ರಷ್ಯಾಗೆ ಚೀನಾದಿಂದ ಮಿಲಿಟರಿ ಉಪಕರಣ ಪೂರೈಕೆ ಆಗ್ತಿದೆ: ಫ್ರಾನ್ಸ್‌

masthmagaa.com:

ಯುಕ್ರೇನ್‌ ಮೇಲೆ ಆಕ್ರಮಣ ಮಾಡಿರುವ ರಷ್ಯಾಗೆ ಚೀನಾ ಮಿಲಿಟರಿ ಉಪಕರಣಗಳನ್ನ ಕೊಡ್ತಿದೆ ಅಂತ ಫ್ರಾನ್ಸ್‌ ಆರೋಪಿಸಿದೆ. ಈ ಯುದ್ಧದಲ್ಲಿ ಚೀನಾ, ರಷ್ಯಾ ಪರವಾಗಿದೆ ಹಾಗೂ ಶಸ್ತ್ರಾಸ್ತ್ರಗಳನ್ನ ನೀಡ್ತಿದೆ ಅನ್ನೋದಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳ ಬಳಿ ಯಾವುದೇ ಎವಿಡೆನ್ಸ್‌ ಇಲ್ಲ. ಆದ್ರೆ ಚೀನಾ ಯಾರಿಗೂ ಗೊತ್ತಾಗದ ಹಾಗೇ ಕೆಲವು ಮಿಲಿಟರಿ ಉಪಕರಣಗಳನ್ನ ಪೂರೈಸುತ್ತಿದೆ ಅನ್ನೋ ಸೂಚನೆಗಳಿವೆ ಅಂತ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್‌ ಅವ್ರ ರಾಜತಾಂತ್ರಿಕ ಟೀಂನ ಮುಖ್ಯಸ್ಥ ಎಮ್ಯಾನುಯೆಲ್ ಬೊನ್ನೆ ಹೇಳಿದ್ದಾರೆ. ಇದೇ ವೇಳೆ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ನೀಡ್ತಿಲ್ಲ, ಬದ್ಲಾಗಿ ಹೆಲ್ಮೆಟ್‌ ಹಾಗೂ ರಕ್ಷಣಾ ಕವಚಗಳನ್ನ ಕೊಡ್ತಿದಾರೆ ಅನ್ನೋ ಮಾಹಿತಿಯಿದೆ ಅಂತ ಬೊನ್ನೆ ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ನ್ಯಾಷನಲ್‌ ಸೆಕ್ಯುರಿಟಿ ಕೌನ್ಸಲ್‌ ವಕ್ತಾರ, ಯುಕ್ರೇನ್‌ ಯುದ್ಧದಲ್ಲಿ ಬಳಸಲು ಚೀನಾದಿಂದ ರಷ್ಯಾಗೆ ಯಾವುದೇ ಪರಿಣಾಮಕಾರಿ ಶಸ್ತ್ರಾಸ್ತ್ರ ಪೂರೈಕೆ ಆಗಿರೋದು ಕಂಡು ಬಂದಿಲ್ಲ. ಆದ್ರೆ ನಾವು ಈ ಬಗ್ಗೆ ಜಾಗರೂಕತೆ ಹಾಗೂ ಎಚ್ಚರಿಕೆಯಿಂದ ಮಾನಿಟರ್‌ ಮಾಡ್ತಿದಿವಿ ಅಂತ ಹೇಳಿದ್ದಾರೆ. ಜೊತೆಗೆ ಚೀನಾ ಆಗ್ಲಿ ಅಥ್ವಾ ಜಗತ್ತಿನಾದ್ಯಂತ ರಷ್ಯಾಗೆ ಬೆಂಬಲ ನೀಡುವ ಕಂಪನಿಗಳ ವಿರುದ್ಧ ನಾವು ಕ್ರಮ ಕೈಗೊಳ್ಳೋದನ್ನ ಕಂಟಿನ್ಯೂ ಮಾಡ್ತೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply