ಚೀನಾ ಕಂಪನಿಯ ಹ್ಯಾಕಿಂಗ್: EPFO, BSNLಗೂ ಕನ್ನ?

masthmagaa.com:

ಭಾರತ, ಥೈಲ್ಯಾಂಡ್‌, ಬ್ರಿಟನ್‌ ಸೇರಿ ವಿಶ್ವದ ಅನೇಕ ದೇಶಗಳ ವೆಬ್‌ಸೈಟ್‌ಗಳನ್ನ ಹ್ಯಾಕ್‌ ಮಾಡೋಕೆ ಚೀನಾ ಟ್ರೈ ಮಾಡಿದೆ ಅಂತ ಅಮೆರಿಕದ ಮಾಧ್ಯಮಗಳು ರಿಪೋರ್ಟ್‌ ಮಾಡಿವೆ. ಕನಿಷ್ಟ 20 ದೇಶಗಳನ್ನ ಗುರಿಯಾಗಿಸಿಕೊಂಡು ಚೀನಾ ಸರ್ಕಾರದ ಜೊತೆ ಲಿಂಕ್‌ ಇರೋ ಹ್ಯಾಕಿಂಗ್‌ ಗ್ರೂಪ್‌ ಹ್ಯಾಕ್‌ ಮಾಡೋಕೆ ಟ್ರೈ ಮಾಡಿದೆ ಅಂತ ಅಮೆರಿಕದ ವಾಷಿಂಗ್‌ಟನ್‌ ಪೋಸ್ಟ್ ಬರೆದಿದೆ. ಅಲ್ದೆ ಚೀನಾದ ಸೆಕ್ಯೂರಿಟಿ ಏಜೆನ್ಸಿಗಳು ಇದ್ರಲ್ಲಿ ಇನ್ವಾಲ್ವ್‌ ಆಗಿವೆ ಅಂತ ಉಲ್ಲೇಖ ಮಾಡಲಾಗಿದೆ. ಶಾಂಘೈ ಮೂಲದ ಐಸೂನ್‌ ಅಥ್ವಾ ಆಕ್ಸುನ್‌ ಕಂಪನಿ ಥರ್ಡ್‌ ಪಾರ್ಟಿ ಹ್ಯಾಕಿಂಗ್‌ ಡೇಟಾವನ್ನ ಚೀನಾದ ಸರ್ಕಾರಿ ಸಂಸ್ಥೆಗಳು, ಭದ್ರತಾ ಹಾಗೂ ಸರ್ಕಾರಿ ಒಡೆತನದ ಕಂಪನಿಗಳಿಗೆ ಮಾರಾಟ ಮಾಡುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ 570 ಫೈಲ್‌ಗಳು, ಚಾಟ್‌ ಲಾಗ್‌ಗಳು ಸಿಕ್ಕಿವೆ. ಭಾರತದ 95.2 ಜಿಬಿಯಷ್ಟು ಇಮಿಗ್ರೇಷನ್‌ ಡೇಟಾವನ್ನು ಈ ಕಂಪನಿ ಕಲೆಕ್ಟ್‌ ಮಾಡಿದೆ ಅನ್ನೋ ವಿಚಾರವನ್ನೂ ಅದರಲ್ಲಿ ಹೇಳಲಾಗಿದೆ. ಇನ್ನು ಈ ರಿಪೋರ್ಟ್‌ ಬಂದ್‌ಮೇಲೆ ಇದು ಹೊಸ ಹ್ಯಾಕಿಂಗ್‌ಗೆ ಸಂಬಂಧಿಸಿದೆಯಾ ಅಥ್ವಾ ಹಳೆಯ ರಿಪೋರ್ಟಾ ಅಂತ ಭಾರತದ ಕಂಪ್ಯೂಟರ್‌ ಎಮರ್ಜೆನ್ಸಿ ಟೀಮ್‌ (Cert-In) ತನಿಖೆ ಶುರುಮಾಡಿದೆ. EPFO ಹಾಗೂ BSNLಯೂಸರ್‌ಗಳ ದಾಖಲೆ ಲೀಕ್‌ ಆಗಿರೋದು ಗೊತ್ತಾಗಿದೆ.. ಆದ್ರೆ EPFOದ ಡೇಟಾ 2018ರ ಸಂದರ್ಭದ್ದು ಅಂತ Cert-In ಹೇಳಿದೆ. ಇನ್ನು ಮುಖ್ಯವಾಗಿ ಮೈಕ್ರೋಸಾಫ್ಟ್‌, ಆಪಲ್‌ ಹಾಗೂ ಗೂಗಲ್‌ ಕಛೇರಿಗಳನ್ನ ಹ್ಯಾಕ್‌ ಮಾಡೋಕೆ ಚೀನಾ ಟ್ರೈ ಮಾಡಿದೆ. ಆ ಕಡೆ ತೈವಾನ್‌ನ 459ಜಿಬಿ ರೋಡ್‌ ಮ್ಯಾಪಿಂಗ್‌ ಡೇಟಾವನ್ನ ಕಲೆಹಾಕಿದೆ. ಥೈಲ್ಯಾಂಡ್‌ನ 10 ಸರ್ಕಾರಿ ಏಜೆನ್ಸಿಗಳ ವೆಬ್‌ಸೈಟ್ಗೆ ಕೈ ಹಾಕಿದೆ. ಇಂಟ್ರಸ್ಟಿಂಗ್‌ ಅಂದ್ರೆ ಇದೇ ಚೀನಾ ಕಂಪನಿ 2022ರಲ್ಲಿ ಅಮೆರಿಕ ನೇತೃತ್ವದ ನ್ಯಾಟೋಗೂ ಕೆಲವು ಡೇಟಾವನ್ನ ಸೇಲ್‌ ಮಾಡಿರೋ ಬಗ್ಗೆ ಚಾಟ್‌ ಲಾಗ್‌ಗಳಿಂದ ತಿಳಿದು ಬಂದಿದೆ. ಆದ್ರೆ ಈ ಬಗ್ಗೆ ಮಾಹಿತಿ ಕ್ಲಿಯರ್‌ ಇಲ್ಲ. ಉಳಿದಂತೆ ಬ್ರಿಟನ್‌ನ ಹಲವು ಇಲಾಖೆಗಳ ಮೇಲೆ ಈ ಚೀನಾ ಕಂಪನಿ ತನ್ನ ಕೈಚಳಕ ತೋರಿಸಿದೆ.

-masthmagaa.com

Contact Us for Advertisement

Leave a Reply