ಚೀನಾದಲ್ಲಿ ಮಾಲ್​, ಮನೆ ಬಂದ್! ಬ್ರಿಟನ್​ನಲ್ಲಿ ನಾಯಿಗೆ ಕೊರೋನಾ!

masthmagaa.com:

ಚೀನಾದಲ್ಲಿ ಕೊರೋನಾ ದಿನೇ ದಿನೇ ಜಾಸ್ತಿಯಾಗ್ತಿದೆ. ಹೀಗಾಗಿ ರಾಜಧಾನಿ ಬೀಜಿಂಗ್​​ನಲ್ಲಿ ಅಧಿಕಾರಿಗಳು ಮಾಲ್ ಮತ್ತು ಹಲವು ವಸತಿ ಕಟ್ಟಡಗಳನ್ನು ಬಂದ್ ಮಾಡಿದ್ದಾರೆ. ಅಂದಹಾಗೆ ಕಳೆದ 24 ಗಂಟೆಗಳಲ್ಲಿ ಚೀನಾದಲ್ಲಿ 62 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದೆ.

ಫ್ರಾನ್ಸ್​​ನಲ್ಲಿ ಕೊರೋನಾದ ಐದನೇ ಅಲೆ ಶುರುವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಒಲಿವರ್ ವೆರೆನ್​, ಕೊರೋನಾ ಫುಲ್ ಮುಗಿದೋಯ್ತು ಅಂತ ಅನ್ಕೊಂಡಿದ್ದವರಿಗೆ ಬೇಸರದ ವಿಚಾರ.. ಯಾಕಂದ್ರೆ ಕೊರೋನಾ 5ನೇ ಅಲೆ ಶುರುವಾಗಿದೆ. ಅಕ್ಟೋಬರ್ ಮಧ್ಯಭಾಗದಿಂದ ನಿರಂತರವಾಗಿ ಕೊರೋನಾ ದಿನೇ ದಿನೇ ಜಾಸ್ತಿಯಾಗ್ತಿದೆ ಅಂತ ಹೇಳಿದ್ದಾರೆ. ಕಳೆದ 24 ಗಂಟೆಗಳಲ್ಲಿ 12 ಸಾವಿರ ಜನರಿಗೆ ಸೋಂಕು ತಗುಲಿದೆ.

ಯುನೈಟೆಡ್ ಕಿಂಗ್​​ಡಮ್​​ನಲ್ಲಿ ನಾಯಿಯೊಂದಕ್ಕೆ ಕೊರೋನಾ ಬಂದಿದೆ. ಈ ಹಿಂದೆ ಮನೆ ಮಾಲೀಕರಿಗೆ ಕೊರೋನಾ ಬಂದಿತ್ತು. ಅವರಿಂದಲೇ ಈ ನಾಯಿಗೂ ಕೊರೋನಾ ಅಂಟಿರಬಹುದು ಅಂತ ಅಂದಾಜಿಸಲಾಗಿದೆ. ಸದ್ಯ ನಾಯಿ ಮನೆಯಲ್ಲೇ ಇದ್ದುಕೊಂಡು ಚೇತರಿಸಿಕೊಳ್ತಿದೆ. ಆದ್ರೆ ನಾಯಿಯಿಂದ ಬೇರೆ ಯಾರಿಗಾದ್ರೂ, ಅಥವಾ ಬೇರೆ ಪ್ರಾಣಿಗಳಿಗೆ ಕೊರೋನಾ ಹರಡಿದ್ಯಾ ಅನ್ನೋ ಬಗ್ಗೆ ದಾಖಲೆಗಳಿಲ್ಲ ಅಂತ ಯುನೈಟೆಡ್​ ಕಿಂಗ್​ಡಮ್​​ನ ಮುಖ್ಯ ಪಶು ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply