ಭಾರತ ಭಾಗಯಾಗಿದ್ದ ಸೇನಾಭ್ಯಾಸವನ್ನ ಕದ್ದು ನೋಡ್ತಾ ಚೀನಾ?

masthmagaa.com:

ಮೊದಲ ಬಾರಿಗೆ ದಕ್ಷಿಣ ಚೀನಾ ಸಮುದ್ರದಲ್ಲಿ ಆಯೋಜಿಸಲಾಗಿದ್ದ ʻಆಸಿಯಾನ್ -ಭಾರತ ನೌಕಾ ಸಮರಾಭ್ಯಾಸʼವನ್ನ ಚೀನಾ ಕದ್ದು ನೋಡಿದೆ ಅಂತ ವರದಿಯಾಗಿದೆ. ಕಡಲಾಭ್ಯಾಸದ ವೇಳೆ ಚೀನಾದ ಹಡಗುಗಳು ಹಾಗೂ ವಿಮಾನಗಳು ದಕ್ಷಿಣ ಸಮುದ್ರಲ್ಲಿ ಪ್ರತ್ಯಕ್ಷವಾಗಿದ್ದು, ಕದ್ದು ನೋಡೋಕೆ ಪ್ರಯತ್ನಪಟ್ಟಿವೆ ಅಂತ ಆರೋಪ ಕೇಳಿಬಂದಿದೆ. ಭಾರತ, ಫಿಲಿಪೀನ್ಸ್‌, ಇಂಡೋನೇಷ್ಯಾ, ಸಿಂಗಾಪೂರ್, ಮಲೇಷಿಯಾ, ಥೈಲೆಂಡ್‌, ಬ್ರುನೈ ಹಾಗೂ ವಿಯೆಟ್ನಾಮ್‌ ದೇಶಗಳ ನೌಕಾ ಪಡೆಗಳು ಆಸಿಯಾನ್-ಭಾರತ ಕಡಲ ಸಮರಾಭ್ಯಾಸದ ಮೊದಲ ಆವೃತ್ತಿಯನ್ನ ದಕ್ಷಿಣ ಚೀನಾ ಸಮುದ್ರದಲ್ಲಿ ಆಯೋಜಿಸಿದ್ದವು. ಮೇ 7 ಹಾಗೂ 8 ರಂದು ಈ ಕಡಲಾಭ್ಯಾಸ ನಡೆದಿದೆ. ಈ ವೇಳೆ ಚೀನಾ ತನ್ನ ನರಿಬುದ್ದಿಯನ್ನ ತೋರಿಸಿದೆ. ಚೀನಾದ ಹಡುಗಗಳು ಸೇನಾಭ್ಯಾಸದಲ್ಲಿ ಭಾಗಿಯಾಗಿದ್ದ ಹಡಗುಗಳನ್ನ ಫಾಲೋ ಮಾಡಿವೆ. ವಿಯೆಟ್ನಾಮ್‌ನ ಸ್ಪೆಶಲ್‌ ಎಕನಾಮಿಕ್‌ ವಲಯದಲ್ಲಿ ಚೀನಾದ ಹಡಗುಗಳು ಕಂಡುಬಂದಿವೆ ಅಂತ ವರದಿಯಾಗಿದೆ. ಆದ್ರೆ ಸಮರಾಭ್ಯಾಸಕ್ಕೆ ಯಾವುದೇ ತೊಂದರೆ ನೀಡಿಲ್ಲ. ದೂರದಲ್ಲಿಯೇ ಇದ್ದವು. ಹೀಗಾಗಿ ಯಾವುದೇ ಅಲಾರ್ಮ್ ನೀಡದೇ, ಚೀನಾ ಹಡುಗಗಳ ಮೇಲೆ ದೂರದಿಂದಲೇ ಕಣ್ಣಿಡಲಾಗಿತ್ತು ಅಂತ ಭಾರತೀಯ ರಕ್ಷಣಾ ಮೂಲಗಳು ತಿಳಿಸಿವೆ. ಇನ್ನು ಸೇನಾಭ್ಯಾಸದಲ್ಲಿ ಭಾರತದ ಮಿಸೈಲ್‌ ಡೆಸ್ಟ್ರಾಯರ್ INS ದಿಲ್ಲಿ ಹಾಗೂ INS ಸತ್ಪುರಾ ಭಾಗಿಯಾಗಿದ್ದವು. ಅಂದ್ಹಾಗೆ ಚೀನಾವನ್ನ ತಲೆಯಲ್ಲಿಟ್ಟುಕೊಂಡೇ ಆಸಿಯಾನ್ ದೇಶಗಳ ಜೊತೆ ಭಾರತ ಈ ಸಮರಾಭ್ಯಾಸವನ್ನ ಆಯೋಜಿಸಿದೆ. ಅಲ್ದೇ ಆಸಿಯಾನ್ ರಾಷ್ಟ್ರಗಳ ಜೊತೆ ಫೈಟರ್‌ ಜೆಟ್‌ಗಳನ್ನ ಹಾಗೂ ಸಬ್‌ಮರೀನ್‌ಗಳನ್ನ ಆಪರೇಟ್‌ ಮಾಡುವುದು ಸೇರಿದಂತೆ ‌ಇತರ ಸೇನಾ ತರಬೇತಿ ಪ್ರೊಗ್ರಾಮ್‌ಗಳು, ಶಸ್ತ್ರಾಸ್ತ್ರ ಪೂರೈಕೆ ಹೆಚ್ಚಳದಂಥ ರಕ್ಷಣಾ ಚಟುವಟಿಕೆಯಲ್ಲಿ ಭಾರತ ನಿರತವಾಗಿದೆ. ಪ್ರಸ್ತುತ ಭಾರತ, ಸುಪರ್‌ಸಾನಿಕ್‌ ಕ್ರೂಸ್‌ ಮಿಸೈಲ್‌ ಆದ ಬ್ರಹ್ಮೋಸ್‌ನ ಮೂರು ಬ್ಯಾಟರಿಗಳನ್ನ ಫಿಲಿಪೀನ್ಸ್‌ಗೆ ಸಪ್ಲೈ ಮಾಡ್ತಿದೆ. ಇದಕ್ಕಾಗಿ ಭಾರತ ಹಾಗೂ ಫಿಲಿಪೀನ್ಸ್‌ ಕಳೆದ ವರ್ಷ ಜನವರಿಯಲ್ಲಿ 375 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 3075 ಕೋಟಿ ರೂಪಾಯಿ ಒಪ್ಪಂದಕ್ಕೆ ಸಹಿ ಹಾಕಿವೆ. ಹೀಗೆ ಚೀನಾ ವಿರುದ್ಧವಾಗಿ ಭಾರತ ಆಸಿಯಾನ್ ದೇಶಗಳ ಜೊತೆ ಉತ್ತಮ ಸಂಬಂಧವನ್ನ ಸಂಪಾದಿಸುತ್ತಿದೆ. ಇದನ್ನ ಚೀನಾಗೆ ಸಹಿಸೋಕೆ ಆಗ್ತಿಲ್ಲ ಅನಿಸುತ್ತಿದೆ. ಹೀಗಾಗಿ ಭಾರತ ಇತರ ದೇಶಗಳ ಜೊತೆಗೆ ಸೇರ್ಕೊಂಡು ಏನ್‌ ಮಾಡುತ್ತೆ ಅಂತ ಕಳ್ಳ ಬುದ್ದಿಯಿಂದ ಕದ್ದು ನೋಡೋಕೆ ಮುಂದಾಗಿದೆ. ಅಂದ್ಹಾಗೆ ಈ ಆಸಿಯಾನ್‌ 10 ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟವಾಗಿದೆ. ತಮ್ಮೊಳಗೆ ಆರ್ಥಿಕ, ರಾಜಕೀಯ, ಭದ್ರತೆ, ಸೇನೆ, ಶಿಕ್ಷಣ ಹಾಗೂ ಸಾಂಸ್ಕೃತಿಕ ಸಹಕಾರವನ್ನ ಪರಸ್ಪರ ನೀಡೋಕೆ ಬದ್ಧವಾಗಿವೆ.

-masthmagaa.com

Contact Us for Advertisement

Leave a Reply