ಮಿಚಾಂಗ್ ಸೈಕ್ಲೋನ್ ಆರ್ಭಟ: ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಭಾರಿ ಮಳೆ ಸೂಚನೆ

masthmagaa.com:

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡ ಮಾರುತದಿಂದಾಗಿ ತಮಿಳುನಾಡಿನ ಉತ್ತರ ಕರಾವಳಿ ಹಾಗೂ ಆಂಧ್ರ ಪ್ರದೇಶದ ದಕ್ಷಿಣ ಕರಾವಳಿಯಲ್ಲಿ ಡಿಸೆಂಬರ 3 ರಿಂದ ಎರಡು ದಿನಗಳ ಕಾಲ ಗಾಳಿ ಸಹಿತ ಮಳೆಯಾಗುವ ನಿರೀಕ್ಷೆಯಿದೆ ಅಂತ ಹವಾಮಾನ ಇಲಾಖೆ ಹೇಳಿದೆ. ಬಂಗಾಳಕೊಲ್ಲಿಯಲ್ಲಿ ಎದ್ದಿರೊ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ ಅಂತ ವಿಶಾಖ ಪಟ್ಟಣಂ ಸೈಕ್ಲೋನ್‌ ವಾರ್ನಿಂಗ್‌ ಸೆಂಟರ್‌ನ ಪ್ರಧಾನ ವ್ಯವಸ್ಥಾಪಕಿ ಸುನಂದಾ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಶುಕ್ರವಾರ ಬೆಳಿಗ್ಗೆ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯ ಕ್ಯಾಬಿನೆಟ್‌ ಕಾರ್ಯದರ್ಶಿ ರಾಜೀವ್‌ ಗೌಬಾ ನೇತೃತ್ವದಲ್ಲಿ ಆಂಧ್ರ, ತಮಿಳುನಾಡು ಕರಾವಳಿಗಳಲ್ಲಿ ಮುಂಬರುವ ಚಂಡಮಾರುತಗಳನ್ನ ಎದುರಿಸಲು ರಾಜ್ಯ‌ ‌‌‍ಮತ್ತು ಕೇಂದ್ರದ ಸನ್ನದ್ದತೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಇನ್ನೂ ತಮಿಳುನಾಡು, ಆಂಧ್ರ, ಒಡಿಶಾ, ಪುದುಚೇರಿಗಳಲ್ಲಿ 18 NDRF ತಂಡಗಳ ಜೊತೆಗೆ ಹೆಚ್ಚುವರಿಯಾಗಿ 10 ತಂಡಗಳನ್ನ ಚಂಡಮಾರುತ ಬಿಕ್ಕಟ್ಟನ್ನ ಎದುರಿಸಲು ನಿಯೋಜಿಸಲಾಗಿದೆ ಅಂತ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply