.com: ಸೂರ್ಯನ ಬಾಹ್ಯ ವಾತಾವರಣ ಅಧ್ಯಯನಕ್ಕೆ ಕಳಿಸಿರೊ ಆದಿತ್ಯ ಎಲ್‌-1ಗೆ ಸಂಬಂಧಿಸಿದಂತೆ ಇಸ್ರೋ ಗಣೇಶ ಚತುರ್ಥಿಯಂದೇ ಗುಡ್‌ನ್ಯೂಸ್‌ ಕೊಟ್ಟಿದೆ. ಸೂರ್ಯ ಶಿಕಾರಿಗೆ ಹೊರಟಿರುವ ಆದಿತ್ಯ ಎಲ್‌-1 ನೌಕೆ ಈಗಾಗಲೇ ವೈಜ್ಞಾನಿಕ ಅಂಶಗಳನ್ನ ಸಂಗ್ರಹಿಸೋಕೆ ಶುರು ಮಾಡಿದೆ ಅಂತ ಇಸ್ರೋ ಮಾಹಿತಿಯನ್ನ ಹಂಚಿಕೊಂಡಿದೆ. ಭೂಮಿಯಿಂದ 50 ಸಾವಿರ ಕಿಲೋ ಮೀಟರ್‌ ಅಂತರದಲ್ಲಿರೊ ಸೂಪ್ರಾ ಥರ್ಮಲ್‌ ಅಂದ್ರೆ ಹೆಚ್ಚಿನ ಉಷ್ಣಾಂಶದ ಆಕ್ಟಿವಿಟಿಗಳು ಹಾಗೂ ಹೈ ಎನರ್ಜಿ ಹೊಂದಿರೊ ಐಯಾನ್‌ಗಳು ಮತ್ತು ಎಲೆಕ್ಟ್ರಾನ್‌ಗಳನ್ನ ನೌಕೆಯಲ್ಲಿರೊ STEPS ಉಪಕರಣಗಳ ಸೆನ್ಸರ್‌ಗಳು ಮೆಜರ್‌ ಮಾಡೋಕೆ ಶುರು ಮಾಡಿವೆ. ಈ ಡೇಟಾಗಳು ಭೂಮಿಯ ಸುತ್ತಮುತ್ತ ಇರುವ ಕಣಗಳ ನಡವಳಿಕೆಗಳನ್ನ ವಿಶ್ಲೇಷಿಸೋಕೆ ಸಹಾಯ ಆಗುತ್ತೆ ಅಂತ ಇಸ್ರೋ Xನಲ್ಲಿ ಮಾಹಿತಿ ಶೇರ್‌ ಮಾಡಿದೆ.   -masthmagaa.com Share on: WhatsAppContact Us for AdvertisementRead More →

masthmagaa.com: ಜಪಾನ್‌ನಲ್ಲಿ ವಯಸ್ಸಾದವ್ರ ಸಂಖ್ಯೆ ಹೆಚ್ಚಾಗಿರೋದು ಅಲ್ಲಿನ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. 10 ಜನರಲ್ಲಿ ಒಬ್ಬರು 80 ವರ್ಷ ಅಥ್ವಾ ಅದಕ್ಕಿಂತಲೂ ಹೆಚ್ಚಿಗೆ ವಯಸ್ಸಾದವ್ರಿದ್ದಾರೆ. ಹಾಗೇ ಜಾಪನ್‌ನ ಒಟ್ಟು ಜನಸಂಖ್ಯೆಯಲ್ಲಿ 10%ನಷ್ಟು 80 ಕ್ಕಿಂತಲೂ ಹೆಚ್ಚು ವಯಸ್ಸಾದ ಜನರಿದ್ದಾರೆ ಅಂತ ಜಪಾನ್‌ನ ಇಂಟರ್ನಲ್‌ ಅಫೇರ್ಸ್‌ ಮಿನಿಸ್ಟ್ರಿ ಹೇಳಿದೆ. ಈ ಡೇಟಾವನ್ನ ಜಪಾನ್‌ ಸರ್ಕಾರ ವಾರ್ಷಿಕವಾಗಿ Aged Day ಅಥ್ವಾ ವಯಸ್ಸಾದವ್ರ ದಿನದಂದು ರಿಲೀಸ್‌ ಮಾಡುತ್ತೆ. ಜಪಾನ್‌ನಲ್ಲಿ 65 ವರ್ಷಕ್ಕಿಂತಲೂ ವಯಸ್ಸಾದವ್ರ ಪ್ರಮಾಣ ಈ ವರ್ಷ 29.1%ಗೆ ಏರಿಕೆಯಾಗಿದೆ. ಕಡಿಮೆ ಜನನ ದರವನ್ನ ಹೊಂದಿರೊ ಜಪಾನ್‌, ವಿಶ್ವದ ಅತ್ಯಂತ ವಯಸ್ಸಾದ ದೇಶ ಅಂತ ಕರೆಸಿಕೊಂಡಿದೆ. ಒಟ್ಟು 12.44 ಕೋಟಿ ಜನಸಂಖ್ಯೆಯಲ್ಲಿ 1.26 ಕೋಟಿ ಜನ 80 ವರ್ಷ ವಯಸ್ಸಿಗಿಂತ ಅಧಿಕ ಇದ್ರೆ, 2 ಕೋಟಿ ಜನ 75 ವರ್ಷಕ್ಕಿಂತ ಅಧಿಕ ವಯಸ್ಸಿನವರಿದ್ದಾರೆ ಅಂತ ಡೇಟಾ ರಿವೀಲ್‌ ಮಾಡಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ರಷ್ಯಾ ವಿರುದ್ಧ ಬಿರುಸಿನ ಪ್ರತಿದಾಳಿ ಮಾಡ್ತಿರೊ ಯುಕ್ರೇನ್‌, ಬಖ್ಮುತ್‌ ಪ್ರಾಂತ್ಯದ Klishchiivka ನಗರವನ್ನ ಮರು ವಶಪಡಿಸಿಕೊಂಡಿರೋದಾಗಿ ತಿಳಿಸಿದೆ. ಈ ಕುರಿತು ಯುಕ್ರೇನ್‌ನ ಮಿಲಿಟರಿ ಗ್ರೌಂಡ್‌ ಪಡೆಯ ಕಮಾಂಡರ್‌ ಒಲೆಕ್ಸಾಂಡ್ರ ಸಿರ್‌ಸ್ಕಿ ಮಾಹಿತಿ ನೀಡಿದ್ದಾರೆ. ಈ ವಿಜಯವನ್ನ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಪ್ರಶಂಸಿಸಿದ್ದಾರೆ. ತಮ್ಮ ಯೋಧರಿಗೆ ವೆಲ್‌ಡನ್‌ ಅಂತ ಹೇಳಿದ್ದು, ಯುಕ್ರೇನ್‌ ಪ್ರತಿದಾಳಿಗೆ ಹೊಸ ಯೋಜನೆಗಳನ್ನ ಹಾಕಿಕೊಳ್ತಿದೆ ಅಂತ ಹೇಳಿದ್ದಾರೆ. ಅಂದ್ಹಾಗೆ Klishchiivka ನಗರವನ್ನ ರಷ್ಯಾ ಇದೇ ವರ್ಷ ಜನವರಿಯಲ್ಲಿ ವಶಪಡಿಸಿಕೊಂಡಿತ್ತು. ಬಖ್ಮುತ್‌ ನಗರದ ದಕ್ಷಿಣ ಭಾಗದಲ್ಲಿರೊ ಈ ನಗರ ಯುದ್ಧ ತಂತ್ರದ ಪ್ರಮುಖ ಕೇಂದ್ರವಾಗಿತ್ತು. ಇದೀಗ ಈ ನಗರವನ್ನ ಯುಕ್ರೇನ್‌ ಮರು ವಶಪಡಿಸಿಕೊಂಡಿದ್ದು, ಈ ಪ್ರದೇಶದಲ್ಲಿ ರಷ್ಯಾಗೆ ಹಿನ್ನಡೆಯಾಗಿದೆ.   -masthmagaa.com Share on: WhatsAppContact Us for AdvertisementRead More →

masthmagaa.com: ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅವರ ಭವಿಷ್ಯಕ್ಕೆ ಹೆಲ್ಪ್‌ ಆಗುವ ಸಿಲಾಬಸ್‌ ಇಡಲಾಗುತ್ತೆ. ಆದ್ರೆ ಚೀನಾದ ಯುನಿವರ್ಸಿಟಿಗಳಲ್ಲಿನ ವಿದ್ಯಾರ್ಥಿಗಳಿಗೆ ಸ್ಪೈಗಳನ್ನ ಹೇಗೆ ಕ್ಯಾಚ್‌ ಮಾಡ್ಬೇಕು ಅನ್ನೊ ಸಿಲಾಬಸ್‌ ಇಡಲಾಗಿದೆ. ಮೇ ನಲ್ಲಿ ನಡೆದ ನ್ಯಾಷನಲ್‌ ಸೆಕ್ಯುರಿಟಿ ಕೌನ್ಸಿಲ್‌ ಸಭೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌, ಕೆಲ ಎಕ್ಸ್‌ಟ್ರೀಮ್‌ ಸನ್ನಿವೇಶಗಳಲ್ಲಿ ಯಾವ ರೀತಿ ಥಿಂಕ್‌ ಮಾಡ್ಬೇಕು ಹಾಗೂ ಅದರ ಇಂಪಾರ್ಟನ್ಸ್‌ ಏನು ಅನ್ನೊ ವಿಷಯದ ಕುರಿತು ಒತ್ತಿ ಹೇಳಿದ್ರು. ಅದರ ಬೆನ್ನಲ್ಲೇ ಚೀನಾ ಆಂಟಿ-ಸ್ಪೈ ಕಾನೂನನ್ನ ಪಾಸ್‌ ಮಾಡಿದೆ. ಹೀಗಾಗಿ ಚೀನಾದ ಯುನಿವರ್ಸಿಟಿಗಳಲ್ಲೂ ಸ್ಪೈ ಬಗ್ಗೆ ಸಿಲಾಬಸ್‌ಗಳು, ಪ್ರದರ್ಶನಗಳು, ಗೇಮ್‌ಗಳನ್ನ‌ ಹಾಗೂ ಕ್ರ್ಯಾಶ್‌ ಕೋರ್ಸ್‌ಗಳನ್ನ ಆಯೋಜಿಸಲಾಗ್ತಿದೆ. ಬೀಜಿಂಗ್‌ ಯುನಿವರ್ಸಿಟಿ ಆಫ್‌ ಟೆಕ್ನಾಲಜಿಯಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಪಟ್ಟ ಗಾರ್ಡನ್‌ ಪಾರ್ಟಿಯನ್ನ ಪ್ರದರ್ಶಿಸಲಾಗಿದೆ. ಇತ್ತ ಚೀನಾದ ಸರ್ಕಾರಿ ಮಾಲೀಕತ್ವದ ಸಿಂಗ್ವಾ ಯುನಿವರ್ಸಿಟಿಯಲ್ಲಿ, ವಿದೇಶಿ ಶಕ್ತಿಗಳ ವಿರುದ್ಧ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೇಗೆ ರಕ್ಷಣೆ ಕೊಡಬೇಕು ಅನ್ನೊ ಕುರಿತು ವಿಡಿಯೋಗಳನ್ನ ತೋರಿಸಲಾಗಿದೆ. ಇನ್ನೊಂದ್‌ ಕಡೆ ಬೀಹಾಂಗ್‌ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳಿಗೆ ‘Who’s The Spy’ ಅಂದ್ರೆ ಗೂಢಚಾರRead More →

masthmagaa.com: ಹಿಂದೂ ಮಹಾಸಾಗರ ಹಾಗೂ ಇಂಡೊ-ಪೆಸಿಫಿಕ್‌ ರೀಜನ್‌ನಲ್ಲಿ ಚೀನಾ ತನ್ನ ಪ್ರಭಾವ ಹೆಚ್ಚಿಸೋಕೆ ಪ್ರಯತ್ನ ಪಡ್ತಿರೋದು ಎಲ್ಲರಿಗೂ ತಿಳಿದಿರೊ ವಿಷಯ. ಇದೀಗ ಈ ಪ್ರದೇಶದಲ್ಲಿ ಚೀನಾವನ್ನ ಎದುರಿಸೋಕೆ ಭಾರತ ತನ್ನದೇ ಆದ ಸ್ಟ್ರಾಟಜಿಕ್‌ ಪ್ಲಾನ್‌ ಹಾಕಿಕೊಂಡಿದೆ. ಇದರ ಭಾಗವಾಗಿ 2035ರ ವೇಳೆಗೆ 175 ಯುದ್ಧ ನೌಕೆಗಳನ್ನ ಹೊಂದೋಕೆ ಮುಂದಾಗಿದೆ. ಪ್ರಸ್ತುತ ಭಾರತೀಯ ನೌಕಾಪಡೆ 68 ಯುದ್ಧ ನೌಕೆಗಳನ್ನ ಹೊಂದಿದ್ದು, ಉಳಿದ ಯುದ್ಧ ನೌಕೆಗಳನ್ನ ತಯಾರಿಸಲು ಆರ್ಡರ್‌ ಕೊಡಲಾಗಿದೆ. ಈ ಮೂಲಕ ಹಿಂದೂ ಮಹಾಸಾಗರದಲ್ಲಿ ತನ್ನ ಹಿತಾಸಕ್ತಿ ಸುರಕ್ಷಿಸಿಕೊಳ್ಳೊಕೆ ಹಾಗೂ ಚೀನಾವನ್ನ ಸಮರ್ಥವಾಗಿ ಫೇಸ್‌ ಮಾಡೋಕೆ ಭಾರತ 2 ಲಕ್ಷ ಕೋಟಿ ರೂಪಾಯಿ ಪ್ರಾಜೆಕ್ಟ್‌ ಹಾಕಿಕೊಂಡಿದೆ. ಇನ್ನು 2035ರ ವೇಳೆಗೆ 200 ಆಗಿಲ್ಲ ಅಂದ್ರೂ ಕನಿಷ್ಠ 175 ಯುದ್ಧ ನೌಕೆಗಳನ್ನ ಹೊಂದುವುದು ಭಾರತದ ಗುರಿಯಾಗಿದೆ. ಹಿಂದೂ ಮಹಾಸಾಗರ ಹಾಗೂ ಅದರಾಚೆಗೆ ನಮ್ಮ ಮೊಬಿಲಿಟಿ ಅಥ್ವಾ ಚಲನವಲನಗಳನ್ನ ಹೆಚ್ಚಿಸೋದು ಇಂಪಾರ್ಟೆಂಟ್‌ ಆಗಿದೆ. ಯುದ್ಧ ನೌಕೆಗಳ ಜೊತೆಗೆ ಫೈಟರ್‌ ಜೆಟ್‌, ವಿಮಾನ, ಹೆಲಿಕಾಪ್ಟರ್‌ಗಳು ಹಾಗೂ ಡ್ರೋನ್‌ಗಳ ಸಂಖ್ಯೆಯನ್ನ ಕೂಡ ಹೆಚ್ಚಿಸಾಗುವುದು ಅಂತ ಅಧಿಕಾರಿಗಳುRead More →

masthmagaa.com: ಉದಯನಿಧಿ ಸ್ಟಾಲಿನ್‌ ಅವರ ಸನಾತನ ಧರ್ಮದ ನಿರ್ಮೂಲನೆ ಹೇಳಿಕೆ ವಿವಾದ ಸಂಬಂಧ ಕೇಂದ್ರ ಸಚಿವರೊಬ್ಬರು ವಿವಾದಾಸ್ಪದ ಹೇಳಿಕೆ ಕೊಟ್ಟಿದ್ದಾರೆ. ಸನಾತನ ಧರ್ಮದ ವಿರುದ್ಧ ಮಾತನಾಡಿದ್ರೆ, ಅಂಥವರ ನಾಲಿಗೆ ಸೀಳಿ ಬಿಡುತ್ತೇವೆ. ಜೊತೆಗೆ ಯಾರಾದ್ರು ನಮ್ಮ ಧರ್ಮವನ್ನ ತಿರಸ್ಕಾರ ಮನೋಭಾವದಿಂದ ನೋಡಿದ್ರೆ ಅವರ ಕಣ್ಣು ಕೀಳುತ್ತೇವೆ ಅಂತ ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಹೇಳಿಕೆ ಕೊಟ್ಟಿದ್ದಾರೆ. ರಾಜಸ್ಥಾನದ ಚುನಾವಣಾ ರ್ಯಾಲಿಯೊಂದ್ರಲ್ಲಿ ಈ ರೀತಿ ಹೇಳಿದ್ದಾರೆ. ಇತ್ತ ಸನಾತನ ಧರ್ಮದ ವಿರುದ್ಧ ಹೋರಾಡುವುದಕ್ಕಾಗಿಯೇ ಪ್ರತಿಪಕ್ಷಗಳ ಮೈತ್ರಿಕೂಟ ʻಇಂಡಿಯಾʼ ಅಸ್ತಿತ್ವಕ್ಕೆ ಬಂದಿದೆ ಅಂತ ತಮಿಳುನಾಡು ಉನ್ನತ ಶಿಕ್ಷಣ ಸಚಿವ ಕೆ.ಪೊನ್ಮುಡಿ ಹೇಳಿದ್ದಾರೆ. ಈ ಮೂಲಕ ಮತ್ತೊಂದು ಸುತ್ತಿನ ವಿವಾದಕ್ಕೆ ನಾಂದಿ ಹಾಡಿದ್ದಾರೆ. ನಮ್ಮ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಮೈತ್ರಿಕೂಟದ 26 ಪಕ್ಷಗಳು ಸನಾತನ ಧರ್ಮದ ವಿರುದ್ಧದ ಹೋರಾಟದಲ್ಲಿ ಒಂದಾಗಿವೆ. ಆದರೆ ಅದಕ್ಕೆ ರಾಜಕೀಯ ಶಕ್ತಿ ಕೂಡ ಬೇಕಾಗಿದೆ ಅಂತ ಪೊನ್ಮುಡಿ ಹೇಳಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. -masthmagaa.com Share on: WhatsAppContact Us for AdvertisementRead More →