3ನೇ ವಿಶ್ವಯುದ್ಧಕ್ಕೆ ಸದ್ದಿಲ್ಲದೆ ಸಿದ್ಧತೆ ನಡೆಸ್ತಿದ್ಯಾ ಚೀನಾ?

masthmagaa.com:

ಚೀನಾ ಮೂರನೇ ವಿಶ್ವಯುದ್ಧಕ್ಕೆ ಸದ್ದಿಲ್ಲದೆ ಸಿದ್ಧತೆ ನಡೆಸ್ತಿದೆಯಾ ಅನ್ನೋ ಅನುಮಾನ ಶುರುವಾಗಿದೆ. ಯಾಕಂದ್ರೆ ಶಾಂಘೈನಲ್ಲಿ ಚೀನಾ ವಿಮಾನ ವಾಹಕ ಯುದ್ಧನೌಕೆ ನಿರ್ಮಿಸ್ತಿರೋದು ಉಪಗ್ರಹ ಚಿತ್ರದಿಂದ ಬಯಲಾಗಿದೆ. ಸೆಂಟರ್ ಫಾರ್ ಸ್ಟ್ರಾಟಜಿಕ್ & ಇಂಟರ್​​ನ್ಯಾಷನಲ್ ಸ್ಟಡೀಸ್​​ ತೆಗೆದ ಫೋಟೋದಲ್ಲಿ ಈ ವಿಚಾರ ಗೊತ್ತಾಗಿದೆ. ಟೈಪ್​ 003 ಯುದ್ಧನೌಕೆ ಇದಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ನಿರ್ಮಾಣ ಕಾರ್ಯ ಕಂಪ್ಲೀಟ್ ಆಗಲಿದ್ದು, ಚೀನಾ ಲಾಂಚ್ ಮಾಡಲಿದೆ ಅಂತ ಹೇಳಲಾಗ್ತಿದೆ. ಈ ಹಿಂದೆಯೂ ಈ ಸಂಬಂಧ ಹಲವಾರು ವರದಿಗಳು ಬಂದಿದ್ವು. ಆದ್ರೀಗ ಉಪಗ್ರಹ ಚಿತ್ರದಿಂದ ಸದ್ಯದಲ್ಲೇ ಇದ್ರ ನಿರ್ಮಾಣ ಕಾರ್ಯ ಮುಗಿಯಲಿದೆ ಅನ್ನೋದು ಗೊತ್ತಾಗಿದೆ. ಇದ್ರ ನಡುವೆ ಚೀನಾದ ಪೀಪಲ್ ಲಿಬರೇಷನ್ ಆರ್ಮಿ ಎರಡು ವಿಮಾನ ವಾಹಕ ಯುದ್ಧನೌಕೆಗಳನ್ನು ನಿರ್ಮಿಸಿದೆ. ಅಂದ್ರೆ ನಿಜವಾದ ಯುದ್ಧನೌಕೆಯಲ್ಲ.. ಬದಲಿಗೆ ಅಣಕು ನೌಕೆಗಳು. ಪೆಸಿಫಿಕ್ ಸಮುದ್ರದಿಂದ ಸಾವಿರಾರು ಮೈಲಿ ದೂರದ ಮರುಭೂಮಿಯಲ್ಲಿ ಈ ಅಣಕು ನೌಕೆಗಳನ್ನು ನಿರ್ಮಿಸಿದೆ. ಅಷ್ಟೇ ಅಲ್ಲ.. ಈ ನೌಕೆಗಳು ಅಮೆರಿಕದ ಯುದ್ಧನೌಕೆಗಳನ್ನು ಹೋಲುವಂತಿವೆ. ಯುದ್ಧದ ವೇಳೆ ಅಮೆರಿಕದ ಯುದ್ಧನೌಕೆಗಳನ್ನು ಪತ್ತೆಹಚ್ಚಲು, ನಾಶಪಡಿಸಲು ಈಗಿಂದಲೇ ಚೀನಾ ಅಭ್ಯಾಸ ಮಾಡ್ಕೊಳ್ತಿದೆ ಅಂತ ಮೂಲಗಳು ತಿಳಿಸಿವೆ. ಇದನ್ನೆಲ್ಲಾ ನೋಡ್ತಿದ್ರೆ ಚೀನಾ ಅಮೆರಿಕಗೆ ಸಂದೇಶ ನೀಡಲು ಹೀಗೆ ಮಾಡ್ತಿದ್ಯಾ ಅಥವಾ ನಿಜವಾಗಿಯೂ ಮೂರನೇ ವಿಶ್ವಯುದ್ಧಕ್ಕೆ ಎಲ್ಲಾ ರೀತಿಯಲ್ಲಿ ರೆಡಿಯಾಗ್ತಿದ್ಯಾ ಅನ್ನೋ ಅನುಮಾನ ಮೂಡಿದೆ.

-masthmagaa.com

Contact Us for Advertisement

Leave a Reply