ಲಂಡನ್‌ನಲ್ಲಿ ಮಿಸ್‌ ಆಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಮರಳಿ ಸಿಕ್ಕಿದ್ದು ಶವವಾಗಿ!

masthmagaa.com:

ನವೆಂಬರ್‌ 17ರಂದು ಲಂಡನ್‌ನಲ್ಲಿ ನಾಪತ್ತೆಯಾಗಿದ್ದ 23 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬ ಥೇಮ್ಸ್‌ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮೃತ ವಿದ್ಯಾರ್ಥಿಯನ್ನ ಮಿತ್‌ಕುಮಾರ್‌ ಅಂತ ಗುರುತಿಸಲಾಗಿದ್ದು, ಉನ್ನತ ಶಿಕ್ಷಣಕ್ಕಾಗಿ ಆತ ಲಂಡನ್‌ಗೆ ಕಳೆದ ವರ್ಷ ಬಂದಿದ್ದ ಅಂತ ಗೊತ್ತಾಗಿದೆ. ಥೇಮ್ಸ್‌ ನದಿ ಬಳಿಯ ಕ್ಯಾನರಿ ವಾರ್ಪ್‌ ಪ್ರದೇಶದಲ್ಲಿ ಅಲ್ಲಿನ ಪೋಲಿಸರು ಆತನ ಶವವನ್ನ ನವೆಂಬರ್‌ 21ರಂದು ಪತ್ತೆಹಚ್ಚಿ, ಮೃತಪಟ್ಟಿದ್ದಾನೆಂದು ಧೃಡಿಕರಿಸಿದ್ದಾರೆ. ಇದೀಗ ಆತನ ಗುರುತು ಪತ್ತೆಯಾಗಿದ್ದು, ಇದು ಅನುಮಾನಸ್ಪದ ಸಾವಲ್ಲ ಅಂತ ಹೇಳಿದ್ದಾರೆ

-masthmagaa.com

Contact Us for Advertisement

Leave a Reply