ಉಯಿಘರ್‌ ಮೇಲೆ ಚೀನಾ ಕ್ರೌರ್ಯ!

masthmagaa.com:

ಉಯಿಘರ್‌ ಮುಸ್ಲಿಂರ ಮೇಲೆ ಶೋಷಣೆ ಆರೋಪ ಹೊತ್ತಿರೋ ಚೀನಾದ ಮೇಲೆ ಈಗ ಮತ್ತೊಂದು ದೊಡ್ಡ ಆರೋಪ ಕೇಳಿ ಬಂದಿದೆ. ಮಾನವ ಹಕ್ಕುಗಳ ಕಾರ್ಯಕರ್ತರ ಮೇಲೆ ಗೂಢಾಚಾರಿಕೆ ಮಾಡಲು ವಿದೇಶದಲ್ಲಿರುವ ಉಯ್ಘುರ್‌ ಮುಸ್ಲಿಂರ ಮೇಲೆ ಚೀನಾ ಒತ್ತಡ ಹೇರುತ್ತಿದೆ ಅಂತ ಬಿಬಿಸಿ ವರದಿ ಮಾಡಿದೆ. ಚೀನಾದ ಕ್ಯಾಂಪ್‌ಗಳಲ್ಲಿ ಬಂಧನಕ್ಕೆ ಇಡಲಾಗಿರೋ ಉಯ್ಘುರ್‌ ಮುಸ್ಲಿಮರ ಕೆಲ ಕುಟುಂಬಸ್ಥರು ವಿದೇಶದಲ್ಲಿದ್ದಾರೆ. ಈಗ ಅವರನ್ನ ಹೆದರಿಸಿ, ಚೀನಾಗೋಸ್ಕರ ನೀವು ಗೂಢಚರ್ಯೆ ಮಾಡಿ ಅಂತ ಚೀನಾ ಸರ್ಕಾರ ಒತ್ತಾಯಿಸುತ್ತಿದೆ ಅಂತ ಹೇಳಲಾಗಿದೆ. ಉಯಿಘರ ಮುಸ್ಲಿಮರ ವಿಚಾರ ಗೊತ್ತಗದಂತೆ ಹಾಗೇ ಅವರ ಪರ ದನಿ ಎತ್ತುವ ಮಾನವ ಹಕ್ಕುಗಳ ಹೋರಾಟಗಾರರನ್ನ ಟಾರ್ಗೆಟ್‌ ಮಾಡೋಕೆ ಈ ರೀತಿ ಮಾಡಲಾಗಿದೆ. ಚೀನಾದಲ್ಲಿರುವ ಸಂಬಂಧಿಕರ ಬಳಿ ವಿದೇಶದಲ್ಲಿರೋರು ಮಾತಾಡುವಾಗ ಪೊಲೀಸರು ಬೆದರಿಕೆ ಹಾಕುತ್ತಾರೆ. ಕುಟುಂಬಸ್ಥರನ್ನೇ ಅಸ್ತ್ರವಾಗಿ ಬಳಸಿಕೊಂಡು ಚೀನಾ ತನಗೆ ಬೇಕಾದ ಕೆಲಸ ಮಾಡಿಕೊಳ್ಳುತ್ತೆ ಅಂತ ವರದಿಯಲ್ಲಿ ತಿಳಿಸಲಾಗಿದೆ. ಜೊತೆಗೆ ವಿದೇಶದಲ್ಲಿರುವವರು ತಮ್ಮ ಮನೆಯವರ ಹತ್ತಿರ ಮುಕ್ತವಾಗಿ ಮಾತಾಡೋಕೆ ಭಯಪಡುತ್ತಾರೆ. ಅವ್ರ ಕರೆಗಳನ್ನ ಚೀನಾ ಪೊಲೀಸರು ಮಾನಿಟರ್‌ ಮಾಡ್ತಾರೆ ಅಂತ ತಿಳಿದುಬಂದಿದೆ.

-masthmagaa.com

Contact Us for Advertisement

Leave a Reply