ಯುಕ್ರೇನ್-ರಷ್ಯಾ ಯುದ್ಧ: ಜೋ ಬೈಡೆನ್ – ಶಿ ಜಿನ್​ಪಿಂಗ್ ಮಾತುಕತೆ!

masthmagaa.com:

ಯುಕ್ರೇನ್‌ ಮೇಲೆ ರಷ್ಯಾ ಯುದ್ಧ ಮಾಡುತ್ತಿರೋ ಬೆನ್ನಲ್ಲೇ ಜಾಗತಿಕ ರಾಜಕೀಯದಲ್ಲಿ ಒಂದು ಮಹತ್ವದ ಬೆಳವಣಿಗೆ ಆಗಿದ್ದು, ಅಮೇರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ಚೀನಾ ಅಧ್ಯಕ್ಷ ಶಿ-ಜಿನ್‌ ಪಿಂಗ್‌ ಒಟ್ಟಿಗೆ ಮಾತುಕತೆ ನಡೆಸಿದ್ದಾರೆ. ವಿಡೀಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಿದ ಉಭಯ ದೇಶಗಳ ನಾಯಕರು, ಯುಕ್ರೇನ್‌ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಸಂಬಂಧ ಹೇಳಿಕೆಯೊಂದನ್ನ ಪ್ರಕಟಿಸಿರೋ ಶ್ವೇತಭವನ, ಚೀನಾ ಏನಾದ್ರು ರಷ್ಯಾಗೆ ಭೌತಿಕ ನೆರವು ನೀಡಿದ್ರೆ ಏನೇನು ಪರಿಣಾಮ ಅನುಭವಿಸಬೇಕಾಗುತ್ತದೆ ಅಂತ ಬೈಡನ್‌ ಕ್ಸಿ-ಜಿನ್‌ಪಿಂಗ್‌ಗೆ ಡೀಟೇಲಾಗಿ ತಿಳಿಸಿದ್ದಾರೆ ಅಂತ ಹೇಳಿದೆ. ಇನ್ನು ಆ ಕಡೆ ಶಿ ಜಿನ್​​​ಪಿಂಗ್‌, ಅಮೇರಿಕ ರಷ್ಯಾದ ಭದ್ರತಾ ಆತಂಕಗಳನ್ನು ಅರ್ಥ ಮಾಡ್ಕೋಬೇಕು, ನ್ಯಾಟೊ ಮತ್ತು ಅಮೇರಿಕ ರಷ್ಯಾದ ಜೊತೆಗೂ ಕೂಡ ಮಾತುಕತೆ ನಡೆಸ್ಬೇಕು ಅಂತ ರಷ್ಯಾ ಪರ ಬ್ಯಾಟ್‌ ಬೀಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಜಾಗತಿಕ ಹೊಣೆಗಾರಿಕೆಯನ್ನ ಅಮೇರಿಕ ಮತ್ತು ಚೀನಾ ನಾವಿಬ್ರು ಹೊತ್ಕೋಬೇಕು ಅಂತ ಹೇಳಿದ್ದಾರೆ ಎನ್ನಲಾಗಿದೆ. ಈ ಮಾತುಕತೆ ಸುಮಾರು 2 ಗಂಟೆಗಳ ಕಾಲ ನಡೆದಿದೆ ಅಂತ ಶ್ವೇತಭವನ ಮಾಹಿತಿ ನೀಡಿದೆ. ಇನ್ನು ತೈವಾನ್‌ ವಿಷಯದ ಬಗ್ಗೆ ಮಾತಾಡಿರೋ ಶಿ ಜಿನ್‌ಪಿಂಗ್‌, ಈ ವಿಚಾರವನ್ನ ಅಮೇರಿಕ ಸರಿಯಾಗಿ ಹ್ಯಾಂಡಲ್‌ ಮಾಡ್ಬೇಕು.. ಇಲ್ಲ ಅಂದ್ರೆ ಇದು ಉಭಯ ದೇಶಗಳ ಸಂಬಂಧದ ಮೇಲೆ ಪರಿಣಾಮ ಬೀರುತ್ತೆ. ಅಮೇರಿಕದಲ್ಲಿ ಇರೋ ಕೆಲವು ವ್ಯಕ್ತಿಗಳೂ ತೈವಾನ್‌ನ ಪ್ರೊ-ಇಂಡಿಪೆಂಡೆನ್ಸ್‌ ಫೋರ್ಸಸ್‌ಗೆ ತಪ್ಪು ಸಂದೇಶ ಕಳಿಸ್ತಿದ್ದಾರೆ. ಅದು ಅಪಾಯಕಾರಿ ಅಂತ ಹೇಳಿದ್ದಾರೆ. ಆದ್ರೆ ಅಮೆರಿಕ ಮಾತ್ರ ತೈವಾನ್‌ ವಿಚಾರದಲ್ಲಿ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply