ಲೇಡಿಸ್‌ ಫಿಯರ್‌: 55 ವರ್ಷಗಳ ಕಾಲ 4 ಗೋಡೆಗಳ ನಡುವೆ ಸೆರೆವಾಸ! ಇದೆಂಥ ಭಯ?

masthmagaa.com:

ಮನುಷ್ಯನಾದವನಿಗೆ ಒಂದಲ್ಲ ಒಂದು ರೀತಿಯ ಭಯ ಇರೋದು ಸಹಜ. ಆದ್ರೆ ಇಲ್ಲೊಬ್ಬ ವ್ಯಕ್ತಿಗೆ ಮಹಿಳೆಯರಂದ್ರೆ ಭಯ. ಈ ಭಯದಿಂದ ಈತ 55 ವರ್ಷಗಳ ಕಾಲ ಮನೆಯಿಂದ ಹೊರಗೆ ಬರಲೇ ಇಲ್ಲ. ಆಫ್ರಿಕಾದ ರುವಾಂಡಾ ದೇಶದಲ್ಲಿ ವಾಸಿಸುತ್ತಿರೋ ಈತನ ಹೆಸರು ಕಲಿಟೆಕ್ಸ್‌ ನ್ಯಾಮ್ವಿಟಾ. 71 ವಯಸ್ಸಿನ ಈತ, ತನಗೆ 16 ವರ್ಷ ಇರೋವಾಗ ಮಹಿಳೆಯರ ಸಹವಾಸ ತಪ್ಪಿಸಲು ಮನೆ ಬೀಗ ಹಾಕಿಕೊಂಡಿದ್ದನಂತೆ. ಅಂದಿನಿಂದ ಇವತ್ತಿನವರೆಗೂ ತನ್ನ ಅಕ್ಕಪಕ್ಕದವರ ಸಹಕಾರದಿಂದ 4 ಗೋಡೆಗಳ ಮಧ್ಯೆ ಜೀವನ ಸಾಗಿಸ್ತಾ ಇದ್ದಾನೆ. ಈ ಭಯಕ್ಕೆ ಕಾರಣ, ಇವನನ್ನ ಕಾಡ್ತಾ ಇರೋ ʻಗೈನೋಫೋಬಿಯಾʼ ಕಾಯಿಲೆ. ಈ ಕಾಯಿಲೆಯಿಂದ ಬಳಲುತ್ತಿರೋರು, ತಮಗೆ ವಿರುದ್ಧವಾದ ಲಿಂಗದವರನ್ನ ಕಂಡಾಗ, ಅವರ ಬಗ್ಗೆ ಯೋಚಿಸಿದಾಗ ಭಯ ಪಡುತ್ತಾರೆ ಅಂತ ಅಂತರಾಷ್ಟ್ರೀಯ ವರದಿ ತಿಳಿಸಿದೆ.

-masthmagaa.com

Contact Us for Advertisement

Leave a Reply