ವಿ‍ಶ್ವದ ಶಕ್ತಿಶಾಲಿ ರಾಕೆಟ್‌ ಎರಡನೇ ಪರೀಕ್ಷೆ: ಅರ್ಧ ಸಕ್ಸಸ್‌

masthmagaa.com:
ಎಲಾನ್‌ ಮಸ್ಕ್‌ ಒಡೆತನದ ಬಾಹ್ಯಾಕಾಶ ಕಂಪನಿ ಸ್ಪೇಸ್‌X ತನ್ನ ದೈತ್ಯ ರಾಕೆಟ್‌ ʻಸ್ಟಾರ್‌ ಶಿಪ್‌ʼನ ಎರಡನೇ ಪರೀಕ್ಷೆಯನ್ನ ನಿನ್ನೆ ನಡೆಸಿದೆ. ಟೆಕ್ಸಾಸ್‌ ಬಳಿಯ ʻಬೊಕಾ ಚೀಕʼನಲ್ಲಿನ ಮಸ್ಕ್‌ ಒಡೆತನದ ʻಸ್ಟಾರ್‌ಬೇಸ್‌ʼ ಲಾಂಚಿಂಗ್‌ ಸೈಟ್‌ನಿಂದ ಈ ರಾಕೆಟ್‌ ಉಡಾವಣೆ ಮಾಡಲಾಗಿತ್ತು. ಆದ್ರೆ ಲಾಂಚ್‌ ಆದ 10 ನಿಮಿಷಗಳಲ್ಲಿ ರಾಕೆಟ್‌ನ ಎರಡನೇ ಹಂತ ಅಂದ್ರೆ ಅದರ ಬೂಸ್ಟರ್‌ ಸ್ಪೋಟಗೊಂಡಿದೆ. ಬೂಸ್ಟರ್‌ ಹಾಗೂ ಸ್ಪೇಸ್‌ಕ್ರಾಫ್ಟ್‌ ಸಪರೇಟ್‌ ಆದ ನಂತರ ಬೂಸ್ಟರ್‌ ಬ್ಲಾಸ್ಟ್‌ ಆಗಿರೋದ್ರಿಂದ, ಸ್ಪೇಸ್‌ಕ್ರಾಫ್ಟ್‌ ತನ್ನ ಜರ್ನಿ ಮುಂದುವರೆಸಿ ಬಾಹ್ಯಾಕಾಶ ತಲುಪಿದೆ. ಅಂದ್ಹಾಗೆ 71 ಮೀಟರ್‌ ಎತ್ತರದ ಈ ದೈತ್ಯ ಬೂಸ್ಟರ್‌ 33 ರ‍್ಯಾಪ್ಟರ್‌ ಇಂಜಿನ್‌ಗಳ ಸಹಾಯದಿಂದ ಹಾರಿತ್ತು. ಬರೋಬ್ಬರಿ 3,400 ಟನ್‌ ತೂಕದ ಈ ಬೂಸ್ಟರ್‌ ಲಾಂಚ್‌ ನಂತರ ವಾಪಾಸ್‌ ಭೂಮಿಗೆ ಬಂದು ಸಮುದ್ರದ ಮೇಲೆ ಇರಿಸಲಾಗೊ ಡ್ರೋನ್‌ಶಿಪ್‌ ಮೇಲೆ ಲ್ಯಾಂಡ್ ಆಗ್ಬೇಕಿತ್ತು. ಯಾಕಂದ್ರೆ ಈ ಮಿಷನ್‌ನ ಉದ್ದೇಶವೇ ಮರುಬಳಕೆ ರಾಕೆಟ್‌ಗಳನ್ನ ಉಪಯೋಗಿಸಿ ಬಾಹ್ಯಾಕಾಶ ಹಾಗೂ ಬೇರೆ ಗ್ರಹಗಳಿಗೆ ಹಾರೋದು. ಸದ್ಯಕ್ಕೆ ಈ ಹಾರಾಟವನ್ನು ಸಕ್ಸಸ್‌ ಅಂತ ಸ್ಪೇಸ್‌X ಹೇಳಿದೆ. ಈ ಬಗ್ಗೆ ನಾಸಾ ಹೇಳಿಕೆ ನೀಡಿ ʻಇದೊಂದು ಡೇರಿಂಗ್‌ ಇನೋವೇಶನ್‌, ಬಹಳ ವಿಷಯಗಳನ್ನ ಕಲಿತು ಮತ್ತೊಮ್ಮೆ ಹಾರೋಕೆ ಈ ಪ್ರಯತ್ನ ಒಳ್ಳೆ ಅವಕಾಶ ನೀಡಿದೆ ಅಂತ ನಾಸಾ ಹೇಳಿದೆ.
ಅಂದ್ಹಾಗೆ ಸ್ಟಾರ್‌ಶಿಪ್‌ ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್‌ ಆಗಿದ್ದು, ಅಮೆರಿಕದ ಆರ್ಟಿಮಿಸ್‌ ಯೋಜನೆಯಲ್ಲಿ ಲೂನಾರ್‌ ಗೇಟ್‌ವೇ, ಅಂದ್ರೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಥರ ಚಂದ್ರನ ನಿಲ್ದಾಣದಿಂದ ಚಂದ್ರನ ಮೇಲೆ ಇಳಿಯೋಕೆ ಇದೇ ರಾಕೆಟ್‌ನ ವೇರಿಯಂಟ್‌ನ ಬಳಸಲಾಗುತ್ತೆ.
-masthmagaa.com

Contact Us for Advertisement

Leave a Reply