ಕೊರೋನಾ..ಚೀನಾ ವಿಲವಿಲ..ಲಸಿಕೆ ಹಾಕಲು ಪಾಕ್ ತಂತ್ರ!

masthmagaa.com:

ಕೊರೋನಾದ ತವರು ಚೀನಾದಲ್ಲಿ ಡೆಲ್ಟಾ ಹಾವಳಿ ಜಾಸ್ತಿಯಾಗ್ತಾನೇ ಇದೆ. ಕಳೆದ 24 ಗಂಟೆಗಳಲ್ಲಿ 124 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದ್ರಲ್ಲಿ ದೇಶದೊಳಗಿನ 80 ಮಂದಿಗೆ ಕೊರೋನಾ ಬಂದಿದ್ರೆ, ವಿದೇಶದಿಂದ ಬಂದ 44 ಮಂದಿ ಕೂಡ ಸೇರಿದ್ದಾರೆ. ಆದ್ರೆ ಕೊರೋನಾ ಸಂಬಂಧ ಒಂದೇ ಒಂದು ಸಾವು ಸಂಭವಿಸಿಲ್ಲ ಅಂತ ಚೀನಾ ನ್ಯಾಷನಲ್ ಹೆಲ್ತ್ ಕಮಿಷನ್ ಹೇಳಿದೆ.

ಇನ್ನು ಆಸ್ಟ್ರೇಲಿಯಾದಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್ ಮಾಡಿದ್ರೂ ಕೊರೋನಾ ಜಾಸ್ತಿಯಾಗ್ತಾನೇ ಇದೆ. ಸಿಡ್ನಿ ಕಳೆದ 6 ವಾರಗಳಿಂದ ಲಾಕ್​ಡೌನ್ ಆಗಿದ್ರೂ ಕೊರೋನಾ ಕಡಿಮೆಯಾಗ್ತಿಲ್ಲ. ಕಳೆದ 24 ಗಂಟೆಗಳಲ್ಲಿ ಇಲ್ಲಿ 279 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ವಿಕ್ಟೋರಿಯಾದಲ್ಲಿ ಒಂದು ವಾರ ಲಾಕ್​ಡೌನ್ ಘೋಷಿಸಲಾಗಿದ್ದು, ಮೊದಲ ದಿನವೆ 6 ಮಂದಿಯಲ್ಲಿ ಕೊರೋನಾ ಬಂದಿದೆ. ಈ ನಡುವೆ ಡೆಲ್ಟಾ 135 ದೇಶಗಳಿಗೆ ಕಾಲಿಟ್ಟಾಗಿದೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಇನ್ನು ಕೊರೋನಾ ಲಸಿಕೆ ಬಗ್ಗೆ ಮಾತನಾಡಿರೋ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​​​​​​, ಈ ವರ್ಷಾಂತ್ಯದೊಳಗೆ 200 ಕೋಟಿ ಡೋಸ್ ಲಸಿಕೆ ಉತ್ಪಾದನೆ ಮಾಡೋಕೆ ಟ್ರೈ ಮಾಡ್ತೀವಿ. ವಿಶ್ವ ಆರೋಗ್ಯ ಸಂಸ್ಥೆಯ ಕೋವ್ಯಾಕ್ಸ್ ಕಾರ್ಯಕ್ರಮದಡಿಯಲ್ಲಿ 10 ಕೋಟಿ ಡೋಸ್ ಲಸಿಕೆ ಬಡದೇಶಗಳಿಗೆ ಫ್ರೀಯಾಗಿ ಕೊಡ್ತೀವಿ ಅಂತ ಘೋಷಿಸಿದ್ದಾರೆ.

ಆದ್ರೆ ಈ ಲಸಿಕೆ ಮತ್ತು ಪಾಕಿಸ್ತಾನಿಗಳಿಗೆ ಆಗಿಬರಲ್ಲ. ಹೀಗಾಗಿ ಇಲ್ಲಿನ ಜನ ಲಸಿಕೆ ಹಾಕಿಸಿಕೊಳ್ಳಲು ಮುಂದಾಗ್ತಿಲ್ಲ. ಹೀಗಾಗಿ ಇಮ್ರಾನ್ ಖಾನ್ ಸರ್ಕಾರ ಲಸಿಕೆ ಹಾಕಲು ಹೊಸ ಐಡಿಯಾ ಮಾಡಿದೆ. ಲಸಿಕೆ ಹಾಕಿಸಿಕೊಳ್ಳದಿದ್ರೆ ಮೊಬೈಲ್ ಬ್ಲಾಕ್ ಮಾಡ್ತೀವಿ, ಸರ್ಕಾರಿ ಕಚೇರಿಗಳಿಗೆ, ರೆಸ್ಟೋರಂಟ್​ಗಳಿಗೆ, ಶಾಪಿಂಗ್ ಮಾಲ್ ಮತ್ತು ಸರ್ಕಾರಿ ಸಾರಿಗೆಯಲ್ಲಿ ಪ್ರವೇಶ ಕಲ್ಪಿಸಲ್ಲ ಅಂತ ಘೋಷಿಸಿದೆ. ಇದ್ರ ಬೆನ್ನಲ್ಲೇ ದೇಶದಾದ್ಯಂತ ಲಸಿಕೆ ಕೇಂದ್ರಗಳಲ್ಲಿ ಉದ್ದುದ್ದ ಕ್ಯೂ ಕಂಡು ಬರುತ್ತಿದೆ. ಸಾವಿರಾರು ಜನ ಕಾದು ಕಾದು ಲಸಿಕೆ ಹಾಕಿಸಿಕೊಳ್ತಿದ್ಧಾರೆ. ಈ ನಿರ್ಬಂಧಗಳ ಪೈಕಿ ಕೆಲವೊಂದು ಆಗಸ್ಟ್​ 1ರಿಂದಲೇ ಶುರುವಾಗಿದ್ದು, ಉಳಿದವರು ಆಗಸ್ಟ್ 30ರಿಂದ ಅಸ್ತಿತ್ವಕ್ಕೆ ಬರಲಿವೆ.

-masthmagaa.com

Contact Us for Advertisement

Leave a Reply