ವುಹಾನ್​​​ನ ಎಲ್ಲರಿಗೂ ಕೊರೋನಾ ಪರೀಕ್ಷೆ! ಯಾಕೆ ಗೊತ್ತಾ?

masthmagaa.com:

ಚೀನಾದಲ್ಲಿ ಹುಟ್ಟಿದ ಕೊರೋನಾ ಈಗ ಡೆಲ್ಟಾ ವೇಷ ಹಾಕಿಕೊಂಡು ಮತ್ತೆ ತನ್ನ ತವರಿಗೇ ಹೋಗಿ ಹಾವಳಿ ಶುರು ಹಚ್ಕೊಂಡಿದೆ. ಹಾವಳಿ ಅಂದ್ಕೂಡ್ಲೆ ಏನ್ ಸಾವಿರಾರು ಕೇಸ್ ಪತ್ತೆಯಾಗಿಲ್ಲ. ಚೀನಾ ಸರ್ಕಾರ ಕೊಟ್ಟಿರೋ ಅಧಿಕೃತ ಲೆಕ್ಕದ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 90 ಮಂದಿಗೆ ಕೊರೋನಾ ಬಂದೆ. ಇವುಗಳ ಪೈಕಿ ಹೆಚ್ಚಿನವು ಡೆಲ್ಟಾ ವೈರಾಣೇ ಆಗಿದೆ. ಆದ್ರೆ ಒಂದೇ ಒಂದು ಸಾವು ಸಂಭವಿಸಿಲ್ಲ. ದೇಶದ 27 ಸಿಟಿಗಳಲ್ಲಿ ಈಗ ಕೊರೋನಾ ಕೇಸ್​​ಗಳು ಪತ್ತೆಯಾಗೋಕೆ ಶುರುವಾಗಿದೆ. ಅದ್ರಲ್ಲೂ ಕೊರೋನಾ ಮೊದಲು ಪತ್ತೆಯಾಗಿದ್ದ ವುಹಾನ್​ನಲ್ಲಿ ಒಂದು ವರ್ಷದ ಬಳಿಕ ಮೊದಲ ಬಾರಿಗೆ ಕೊರೋನಾ ಪತ್ತೆಯಾಗಿದೆ. ಹೀಗಾಗಿ ಇಡೀ ವುಹಾನ್​​ನಲ್ಲಿರೋ ಎಲ್ಲಾ ಜನರನ್ನೂ ಪರೀಕ್ಷೆಗೆ ಒಳಪಡಿಸಲು ಸ್ಥಳೀಯ ಆಡಳಿತ ಪ್ಲಾನ್ ಮಾಡಿದೆ. ರಾಜಧಾನಿ ಬೀಜಿಂಗ್ ಸೇರಿದಂತೆ ಪ್ರಮುಖ ಪ್ರಾಂತ್ಯಗಳಲ್ಲಿ ಜಾಸ್ತಿ ಜಾಸ್ತಿ ಟೆಸ್ಟ್ ಮಾಡ್ತಿದ್ದು, ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕಟ್ಟುನಿಟ್ಟಿನ ಕ್ವಾರಂಟೈನ್​​ಗೆ ಒಳಪಡಿಲಾಗ್ತಿದೆ. ಲೇಟೆಸ್ಟ್​ ಬೆಳವಣಿಗೆಯಲ್ಲಿ ಯಾಂಗ್​​ಝೌ ಪ್ರಾಂತೀಯ ಸರ್ಕಾರ ಕೂಡ ಜನರು ಮನೆಯಿಂದ ಹೊರಗೆ ಬಾರದಂತೆ ನಿರ್ಬಂಧ ವಿಧಿಸಿದೆ. ಇದ್ರಿಂದ ಈ ಭಾಗದ 13 ಲಕ್ಷ ಜನ ಮನೆಯಲ್ಲೇ ಬಂಧಿಯಾಗಿದ್ದಾರೆ. ಈಗಾಗಲೇ ಹುನಾನ್ ಪ್ರಾಂತ್ಯದ ಝಂಗ್​​ಜಿಯಾಜಿ ಮತ್ತು ಝುಝೌ ನಗರಗಳಲ್ಲಿ ಇಂಥದ್ದೇ ಆದೇಶ ನೀಡಲಾಗಿದ್ದು, ಸುಮಾರು 20 ಲಕ್ಷ ಜನ ಲಾಕ್​​ಡೌನ್​ಗೆ ಒಳಪಟ್ಟಿದ್ದಾರೆ. ಕಳೆದ ತಿಂಗಳು ನಂಜಿಯಾಂಗ್​​ ಏರ್​ಪೋರ್ಟ್​​​​ನಲ್ಲಿ ಕ್ಲೀನಿಂಗ್ ಸಿಬ್ಬಂದಿಯಲ್ಲಿ ಮೊದಲ ಬಾರಿಗೆ ಡೆಲ್ಟಾ ರೂಪಾಂತರಿ ಪತ್ತೆಯಾಗಿತ್ತು. ಇದಾದ ಬಳಿಕ ಚೀನಾದಲ್ಲಿ ಕೊರೋನಾ ತುಂಬಾ ವೇಗವಾಗಿ ಹರಡುತ್ತಿದೆ.

Contact Us for Advertisement

Leave a Reply