ತೀವ್ರ ಸ್ವರೂಪ ಪಡೀತಿರೋ ಇಸ್ರೇಲ್‌-ಹಮಾಸ್‌ ಯುದ್ಧ! ಒಂದೇ ದಿನಕ್ಕೆ 178 ಮಂದಿ ಸಾವು

masthmagaa.com:

ಇಸ್ರೇಲ್‌-ಹಮಾಸ್‌ ನಡುವಿನ ಕದನವಿರಾಮ ಕೊನೆಗೊಂಡಿದ್ದು, ಸಂಘರ್ಷ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಡಿಸೆಂಬರ್‌ 1 ರಿಂದ ಪ್ರಾರಂಭವಾಗಿದ್ದು, ಕೇವಲ 24 ಗಂಟೆಯಲ್ಲಿ ಕನಿಷ್ಠ 178 ಪ್ಯಾಲೆಸ್ತೀನಿಯನ್ನರು ಮೃತಪಟ್ಟು, 589 ಮಂದಿ ಗಾಯಗೊಂಡಿದ್ದಾರೆ ಅಂತ ಪ್ಯಾಲೆಸ್ತೀನ್‌ ಆರೋಗ್ಯ ಸಚಿವಾಲಯ ವರದಿ ಮಾಡಿದೆ. ಜೊತೆಗೆ 200ಕ್ಕೂ ಹೆಚ್ಚು ಹಮಾಸ್‌ ಟಾರ್ಗೆಟ್‌ಗಳ ಮೇಲೆ ಇಸ್ರೇಲ್‌ ದಾಳಿ ನಡೆಸಿರೋದಾಗಿ ಹೇಳಿಕೊಂಡಿದೆ. ಅಂದ್ಹಾಗೆ ಇಸ್ರೇಲ್‌ ಸೇನಾ ಪಡೆಗಳು ಕದನ ವಿರಾಮ ಎಂಡ್‌ ಆಗಿದ್ದೇ ತಡ, ಗಾಜಾದಲ್ಲಿ ತೀವ್ರವಾದ ಏರ್‌ಸ್ಟ್ರೈಕ್ಸ್‌ ನಡೆಸ್ತಿವೆ. ಗಾಜಾದ ಯಾವುದೇ ಪ್ರದೇಶ ಈ ಟೈಮಲ್ಲಿ ಸೇಫ್‌ ಇಲ್ಲ ಅಂತ ಹೇಳಲಾಗ್ತಿದೆ. ಯಾಕಂದ್ರೆ ಗಾಜಾದ ಉತ್ತರ ಮತ್ತು ದಕ್ಷಿಣ ಎರಡೂ ಭಾಗಗಳಲ್ಲಿ ಇಸ್ರೇಲ್‌ ದಾಳಿ ನಡೆಸ್ತಿದೆ. ಇಸ್ರೇಲ್‌ ನಡೆಸ್ತಿರೋ ತೀವ್ರ ದಾಳಿಯಿಂದ ಕೇವಲ ಉತ್ತರ ಭಾಗವಲ್ದೇ ಇದೀಗ ಗಾಜಾದ ದಕ್ಷಿಣ ಭಾಗ ಕೂಡ ಯುದ್ಧ ವಲಯವಾಗಿ ಬದಲಾಗ್ತಿದೆ. ಪ್ರಮುಖವಾಗಿ ದಕ್ಷಿಣ ಭಾಗದಲ್ಲಿರೋ ಖಾನ್‌ ಯುನೀಸ್‌ ಸಿಟಿಯಲ್ಲಿ ಯುದ್ಧದ ಕಾವು ಜಾಸ್ತಿಯಾಗ್ತಿದೆ. ಅಲ್ಲಿರೋ ಪ್ಯಾಲೆಸ್ತೀನರು ತಮ್ಮ ಸೇಫ್ಟಿಗಾಗಿ ಆ ಭಾಗವನ್ನ ಬಿಟ್ಟು ಇನ್ನಷ್ಟು ದಕ್ಷಿಣ ಕಡೆಗೆ, ಅಂದ್ರೆ ಗಾಜಾದ ರಫಾ ಜಿಲ್ಲೆಗೆ ಹೋಗಿ ಸೇರ್ಕೊಳ್ಳಿ ಅಂತ ಇಸ್ರೇಲ್‌ ಪಡೆಗಳು ಪತ್ರವನ್ನ ಹೆಲಿಕಾಪ್ಟರ್‌ ಮೂಲಕ ಹರಿಬಿಟ್ಟು ತಿಳಿಸಿದ್ದಾರೆ. ಅಂದ್ಹಾಗೆ ರಫಾ ಜಿಲ್ಲೆ ಕೂಡ ಇತ್ತೀಚೆಗಷ್ಟೇ ಇಸ್ರೇಲ್‌ ಪಡೆಗಳಿಂದ ತೀವ್ರ ದಾಳಿಗೆ ಒಳಗಾಗಿತ್ತು. ಹೀಗಾಗಿ ಅಲ್ಲಿನ ಜನರಿಗೆ ಸೇಫ್ಟಿಗಾಗಿ ಯಾವ ಕಡೆ ಹೋದ್ರೆ ಒಳ್ಳೇದು ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ. ಯಾಕಂದ್ರೆ ಗಾಜಾದ ಆಲ್ಮೋಸ್ಟ್‌ ಎಲ್ಲಾ ಭಾಗಗಳಲ್ಲಿಯೂ ಇಸ್ರೇಲ್‌ ಏರ್‌ಸ್ಟ್ರೈಕ್‌ ನಡೆಸ್ತಿದೆ. ಇನ್ನು ಅಮೆರಿಕ ಇಸ್ರೇಲ್‌ಗೆ 100 ಬಂಕರ್‌ ಬಾಂಬ್‌ಗಳನ್ನ ಕಳಿಸಿದೆ ಅಂತ ಅಮೆರಿಕದ ವಾಲ್‌ ಸ್ಟ್ರೀಟ್‌ ಜರ್ನಲ್‌ ರಿವೀಲ್‌ ಮಾಡಿದೆ. ಈ ವಿಚಾರ ಇದೀಗ ಸಾಕಷ್ಟು ಟೀಕೆಗಳಿಗೂ ಗುರಿಯಾಗ್ತಿದೆ.

ಇತ್ತ ಇಸ್ರೇಲ್‌-ಹಮಾಸ್‌ ಕದನ ವಿರಾಮ ಎಂಡ್‌ ಆಗಿ ಮತ್ತೊಮ್ಮೆ ಯುದ್ಧ ಶುರುವಾಗಿರೋ ಬಗ್ಗೆ ಮಾತನಾಡಿರೋ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಥನಿ ಬ್ಲಿಂಕನ್‌, ಹಮಾಸ್‌ ವಿರುದ್ಧ ಆರೋಪ ಮಾಡಿದ್ದಾರೆ. ಗಾಜಾದಲ್ಲಿ ಕದನ ವಿರಾಮ ನಿಂತ್ಹೋಗೋಕೆ ಹಮಾಸ್‌ ಕಾರಣ ಅಂತ ಹೇಳಿದ್ದಾರೆ. ದುಬೈನಲ್ಲಿ ನಡೀತಿರೋ COP28 ಶೃಂಗಸಭೆಯಲ್ಲಿ ಸೈಡ್‌ಲೈನಲ್ಲಿ ಮಾತನಾಡಿದ ಬ್ಲಿಂಕನ್, ʻಇಸ್ರೇಲ್‌ ಒತ್ತೆಯಾಳುಗಳ ವಿಚಾರವಾಗಿ ಮಾಡಿದ ಒಪ್ಪಂದವನ್ನ ಹಮಾಸ್‌ ಸರಿಯಾಗಿ ಫಾಲೋ ಮಾಡಲಿಲ್ಲ. ಗಾಜಾದಲ್ಲಿ ಕದನ ವಿರಾಮ ಮುಗಿಯೋಕು ಮುಂಚೆ ಹಮಾಸ್‌, ಜೆರುಸೆಲಂ ಮೇಲೆ ತೀವ್ರ ದಾಳಿ ನಡೆಸೋಕೆ ಶುರು ಮಾಡಿತ್ತು. ಜೊತೆಗೆ ಇಸ್ರೇಲ್‌ ಒಳಗೆ ರಾಕೆಟ್‌ಗಳನ್ನ ಕೂಡ ಹಾರಿಸಿದ್ದಾರೆ. ಇಸ್ರೇಲ್‌-ಹಮಾಸ್‌ ಕದನ ವಿರಾಮ ನಿಂತ್ಹೋಗೋಕೆ ಹಮಾಸ್‌ ಉಗ್ರ ಸಂಘಟನೆಯೇ ಕಾರಣ ಅಂತ ನೇರವಾಗಿ ಆರೋಪಿಸಿದ್ದಾರೆ. ಇನ್ನು ಇದೇ ವೇಳೆ, ಇಸ್ರೇಲ್‌, ಈಜಿಪ್ಟ್‌ ಮತ್ತು ಕತಾರ್‌ ಜೊತೆ ಕೈಜೋಡಿಸಿ, ಮತ್ತೊಮ್ಮೆ ಕದನ ವಿರಾಮಕ್ಕಾಗಿ ಶ್ರಮಿಸ್ತೀವಿ, ಟ್ರೈ ಮಾಡ್ತೀವಿ ಅಂತಾನೂ ಹೇಳಿದ್ದಾರೆ. ಅಂದ್ಹಾಗೆ ಇಸ್ರೇಲ್‌ ಕೂಡ ಗಾಜಾ ಕದನ ವಿರಾಮ ಸಡನ್‌ ಆಗಿ ಮುಕ್ತಾಯವಾಗೋಕೆ ಹಮಾಸೇ ಕಾರಣ ಅಂತ ಡಿಸೆಂಬರ್‌ 1 ರಂದು ಆರೋಪ ಮಾಡಿತ್ತು.

ಇನ್ನು ಇಸ್ರೇಲ್‌-ಹಮಾಸ್‌ ಯುದ್ಧ ಮತ್ತೇ ಶುರುವಾದ ಬೆನ್ನಲ್ಲೇ, ಪ್ಯಾಲೆಸ್ತೀನ್‌ ಪರ ಪ್ರತಿಭಟನಾಕಾರನೊಬ್ಬ ಅಮೆರಿಕದ ಇಸ್ರೇಲ್‌ ರಾಯಭಾರ ಕಚೇರಿ ಮುಂದೆ ತನಗೆ ತಾನೇ ಬೆಂಕಿ ಹಚ್ಕೊಂಡಿರೋ ಘಟನೆ ನಡೆದಿದೆ. ಈ ಘಟನೆ ಡಿಸೆಂಬರ್‌ 1 ರಂದು ನಡೆದಿದ್ದು, ಪ್ರತಿಭಟನಾಕಾರನ ಕಂಡೀಷನ್‌ ಬಹಳ ಕ್ರಿಟಿಕಲ್‌ ಆಗಿದೆ ಅಂತ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಅಂದ್ಹಾಗೇ ಇಸ್ರೇಲ್‌ ರಾಯಭಾರ ಕಚೇರಿ ಮುಂದೆ ಪ್ಯಾಲೆಸ್ತೀನ್‌ ಫ್ಲ್ಯಾಗ್‌ ಹಿಡಿದು ಪ್ರತಿಭಟನೆ ನಡಸ್ತಿದ್ದ ಈತ, ಪೆಟ್ರೋಲ್‌ ಸುರಿದುಕೊಂಡು ತನಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ. ಈ ಟೈಮ್‌ಲ್ಲಿ ಇದನ್ನ ತಡೆಯೋಕೆ ಹೋದ ಸೆಕ್ಯುರಿಟಿ ಗಾರ್ಡ್‌ಗೆ ಗಾಯಗಳಾಗಿರೋದು ವರದಿಯಾಗಿದೆ.

-masthmagaa.com

 

Contact Us for Advertisement

Leave a Reply