ಮಾವೋಗೆ ಸೆಡ್ಡು ಹೊಡೆಯೋಕೆ ಮುಂದಾದ ಷಿ ಜಿನ್‌ಪಿಂಗ್‌!

masthmagaa.com:

ಈಗಾಗಲೇ ಚೀನಾದ ಆಡಳಿತವನ್ನ ಸಂಪೂರ್ಣ ತನ್ನ ಕಂಟ್ರೋಲ್‌ಗೆ ತಗೊಂಡು ಸರ್ವಾಧಿಕಾರಿಯಾಗಿ ಮೆರಿತಾ ಇರೋ ಚೀನಾ ಅಧ್ಯಕ್ಷ ಷಿಜಿನ್‌ಪಿಂಗ್‌, ತನ್ನ ಸ್ಥಾನವನ್ನ ಮತ್ತಷ್ಟು ಗಟ್ಟಿಗೊಳಿಸೋಕೆ ನೋಡ್ತಿದಾರೆ. ಈ ಸಂಬಂಧ ಮುಂದಿನ ತಿಂಗಳು ನಡೆಯಲಿರುವ ಕಮ್ಯುನಿಸ್ಟ್‌ ಪಾರ್ಟಿಯ ಪಂಚವಾರ್ಷಿಕ ಸಭೆಯಲ್ಲಿ ಪಕ್ಷದ ಸಂವಿಧಾನಕ್ಕೆ ಒಂದಿಷ್ಟು ತಿದ್ದುಪಡಿಯಾಗಲಿವೆ ಅಂತ ಹೇಳಲಾಗ್ತಿದೆ. ಚೀನಾದ ಆಡಳಿತರೂಢಿ ಕಮ್ಯುನಿಸ್ಟ್‌ ಪಾರ್ಟಿ ಐದು ವರ್ಷಕ್ಕೆ ಒಮ್ಮೆ ಈ ರಾಷ್ಟ್ರೀಯ ಮಹಾಸಭೆಯನ್ನ ನಡೆಸುತ್ತೆ. ಇದ್ರಲ್ಲೇ ಎಲ್ಲ ಪ್ರಮುಖ ಬದಲಾವಣೆಗಳು, ಹೊಸ ಚಿಂತನೆಗಳು ಪಕ್ಷಕ್ಕೆ ಆ್ಯಡ್‌ ಆಗೋದು. ಕಳೆದ ಬಾರಿ 2017ರಲ್ಲಿ ಈ ಸಭೆ ನಡೆದಾಗ ಅಧ್ಯಕ್ಷರ ಅವಧಿ 10 ವರ್ಷ ಮಾತ್ರ ಅಂತ ಇದ್ದಿದ್ದನ್ನ ತೆಗ್ದು ಲೈಫ್‌ಲಾಂಗ್‌ ಬೇಕಾದ್ರೆ ಆಗ್ಬಹುದು ಅಂತ ಮಾಡಲಾಗಿತ್ತು. ಮುಂದಿನ ತಿಂಗಳು ಕಮ್ಯುನಿಸ್ಟ್‌ ಪಾರ್ಟಿಯ ಈ 20ನೇ ಮಹಾಸಭೆ ನಡೆಯಲಿದ್ದು ಅದ್ರಲ್ಲಿ, ಪಕ್ಷದ ಜೆನರಲ್‌ ಸೆಕ್ರಟರಿ ಆಗಿರೋ ಷಿಜಿನ್‌ ಪಿಂಗ್‌ರನ್ನ ಪಕ್ಷದ ಚೇರ್ಮನ್‌ ಆಗಿ ಮಾಡ್ಬಹುದು ಅಂತ ಹೇಳಲಾಗ್ತಿದೆ. ನೂರು ವರ್ಷದ ಇತಿಹಾಸ ಹೊಂದಿರೋ ಈ ಪಕ್ಷದಲ್ಲಿ ಮಾವೋತ್ಸೆ ತುಂಗ್‌ ಅಥವಾ ಮಾವೋ ಜೆಡಾಂಗ್‌ ನಂತ್ರ ಈ ಹುದ್ದೆಯನ್ನ ಯಾರಿಗೂ ನೀಡಲಾಗಿರ್ಲಿಲ್ಲ ಅನ್ನೋದು ಇಂಪಾರ್ಟೆಂಟ್‌. ಇದ್ರ ಜೊತೆಗೆ ಹೊಸ ಪ್ರಧಾನಿಯನ್ನ ಕೂಡ ನೇಮಕ ಮಾಡ್ಬಹುದು ಅಂತ ಹೇಳಲಾಗಿದೆ. 2017ರಲ್ಲಿ “ಹೊಸ ಯುಗಕ್ಕಾಗಿ ಚೀನಿ ಗುಣಗಳನ್ನ ಉಳ್ಳ ಸಮಾಜವಾದದ ಮೇಲೆ ಷಿಜಿನ್‌ಪಿಂಗ್‌ರ ವಿಚಾರಧಾರೆ” ಅಂತ ಪಕ್ಷದಲ್ಲಿ ಹೊಸ ಚಿಂತನೆಗಳನ್ನೇ ಸೇರಿಸಲಾಗಿತ್ತು. ಮಾವೋ, ಡೆಂಗ್‌ ಷಿಯೋಪಿಂಗ್‌ ಬಿಟ್ರೆ ಈ ರೀತಿ ಹೆಸರಿನೊಂದಿಗೆ ಹೊಸ ಥಾಟ್ಸ್‌ನ್ನ ಪಕ್ಷದಲ್ಲಿ ಸೇರಿಸಿಯೇ ಇರ್ಲಿಲ್ಲ. ಈಗ ಅಷ್ಟೆಲ್ಲಾ ಉದ್ದ ಯಾಕೆ ಅಂತ “ಷಿ ಜನ್‌ಪಿಂಗ್‌ ವಿಚಾರಧಾರೆಗಳು” ಅಂತ ಶಾರ್ಟ್‌ ಆಗಿ ಹೊಸ ರಾಜಕೀಯ ಚಿಂತನೆಯನ್ನೇ ಸೇರಿಸಬಹುದು, ಈ ಮೂಲಕ ಮಾವೋಗೆ ಇಕ್ವಲ್‌ ಆಗಿ ಷಿ ಜಿನ್‌ಪಿಂಗ್‌ರನ್ನ ಪ್ರೊಜೆಕ್ಟ್‌ ಮಾಡ್ಬಹುದು ಅಂತ ಹೇಳಲಾಗ್ತಿದೆ.

 

-masthmagaa.com

Contact Us for Advertisement

Leave a Reply