ಬಲೂಚಿಗಳ ಹೋರಾಟಕ್ಕೆ ಬೆದರಿತಾ ಚೀನಾ?

masthmagaa.com:

ಪಾಕಿಸ್ತಾನದ ಬಲೂಚಿಸ್ತಾನದ ಬಂಡುಕೋರರು ಸಿಪೆಕ್ ಅಂದ್ರೆ ಚೀನಾ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ವಿರುದ್ಧದ ಹೋರಾಟದಲ್ಲಿ ಜಯಗಳಿಸಿದ್ದಾರೆ. ಗ್ವಾದರ್ ಬಂದರು ಕೇಂದ್ರೀಕರಿಸಿ ನಡೆಯುತ್ತಿದ್ದ ಈ ಯೋಜನೆ ಗುರಿಯಾಗಿಸಿ ನಿರಂತರವಾಗಿ ಬಂಡುಕೋರರು ದಾಳಿ ನಡೆಸ್ತಲೇ ಇದ್ರು. ಹೀಗೇ ಮುಂದುವರಿದ್ರೆ ಮುಂದಿನ ದಿನಗಳಲ್ಲಿ ಕಷ್ಟವಿದೆ ಅಂತ ಬೆದರಿದ ಚೀನಾ, ತನ್ನ ಸಿಪೆಕ್ ಯೋಜನೆಯನ್ನು ಗ್ವಾದರ್ ಬಂದರಿನಿಂದ ಬೇರೆ ಕಡೆಗೆ ಶಿಫ್ಟ್ ಮಾಡಲು ನಿರ್ಧರಿಸಿದೆ. ಗ್ವಾದರ್ ಬದಲು ಕರಾಚಿಯಲ್ಲಿ ತನ್ನ ಯೋಜನೆ ಮುಂದುವರಿಸಲು ಚೀನಾ ಮತ್ತು ಪಾಕಿಸ್ತಾನ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಕರಾಚಿ ಸಿಂಧ್ ಪ್ರಾಂತ್ಯದ ರಾಜಧಾನಿಯಾಗಿದ್ದು, ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಿದೆ. ಈ ಯೋಜನೆಗೆ ಚೀನಾ 350 ಕೋಟಿ ಡಾಲರ್ ದುಡ್ಡು ಖರ್ಚು ಮಾಡಲಿದೆ. ಕರಾಚಿ ಬಂದರು ವಿಸ್ತರಣೆ, ಮೀನುಗಾರಿಕೆ, 640 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಾರ ವಲಯ ಸ್ಥಾಪನೆ ಕೂಡ ಈ ಯೋಜನೆಯಲ್ಲಿ ಸೇರಿದೆ. ಕರಾಚಿಯನ್ನು ಸಿಪೆಕ್ ಯೋಜನೆಗೆ ಸೇರಿಸಿರೋದು ಗೇಮ್ ಚೇಂಜರ್ ಆಗಲಿದೆ ಅಂತ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಆದ್ರೆ ಈ ಯೋಜನೆಗಾಗಿ ಕರಾಚಿಯ 5 ಲಕ್ಷ ಮಂದಿಯನ್ನು ಸ್ಥಳಾಂತರ ಮಾಡ್ಬೇಕಾಗುತ್ತೆ. ಅಂದಹಾಗೆ ಇವೆಲ್ಲವೂ ಚೀನಾ ತನ್ನ ವ್ಯಾಪಾರ ಜಾಲವನ್ನು ವಿಸ್ತರಿಸಲು ಮಾಡ್ತಿರೋ ಒನ್ ಬೆಲ್ಟ್​​​ ರೋಡ್ ಇನಿಶಿಯೇಟಿವ್​​ನ ಭಾಗವಾಗಿದೆ. ಆದ್ರೆ ಕೆಲ ಮಾಧ್ಯಮಗಳು ಗ್ವಾದರ್​​​ನಲ್ಲೂ ಚೀನಾ ಸಿಪೆಕ್ ಯೋಜನೆ ಮುಂದುವರಿಸುತ್ತೆ. ಅಲ್ಲಿ ಕ್ಯಾನ್ಸಲ್ ಮಾಡಿ ಇಲ್ಲಿ ಮಾಡ್ತಿರೋದಲ್ಲ.. ಎರಡೂ ಬಂದರುಗಳನ್ನು ಸಿಪೆಕ್ ಅಡಿಯಲ್ಲಿ ಅಭಿವೃದ್ಧಿಪಡಿಸುತ್ತೆ ಅಂತ ವರದಿ ಮಾಡಿವೆ.

-masthmagaa.com

Contact Us for Advertisement

Leave a Reply