ಉ.ಕೊರಿಯಾಗೆ ದ.ಕೊರಿಯಾ ಟಕ್ಕರ್!‌ ಸ್ಪೈ ಸ್ಯಾಟ್‌ಲೈಟ್‌ ಯಶಸ್ವಿ ಲಾಂಚ್!

masthmagaa.com:

ಉತ್ತರ ಕೊರಿಯಾದ ಬೆದರಿಕೆಗಳ ಮಧ್ಯೆ ಅದಕ್ಕೆ ಟಕ್ಕರ್‌ ಕೊಡೊ ರೀತಿ ದಕ್ಷಿಣ ಕೊರಿಯಾ ಕೂಡ ತನ್ನ ಮೊದಲ ಸ್ಪೈ ಸ್ಯಾಟ್‌ಲೈಟ್‌ನ್ನ ಯಶಸ್ವಿಯಾಗಿ ಲಾಂಚ್‌ ಮಾಡಿದೆ. ಎಲಾನ್‌ ಮಸ್ಕ್‌ರ ಸ್ಪೇಸ್‌ X ರಾಕೆಟ್‌ ಫಾಲ್ಕನ್‌ 9, ಕ್ಯಾಲಿಫೋರ್ನಿಯಾದಲ್ಲಿರೊ ಅಮೆರಿಕದ ಸ್ಪೇಸ್‌ ಫೋರ್ಸ್‌ ನೆಲೆಯಿಂದ ಉಡಾವಣೆ ಮಾಡಿದೆ. ಸ್ಯಾಟ್‌ಲೈಟ್‌ ನಿಗದಿತ ಕಕ್ಷೆಯನ್ನ ಸೇರಿದ್ದು, ಗ್ರೌಂಡ್‌ ಕಂಟ್ರೋಲ್‌ನಿಂದ ಯಶಸ್ವಿಯಾಗಿ ಕಮ್ಯುನಿಕೇಶನ್‌ ಉಂಟಾಗಿದೆ ಅಂತ ಅಲ್ಲಿನ ಯೋನಾಪ್‌ ಮಾಧ್ಯಮ ಸಂಸ್ಥೆ ವರದಿ ಮಾಡಿದೆ. ಈ ಮೂಲಕ ದಕ್ಷಿಣ ಕೊರಿಯಾ ಸ್ಥಳೀಯವಾಗಿ ನಿರ್ಮಿಸಿದ ಗೂಢಚಾರ ಉಪಗ್ರಹವನ್ನ ಹೊಂದುವಲ್ಲಿ ಯಶಸ್ವಿಯಾಗಿದ್ದು, ಪರಮಾಣು ಶಸ್ತ್ರಸಜ್ಜಿತ ಉತ್ತರ ಕೊರಿಯಾವನ್ನ ಮಾನಿಟರ್‌ ಮಾಡೋಕೆ ರೆಡಿಯಾಗಿದೆ. ಮೊದಲ ಲಾಂಚ್‌ ಯಶಸ್ವಿಯಾದ ಬೆನ್ನಲ್ಲೇ ಹೆಚ್ಚುವರಿಯಾಗಿ 4 ಗೂಢಚಾರ ಉಪಗ್ರಹಗಳನ್ನ 2025ರ ಅಂತ್ಯಕ್ಕೆ ಲಾಂಚ್‌ ಮಾಡೋದಾಗಿ ದಕ್ಷಿಣ ಕೊರಿಯಾ ಹೇಳಿದೆ. ಇನ್ನು ಭೂಮಿಯಿಂದ 400 ರಿಂದ 600 ಕಿಲೋ ಮೀಟರ್‌ ಮಧ್ಯದ ಕಕ್ಷೆಯಲ್ಲಿರೊ ಸ್ಯಾಟ್‌ಲೈಟ್‌ ಭೂಮಿಯ ಮೇಲೆ 30 ಸೆಂಟಿ ಮೀಟರ್‌ನಷ್ಟು ಚಿಕ್ಕದಾಗಿರೊ ವಸ್ತುಗಳನ್ನ ಪತ್ತೆ ಮಾಡುವ ಸಾಮರ್ಥ್ಯವನ್ನ ಹೊಂದಿದೆ. ಈ ಮೂಲಕ ಉಪಗ್ರಹದ ರೆಸಲ್ಯುಶನ್‌ ಹಾಗೂ ಭೂಮಿಯನ್ನ ವೀಕ್ಷಿಸುವ ಸಾಮರ್ಥ್ಯದಲ್ಲಿ ನಮ್ಮ ಸ್ಯಾಟ್‌ಲೈಟ್‌ ಜಾಗತಿಕವಾಗಿ 5ನೇ ಸ್ಥಾನದಲ್ಲಿದೆ ಅಂತ ದಕ್ಷಿಣ ಕೊರಿಯಾದ ರಕ್ಷಣಾ ಸಚಿವಾಲಯ ಹೇಳಿದೆ. ಅಂದ್ಹಾಗೆ ಕಳೆದ ವಾರ ಉತ್ತರ ಕೊರಿಯಾ ಕೂಡ ತನ್ನ ಮೊದಲ ಗೂಢಚಾರ ಉಪಗ್ರಹವನ್ನ ಹಾರಿಸಿತ್ತು. ಇದೀಗ ದಕ್ಷಿಣ ಕೊರಿಯಾ ಕೂಡ ಉತ್ತರ ಕೊರಿಯಾದ ಹಾದಿಯನ್ನೇ ಹಿಡಿದಿದ್ದು, ಇದಕ್ಕೆ ಕಿಮ್‌ ಸರ್ಕಾರ ಹೇಗೆ ಪ್ರತಿಕ್ರಿಯೆ ನೀಡಲಿದೆ ಅಂತ ಕಾದು ನೋಡಬೇಕು.

-masthmagaa.com

Contact Us for Advertisement

Leave a Reply