ಚೀನಾದ ಬಳಿ ಲೇಸರ್ ಆಯುಧ! ಏನಿದರ ಸ್ಪೆಷಾಲಿಟಿ?

masthmagaa.com:

ಒಂದ್ಕಡೆ ರಷ್ಯಾ ಮತ್ತು ಯುಕ್ರೇನ್ ಯುದ್ಧ ನಡೀತಾ ಇದೆ. ಮತ್ತೊಂದ್ಕಡೆ ಚೀನಾ ಭಯಾನಕ ಅಸ್ತ್ರವೊಂದನ್ನು ಕಂಡು ಹಿಡಿದಿದೆ. ಎಷ್ಟರ ಮಟ್ಟಿಗೆ ಅಂದ್ರೆ ಈ ಅಸ್ತ್ರದಿಂದ ಇಡೀ ವಿಶ್ವದ ಸಂಪರ್ಕ ವ್ಯವಸ್ಥೆಯನ್ನೇ ಹಾಳು ಮಾಡಬಹುದಾಗಿದೆ. ಅದೇ ರಿಲೇಟಿವಿಸ್ಟಿಕ್ ಕ್ಲೈಸ್ಟ್ರಾನ್​ ಆಂಪ್ಲಿಫೈರ್ ಅನ್ನೋ ಲೇಸರ್ ವೆಪನ್.. ಇದು ಬಾಹ್ಯಾಕಾಶದಲ್ಲಿರೋ ಉಪಗ್ರಹಗಳನ್ನು ಜಾಮ್ ಮಾಡುವ, ನಾಶಪಡಿಸೋ ಸಾಮರ್ಥ್ಯವನ್ನು ಹೊಂದಿದೆ. 5 ಮೆಗಾ ವ್ಯಾಟ್​​ಗಳ ತರಂಗ ಹೊರಸೂಸುವ ಸಾಮರ್ಥ್ಯ ಹೊಂದಿದ್ದು, ಇದನ್ನು ಸಿವಿಲ್ ಮತ್ತು ಮಿಲಿಟರಿ ಉಪಯೋಗಗಳಿಗೆ ಬಳಸೋಕೆ ಸಾಧ್ಯವಾಗಲಿದೆ. ಭೂಮಿಯಿಂದಲೇ ಆಕಾಶದಲ್ಲಿರೋ ಉಪಗ್ರಹಗಳನ್ನು ಟಾರ್ಗೆಟ್ ಮಾಡೋಕೆ ಸಾಧ್ಯವಾಗೋದಿಲ್ಲ. ಆದ್ರೆ ಈ ಅಸ್ತ್ರವನ್ನು ಉಪಗ್ರಹದ ಜೊತೆ ಉಡಾವಣೆ ಮಾಡಿ.., ನಂತ್ರ ಬಾಹ್ಯಾಕಾಶದಲ್ಲಿ ಬೇರೆ ಉಪಗ್ರಹಗಳನ್ನು ಟಾರ್ಗೆಟ್ ಮಾಡಲು ಸಾಧ್ಯವಾಗಲಿದೆ. ಡೈರೆಕ್ಟೆಡ್ ಎನರ್ಜಿ ವೆಪನ್ಸ್ ವ್ಯವಸ್ಥೆ ಇದ್ದು, ಇದ್ರಿಂದ ಬಿಡುಗಡೆಯಾಗುವ ತರಂಗ ಎದುರಾಳಿಯ ಉಪಕರಣ ಅಥವಾ ಸೇನೆಗೆ ಹಾನಿ ಮಾಡಬಲ್ಲದು. ಈ ಸಂಬಂಧ ತೈವಾನ್ ಸುದ್ದಿ ಸಂಸ್ಥೆಗಳು ಡೀಟೇಲಾಗಿ ವರದಿ ಮಾಡಿವೆ. ಆದ್ರೆ ಚೀನಾ ಮಾತ್ರ ಈ ಸುದ್ದಿ ಸುಳ್ಳು.. ನಾವು ಆ ರೀತಿ ಯಾವುದೇ ಅಸ್ತ್ರವನ್ನು ಅಭಿವೃದ್ಧಿಪಡಿಸಿಲ್ಲ ಅಂತ ಹೇಳಿಕೊಂಡಿದೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಚೀನೀ ವಿಜ್ಞಾನಿಯೊಬ್ಬರು, ಅದು ತುಂಬಾ ಶಕ್ತಿಶಾಲಿ ಅಸ್ತ್ರ. ಎಲ್ಲರೂ ಅಂದುಕೊಂಡಿರೋದಕ್ಕಿಂತಲೂ ಅದು ಭಯಾನಕವಾಗಿದೆ ಅಂತ ಹೇಳಿಕೊಂಡಿದ್ದಾರೆ. ಒಂದು ವೇಳೆ ಚೀನಾ ಈ ಅಸ್ತ್ರ ಅಭಿವೃದ್ಧಿಪಡಿಸಿರೋದು ನಿಜವೇ ಆದಲ್ಲಿ ದೊಡ್ಡಮಟ್ಟದಲ್ಲಿ ವಿಶ್ವಸಮುದಾಯದ ಟೀಕೆಗೆ ಗುರಿಯಾಗಬೇಕಾಗುತ್ತೆ. ಕಳೆದ ವರ್ಷ ಕೂಡ ಚೀನಾ ಹೈಪರ್​ಸಾನಿಕ್ ಪರೀಕ್ಷೆ ನಡೆಸಿ ಸುದ್ದಿಯಾಗಿತ್ತು. ಅದೂ ಅಲ್ಲದೆ ಬಾಹ್ಯಾಕಾಶದಲ್ಲೂ ಚೀನಾ ಮುಂದೆ ಸಾಗುತ್ತಿದೆ. ಯಾರ ಸಹಾಯವೂ ಇಲ್ಲದೇ ತನ್ನದೇ ಸ್ವಂತ ಬಾಹ್ಯಾಕಾಶ ನಿಲ್ದಾಣ ನಿರ್ಮಿಸ್ತಾ ಇದೆ. ಈ ವರ್ಷಾಂತ್ಯದಲ್ಲಿ ಅದು ಕಂಪ್ಲೀಟ್ ಕೂಡ ಆಗ್ತಿದೆ. ಆಮೇಲೆ ಅಲ್ಲಿ ಹೋಗಿ ಕೂತ್ಕೊಂಡು ಈ ಹೊಸ ಅಸ್ತ್ರಗಳ ಮೂಲಕ ಬೇರೆಯವರ ಉಪಗ್ರಹಗಳನ್ನು ನಾಶ ಮಾಡೋಕೆ ಶುರು ಮಾಡಿದ್ರೆ ಕಷ್ಟ..

-masthmagaa.com

Contact Us for Advertisement

Leave a Reply