SCO ಶೃಂಗಸಭೆ: ಎಲ್ಲರೂ ಒಂದಾಗೋಣ ಬನ್ನಿ, ಭಾರತ-ರಷ್ಯಾಗೆ ಜಿನ್‌ಪಿಂಗ್ ಕರೆ

masthmagaa.com:

ಭಾರತದ ಅಧ್ಯಕ್ಷತೆಯಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟ (SCO)ದ ಶೃಂಗಸಭೆಯಲ್ಲಿ ಭಾಗಿಯಾಗಿದ್ದ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಪರೋಕ್ಷವಾಗಿ ಅಮೆರಿಕ ವಿರುದ್ಧ ಗುಡುಗಿದ್ದಾರೆ. ನಮ್ಮ ಭಾಗದಲ್ಲಿ ಇತರ ಬಾಹ್ಯ ಶಕ್ತಿಗಳು ಹೊಸ ಕೋಲ್ಡ್‌ ವಾರ್‌ನ್ನ ಸೃಷ್ಠಿಸೋ ಕುರಿತು ನಾವು ತುಂಬಾ ಅಲರ್ಟ್‌ ಆಗಿರಬೇಕು. ಅಲ್ದೇ ನಮ್ಮ ಪ್ರಾದೇಶಿಕ ರೀಜನ್‌ನಲ್ಲಿ ಆಂತರಿಕ ವಿಷಯಗಳಲ್ಲಿ ಮೂಗುತೂರಿಸುವ ಯಾವುದೇ ದೇಶವನ್ನ ಎಲ್ಲರೂ ಸೇರಿ ವಿರೋಧಿಸಬೇಕು, ಹೊಸ ಕ್ರಾಂತಿಯನ್ನ ಮಾಡಬೇಕು ಅಂತ ಅಮೆರಿಕ ಹೆಸರು ಹೇಳದೇ ಜಿನ್‌ಪಿಂಗ್‌ ಒಗ್ಗಟ್ಟಿಗೆ ಕರೆಕೊಟ್ಟಿದ್ದಾರೆ. ಪೆಸಿಫಿಕ್‌ ಭಾಗದಲ್ಲಿ ಚೀನಾ ವಿರುದ್ಧ ಅಮೆರಿಕ ತನ್ನ ಪ್ರಾಬಲ್ಯ ಹೆಚ್ಚಿಸೋ ಪ್ರಯತ್ನದಲ್ಲಿದೆ. ಅಲ್ದೇ ತೈವಾನ್‌ ವಿಷಯದಲ್ಲೂ ಚೀನಾಗೆ ತಲೆನೋವಾಗಿದೆ. ಹೀಗಾಗಿ ಅಮೆರಿಕವನ್ನ ವಿರೋಧಿಸಬೇಕು ಅಂತ ಜಿನ್‌ಪಿಂಗ್‌ ಹೇಳಿದ್ದಾರೆ. ಮತ್ತೊಂದ್‌ ಕಡೆ ಪಕ್ಕದ ಅಫ್ಘಾನಿಸ್ತಾನದಲ್ಲಿ ಸ್ಥಿತಿಗೆ ಕಳವಳ ವ್ಯಕ್ತಪಡಿಸಿರೋ SCO ನಾಯಕರು, ಅಫ್ಘಾನ್‌ನಲ್ಲಿ ಎಲ್ಲರನ್ನ ಒಳಗೊಂಡ ಸರ್ಕಾರ ರಚನೆಯಾಗಬೇಕು ಅಂತ ಹೇಳಿದ್ದಾರೆ.

 

-masthmagaa.com

Contact Us for Advertisement

Leave a Reply