ತೈವಾನ್ ಜಲಸಂಧಿಯಲ್ಲಿ ಹಾದುಹೋದ ಅಮೆರಿಕ-ಕೆನಡಾ ಯುದ್ಧನೌಕೆ!

masthmagaa.com:

ಅಮೆರಿಕ ಮತ್ತು ಕೆನಡಾದ ಯುದ್ಧನೌಕೆಗಳು ಕಳೆದ ವಾರ ತೈವಾನ್ ಜಲಸಂಧಿ ಮೂಲಕ ಹಾದು ಹೋಗಿವೆ ಅಂತ ವರದಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಮೆರಿಕ ನೌಕಾಪಡೆ, ಗುರುವಾರ ನಮ್ಮ ಯುಎಸ್​ಎಸ್​ ಡೆವೇಯ್​​​​ ಮತ್ತು ಶುಕ್ರವಾರ ಕೆನಡಾದ ಹೆಚ್​ಎಂಸಿಎಸ್​ ವಿನ್ನಿಪೆಗ್​ ನೌಕೆ ಈ ತೈವಾನ್, ಚೀನಾ ನಡುವೆ ಹಾದು ಹೋಗಿದೆ ಅಂತ ತಿಳಿಸಿದೆ. ಚೀನಾ ಮತ್ತು ತೈವಾನ್ ನಡುವೆ ಸಂಘರ್ಷ ತಾರಕಕ್ಕೇರಿರೋ ನಡುವೆಯೇ ಅಮೆರಿಕ ಮತ್ತು ಕೆನಡಾದ ಈ ನಡೆ ಸಾಕಷ್ಟು ಚಿಂತೆಗೆ ಕಾರಣವಾಗಿದೆ. ಯಾಕಂದ್ರೆ ತೈವಾನ್ ನಂದೇ ಅಂತ ಹೇಳ್ಕೊಂಡು ಬಂದಿರೋ ಚೀನಾ, ಅಕ್ಟೋಬರ್ 1ರಂದು ನ್ಯಾಷನಲ್ ಡೇ ಆದ್ಮೇಲಂತೂ ಪುಂಡತನ ಜಾಸ್ತಿ ಮಾಡ್ಕೊಂಡಿದೆ. ಅಕ್ಟೋಬರ್ 1ರಿಂದ ನಂತರದ ನಾಲ್ಕು ದಿನಗಳ ಅವಧಿಯಲ್ಲಿ ನೂರೈವತ್ತು ಯುದ್ಧ ವಿಮಾನಗಳನ್ನು ತೈವಾನ್​ನ ಏರ್​ ಡಿಫೆನ್ಸ್ ಝೋನ್​​ಗೆ ಕಳುಹಿಸಿತ್ತು.

-masthmagaa.com

Contact Us for Advertisement

Leave a Reply