ಅಗತ್ಯ ವಸ್ತುಗಳನ್ನು ಸ್ಟಾಕ್ ಮಾಡಿಟ್ಟುಕೊಳ್ಳಿ: ಜನರಿಗೆ ಚೀನಾ ಸಲಹೆ

masthmagaa.com:

ಚೀನಾದಲ್ಲಿ ಇತ್ತೀಚೆಗೆ ಮಳೆ ಬಂದು ತರಕಾರಿ ಮತ್ತು ಅಗತ್ಯ ವಸ್ತುಗಳ ರೇಟು ಫುಲ್ ಜಾಸ್ತಿಯಾಗಿ ಜನ ಕಂಗಾಲಾಗಿ ಹೋಗಿದ್ರು. ಹೀಗಾಗಿ ಇದೀಗ ಸರ್ಕಾರ ಚಳಿಗಾಲ ಬರುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ಸ್ಟಾಕ್ ಮಾಡಿಟ್ಟುಕೊಳ್ಳಿ ಅಂತ ಹೇಳಿದೆ. ಜೊತೆಗೆ ಸ್ಥಳೀಯ ಅಧಿಕಾರಿಗಳು ಪೂರೈಕೆ ಸರಪಳಿ ಸರಿಯಾಗಿ ಇರುವಂತೆ ನೋಡ್ಕೊಳ್ಬೇಕು. ಪೂರೈಕೆಯಲ್ಲಿ ವ್ಯತ್ಯಯ ಆಗುತ್ತೆ ಅಂತಾದ್ರೆ ಮೊದಲೇ ಮುನ್ನೆಚ್ಚರಿಕೆ ನೀಡ್ಬೇಕು. ಮುಂದಿನ ವರ್ಷ ಫೆಬ್ರವರಿಯಲ್ಲಿ ಬರೋ ಚೀನಾದ ಪ್ರಮುಖ ಹಬ್ಬ ಹೊಸ ವರ್ಷದ ಆಚರಣೆ ವೇಳೆಗೆ ತರಕಾರಿ ಮತ್ತು ಹಂದಿಮಾಂಸದ ಪೂರೈಕೆಯನ್ನು ಹೆಚ್ಚಿಸಲು ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತೆ ಅಂತ ಕೂಡ ತಿಳಿಸಿದೆ.

-masthmagaa.com

Contact Us for Advertisement

Leave a Reply