ಇಂದೆಂಥಾ ಸ್ಥಿತ ಬಂತು ಚೀನಾಕ್ಕೆ? ಆರ್ಥಿಕತೆಯಲ್ಲೂ ಹಿನ್ನಡೆ, ಜನಸಂಖ್ಯೆಯಲ್ಲೂ ಹಿನ್ನಡೆ!

masthmagaa.com:

ಕೋವಿಡ್‌ನಿಂದ ಜಗತ್ತು ಸಾಕಷ್ಟು ಆರ್ಥಿಕ ನಷ್ಟ ಅನುಭವಿಸಿದೆ. ಆದ್ರಲ್ಲೂ ಜೀರೋ ಕೋವಿಡ್‌ನಿಂದ ಚೀನಾಕ್ಕೆ ಈ ನಷ್ಟ ಸ್ವಲ್ಪ ಜಾಸ್ತಿನೇ ಆಗಿದೆ. 2022ರಲ್ಲಿ ಚೀನಾದ ಆರ್ಥಿಕತೆ ಕೇವಲ 3% ಬೆಳವಣಿಗೆ ಕಂಡಿದೆ ಅಂತ ವರದಿಯಾಗಿದೆ. ಈ ಬೆಳವಣಿಗೆ ಕಳೆದ 40 ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ. 2022ರಲ್ಲಿ ಚೀನಾ 5.5% ಆರ್ಥಿಕ ಬೆಳವಣಿಗೆಯ ಟಾರ್ಗೆಟ್‌ ಹೊಂದಿತ್ತು. ಆದ್ರೆ ತನ್ನ ಕಠಿಣ ಕೋವಿಡ್‌ ಕ್ರಮಗಳಿಂದ ಅದನ್ನ ತಲುಪೋಕೆ ಆಗಿಲ್ಲ. ಇನ್ನು ಚೀನಾದ ಅತಿ ಕಳಪೆ ಆರ್ಥಿಕ ಬೆಳವಣಿಗೆ 1976ರಲ್ಲಿ ಉಂಟಾಗಿದ್ದು, ಕೇವಲ 1.6% ಆಗಿತ್ತು. ಇನ್ನು ಚೀನಾಕ್ಕೆ ಆರ್ಥಿಕ ಸಂಕಷ್ಟ ಒಂದ್‌ ಕಡೆಯಾದ್ರೆ, ಜನಸಂಖ್ಯೆ ಕಡಿಮೆಯಾಗ್ತಿರೊ ಸಮಸ್ಯೆ ಇನ್ನೊಂದ್‌ ಕಡೆ. ಕಳೆದ 60 ವರ್ಷಗಳಲ್ಲೇ ಮೊದಲ ಬಾರಿಗೆ ಚೀನಾ ಜನಸಂಖ್ಯೆ ಕಡಿಮೆಯಾಗಿದೆ. 2022ರ ಅಂತ್ಯಕ್ಕೆ ಚೀನಾದ ಜನಸಂಖ್ಯೆ ಸುಮಾರು 141 ಕೋಟಿ 17 ಲಕ್ಷ 50 ಸಾವಿರವಿದೆ. ಇದು 2021ರ ಅಂತ್ಯಕ್ಕೆ ಹೋಲಿಸಿದ್ರೆ, 8.5 ಲಕ್ಷ ಕಡಿಮೆಯಿದೆ ಅಂತ ಚೀನಾದ ನ್ಯಾಷನಲ್‌ ಬ್ಯೂರೋ ಆಫ್‌ ಸ್ಟಾಟಿಸ್ಟಿಕ್ಸ್‌ ತನ್ನ ವರದಿಯಲ್ಲಿ ಹೇಳಿದೆ. 2022ರಲ್ಲಿ ಸುಮಾರು 95.6 ಲಕ್ಷ ಜನನವಾಗಿದ್ರೆ, ಅದೇ ಅವಧಿಯಲ್ಲಿ ಸುಮಾರು 1.4 ಕೋಟಿ ಜನ ಮೃತಪಟ್ಟಿದ್ದಾರೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜಗತ್ತಿನ ಅತ್ಯಂತ ಜನಭರಿತ ದೇಶ ಅಂತ ಕರೆಸಿಕೊಂಡು ಬಂದಿರೊ ಚೀನಾ, ಈ ವರ್ಷವೇ ತನ್ನ ಸ್ಥಾನವನ್ನ ಕಳೆದುಕೊಳ್ಳಲಿದೆ. ಚೀನಾವನ್ನ ಹಿಂದಕ್ಕಿ ಭಾರತ ಈ ಸ್ಥಾನ ಪಡೆಯಲಿದೆ ಅಂತ ಹೇಳಲಾಗಿದೆ. ಅಲ್ದೇ 2050ರ ವೇಳೆಗೆ ಚೀನಾದ ಜನಸಂಖ್ಯೆ ಸುಮಾರು 11 ಕೋಟಿಯಷ್ಟು ಕಡಿಮೆಯಾಗುತ್ತೆ ಅಂತ ವಿಶ್ವಸಂಸ್ಥೆ ಅಂದಾಜಿಸಿದೆ. ಈ ಸಂಖ್ಯೆ 2019ರಲ್ಲಿ ವಿಶ್ವಸಂಸ್ಥೆ ಅಂದಾಜಿಸಿದ್ದಕ್ಕಿಂತ 3 ಪಟ್ಟು ಹೆಚ್ಚಾಗಿದೆ.

-masthmagaa

Contact Us for Advertisement

Leave a Reply