ಚೀನಾ ಸರ್ಕಾರದ ಗುಪ್ತ ಸಾಲದ ಮೊತ್ತ ಕೇಳಿದ್ರೆ ತಲೆ ತಿರುಗುತ್ತೆ!

masthmagaa.com

ಚೀನಾದ ಸ್ಥಳೀಯ ಸರ್ಕಾರಗಳು 14.8 ಟ್ರಿಲಿಯನ್ ಯುವಾನ್ ಅಂದ್ರೆ 2.3 ಟ್ರಿಲಿಯನ್ ಡಾಲರ್​​​​​​​​ನಷ್ಟು ಗುಪ್ತ ಸಾಲ ಹೊಂದಿದ್ದು, ಇದು ಮತ್ತಷ್ಟು ಜಾಸ್ತಿಯಾಗಬಹುದು ಅಂತ ಸರ್ಕಾರದ ಥಿಂಕ್ ಟ್ಯಾಂಕ್ ತಿಳಿಸಿದೆ. ಚೀನಾದ ಸ್ಥಳೀಯ ಸರ್ಕಾರಗಳ ಮೇಲೆ ಮೂಲಭೂತ ಸೌಕರ್ಯಗಳ ಮೇಲಿನ ಬಂಡವಾಳ ಹೂಡಿಕೆ ಹೆಚ್ಚಿಸುವಂತೆ ಒತ್ತಡ ಹೇರಲಾಗುತ್ತಿದೆ. ಚೀನಾಗೆ ಸಾಲದ ಮೊತ್ತವನ್ನು ಹೆಚ್ಚಿಸಿಕೊಳ್ಳಲು ಇಷ್ಟವಿಲ್ಲ. ಹೀಗಾಗಿ ಸ್ಥಳೀಯ ಸರ್ಕಾರಗಳಿಗೆ ಸಾಲ ಮಾಡಿ, ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವಂತೆ ಒತ್ತಡ ಹೇರುತ್ತಿದೆ.

ಅಲ್ಲೂ ಸ್ಥಳೀಯ ಸರ್ಕಾರಗಳ ಹೆಸರಲ್ಲಿ ಅಲ್ಲ.. ಬದಲಾಗಿ ಎಲ್​ಜಿಎಫ್​​​ವಿ ಅಂದ್ರೆ ಲೋಕಲ್ ಗವರ್ನಮೆಂಟ್ ಫೈನಾನ್ಸಿಂಗ್ ವೆಹಿಕಲ್ ಅನ್ನೋ ಒಂದು ವ್ಯವಸ್ಥೆ ಮೂಲಕ ಸಾಲ ಪಡೆಯಲಾಗ್ತಿದೆ. ಆ ಸಂಸ್ಥೆ ಮೂಲಕ ಸಾಲ ಪಡೆಯೋದ್ರಿಂದ ಇಲ್ಲಿ ಚೀನಾದ ಸರ್ಕಾರದ ಸಾಲ ಅಂತ ಪರಿಗಣಿಸೋದಿಲ್ಲ.. ಆ ಸಂಸ್ಥೆ ಹೆಸರಲ್ಲಿ ಸಾಲ ಇರುತ್ತೆ.. ಆದ್ರೂ ಇನ್​ಡೈರೆಕ್ಟಾಗಿ ಅದು ಚೀನಾ ಸರ್ಕಾರದ್ದೇ ಸಾಲವಾಗಿರುತ್ತೆ. ಚೀನಾದ ಸ್ಥಳೀಯ ಸರ್ಕಾರದ ಇಂತಹ ಸಾಲಗಳಿಗೆ ವರ್ಷಕ್ಕೆ 700 ಬಿಲಿಯನ್ ಡಾಲರ್​​ನಷ್ಟು ಬಡ್ಡಿ ಕಟ್ಟಲಾಗ್ತಿದೆ ಅಂತ ಕೂಡ ಮಾಹಿತಿ ಲಭ್ಯವಾಗಿದೆ.

-masthmagaa.com

Contact Us for Advertisement

Leave a Reply