ಒಂದ್‌ ಹೆಜ್ಜೆ ಮುಂದಿಟ್ಟ ಆದಿತ್ಯ-ಎಲ್‌ 1: ಸೌರ ಮಾರುತ ಬಗ್ಗೆ ಅಧ್ಯಯನ ಶುರು

masthmagaa.com

ಭಾರತದ ಮಹತ್ವದ ಮಿಷನ್‌ ಆದಿತ್ಯ-ಎಲ್‌ 1 ಇದೀಗ ಒಂದ್‌ ಹೆಜ್ಜೆ ಮುಂದೆ ಇಟ್ಟು, ಸೋಲಾರ್‌ ವಿಂಡ್ಸ್‌ ಅಬ್ಸರ್ವೇಷನ್‌ ಪ್ರಾರಂಭ ಮಾಡಿದೆ. ಅಂದ್ರೆ ಸೌರ ಮಾರುತಗಳನ್ನ ವೀಕ್ಷಣೆ ಮಾಡೋದನ್ನ ಶುರು ಹಚ್ಕೊಂಡಿದೆ. ಈ ಬೆಳವಣಿಗೆ ಬಗ್ಗೆ ISRO ಮಾಹಿತಿ ನೀಡಿದೆ. ಸ್ಯಾಟ್‌ಲೈಟ್‌ನಲ್ಲಿರೋ Solar wind Particle Experiment (ASPEX) ಪೇಲೋಡ್‌ ತನ್ನ ಕಾರ್ಯಾಚರಣೆ ಪ್ರಾರಂಭಿಸಿದ್ದು, ಸಹಜವಾಗೇ ಪರ್ಫಾಮ್‌ ಮಾಡ್ತಿದೆ ಅಂತ ಹೇಳಿದೆ. ಅಂದ್ಹಾಗೆ ಈ ASPEX, Ion Spectrometer (SWIS) ಮತ್ತು STEPS (SupraThermal and Energetic Particle Spectrometer) ಅನ್ನೋ ಎರಡು ಉಪಕರಣಗಳನ್ನ ಒಳಗೊಂಡಿದೆ. STEPS ಸೆಪ್ಟೆಂಬರ್‌ 10 ರಂದು ತನ್ನ ಕೆಲಸ ಶುರು ಮಾಡಿಕೊಂಡಿದ್ರೆ, SWIS ಉಪಕರಣ ಇಂದು ಅಂದ್ರೆ ಡಿಸೆಂಬರ್‌ 2ಕ್ಕೆ ಆಕ್ಟಿವೇಟ್‌ ಆಗಿದ್ದು, ಚೆನ್ನಾಗಿ ಪರ್ಫಾಮ್‌ ಮಾಡ್ತಿದೆ ಅಂತ ISRO ತಿಳಿಸಿದೆ. ಈ ಕುರಿತು ಒಂದು ಫೋಟೋವನ್ನ ಕೂಡ ISRO ತನ್ನ ಆಫಿಶಿಯಲ್‌ `X’ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದೆ. ಅಂದ್ಹಾಗೆ ಆದಿತ್ಯ ಎಲ್‌-1 ಮಿಷನ್‌ ಸೆಪ್ಟೆಂಬರ್‌ 2 ರಂದು ಲಾಂಚ್‌ ಆಗಿತ್ತು. ಸೂರ್ಯನ ಕುರಿತು ಅಧ್ಯಯನ ನಡೆಸೋದು ಈ ಮಿಷನ್‌ನ ಮಹತ್ವದ ಗುರಿಯಾಗಿದೆ. ಜನವರಿ 7, 2024ರ ವೇಳೆಗೆ ಸ್ಯಾಟ್‌ಲೈಟ್ ಲಾಗ್ರೇಂಜಿಯನ್ ಪಾಯಿಂಟ್ ಎಲ್‌1ನ ಉದ್ದೇಶಿತ ಕಕ್ಷೆಯನ್ನು ಸೇರಿಕೊಳ್ಳಲಿದೆ ಅಂತ ನಿರೀಕ್ಷಿಸಲಾಗಿದೆ

-masthmagaa.com

Contact Us for Advertisement

Leave a Reply