ತೈವಾನ್‌ ಬಿಕ್ಕಟ್ಟು: ಭಾರತಕ್ಕೆ ವಾರ್ನ್‌ ಮಾಡಿದ ಚೀನಾ

masthmagaa.com:

ಇತ್ತೀಚಿಗೆ ಭಾರತದ ಮಾಜಿ ಸೇನಾ ಅಧಿಕಾರಿಗಳು ತೈವಾನ್‌ಗೆ ಭೇಟಿ ನೀಡಿದ್ದರು. ಇದಕ್ಕೆ ಚೀನಾ ಪ್ರತಿಕ್ರಿಯಿಸಿದ್ದು, ಭಾರತ ʻOne China Principleʼನ್ನ ಕಡ್ಡಾಯವಾಗಿ ಫಾಲೋ ಮಾಡ್ಬೇಕು. ತೈವಾನ್‌ ಜೊತೆಯಲ್ಲಿ ಯಾವುದೇ ರೀತಿಯ ಸೇನಾ ಹಾಗೂ ಭದ್ರತಾ ಸಹಕಾರವನ್ನ ಹೊಂದಬಾರದು. ಜೊತೆಗೆ ತೈವಾನ್‌ ಅಧಿಕಾರಿಗಳು ಹಾಗೂ ಚೀನಾದ ಜೊತೆಯಲ್ಲಿ ದ್ವಿಪಕ್ಷೀಯ ಸಂಬಂಧ ಹೊಂದಿರುವ ದೇಶಗಳ ನಡುವಿನ ಅಧಿಕೃತ ಮಾತುಕತೆಗಳನ್ನ ಚೀನಾ ಬಲವಾಗಿ ವಿರೋಧಿಸುತ್ತದೆ ಅಂತ ಚೀನಾ ವಿದೇಶಾಂಗ ಇಲಾಖೆ ವಕ್ತಾರ ವಾಂಗ್‌ ವೆನ್ಬಿನ್‌ ಹೇಳಿದ್ದಾರೆ. ಇದೇ ವೇಳೆ ಭಾರತ ಚೀನಾದ ತತ್ವವನ್ನ ಅನುಸರಿಸುತ್ತೆ. ತೈವಾನ್‌ ಸಮಸ್ಯೆಗಳನ್ನ ಸರಿಯಾಗಿ ನಿಭಾಯಿಸುತ್ತೆ, ತೈವಾನ್‌ನೊಂದಿಗೆ ಮಿಲಿಟರಿ ಸಂಬಂಧವನ್ನ ಹೊಂದುವುದರಿಂದ ಹಿಮ್ಮೆಟ್ಟುತ್ತೆ ಅಂತ ನಾವು ಆಶಿಸುತ್ತೇವೆ ಅಂತ ವೆನ್ಬಿನ್‌ ಹೇಳಿದ್ದಾರೆ. ಅಂದ್ಹಾಗೆ ಆಗಸ್ಟ್‌ 8ರಂದು ತೈವಾನ್‌ನಲ್ಲಿ ನಡೆದಿದ್ದ ಇಂಡೋ ಪೆಸಿಫಿಕ್‌ ಸೆಕ್ಯುರಿಟಿ ಸಭೆಯಲ್ಲಿ ಭಾರತದ ಮಾಜಿ ಭೂಸೇನೆ ಮುಖ್ಯಸ್ಥ ಮನೋಜ್‌ ನರವಾನೆ, ಮಾಜಿ ನೇವಿ ಚೀಫ್‌ ಕರಂಬೀರ್‌ ಸಿಂಗ್‌ ಹಾಗೂ ಮಾಜಿ ಏರ್‌ಚೀಫ್‌ ಬದೌರಿಯಾ ಭಾಗವಹಿಸಿದ್ದರು. ಇನ್ನು ತೈವಾನ್‌ ತನ್ನದು ಅಂತ ಪ್ರತಿಪಾದಿಸುತ್ತಿರುವ ಚೀನಾ, ಯಾವುದೇ ರಾಷ್ಟ್ರ ತೈವಾನ್‌ ಜೊತೆಯಲ್ಲಿ ಉತ್ತಮ ಸಂಬಂಧ ಹೊಂದಲು ಪ್ರಯತ್ನಿಸಿದ್ರೆ ಅದನ್ನ ವಿರೋಧಿಸುತ್ತದೆ. ಯಾಕಂದ್ರೆ ತೈವಾನ್‌ನ ಸ್ವತಂತ್ರ್ಯ ರಾಷ್ಟ್ರ ಅಂತ ಚೀನಾ ಒಪ್ಪಿಕೊಂಡಿಲ್ಲ.

-masthmagaa.com

Contact Us for Advertisement

Leave a Reply