ಗಡಿಯಲ್ಲಿರೋ ಚೀನಾದ ವಾಯುನೆಲೆಗಳಲ್ಲಿ ಏರ್​​ಫೋರ್ಸ್ ಉಪಸ್ಥಿತಿ

masthmagaa.com:

ಲೈನ್ ಆಫ್ ಕಂಟ್ರೋಲ್​​​ನ ಆ ಕಡೆ ಮೂರು ವಾಯುನೆಲೆಗಳಲ್ಲಿ ಚೀನಾ ಏರ್​ಫೋರ್ಸ್​​​​​ ಇನ್ನೂ ಕೂಡ ಉಪಸ್ಥಿತಿಯನ್ನು ಹೊಂದಿದೆ ಅಂತ ಭಾರತೀಯ ವಾಯುಸೇನೆ ಮಾಹಿತಿ ನೀಡಿದೆ. ಏರ್​ಫೋರ್ಸ್​​ನ 89ನೇ ವಾರ್ಷಿಕೋತ್ಸವ ಉದ್ದೇಶಿಸಿ ಮಾತನಾಡಿದ ಏರ್​ಚೀಪ್ ಮಾರ್ಷಲ್ ವಿಆರ್ ಚೌಧರಿ, ಚೀನಾದಂತೆಯೇ ನಾವು ಕೂಡ ಸಂಪೂರ್ಣವಾಗಿ ನಿಯೋಜನೆಗೊಂಡಿದ್ದು, ನಮ್ಮ ಕಡೆಯಿಂದ ಕಂಪ್ಲೀಟಾಗಿ ಸಿದ್ಧರಾಗಿದ್ದೀವಿ ಅಂತ ಹೇಳಿದ್ದಾರೆ. ಜೊತೆಗೆ ಲಡಾಖ್ ಪ್ರದೇಶದ ಅತಿ ಎತ್ತರದ ಪ್ರದೇಶದಲ್ಲಿ ದಾಳಿಗಳನ್ನು ನಡೆಸುವಲ್ಲಿ ಚೀನೀ ಏರ್​​ಫೋರ್ಸ್​​ ವೀಕ್ ಆಗಿದೆ. ರಫೇಲ್ ಮತ್ತು ಅಪಾಚೆ ಹೆಲಿಕಾಪ್ಟರ್ ಆಗಮನ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿದೆ. ಆದ್ರೆ 5ನೇ ಜನರೇಷನ್​ನ ಯುದ್ಧ ವಿಮಾನಗಳೂ ಬೇಕು. ಸದ್ಯ ಡಿಆರ್​ಡಿಒ ಅಭಿವೃದ್ಧಿಪಡಿಸುತ್ತಿರುವ AMCA (ಅಡ್ವಾನ್ಸ್ಡ್​ ಮೀಡಿಯಂ ಕೊಂಬಾಟ್ ಏರ್​​ಕ್ರಾಫ್ಟ್​​) ಈ ಕೊರತೆಯನ್ನು ನೀಗಿಸಲಿದೆ ಅಂತ ಹೇಳಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಚೀನಾ ಮತ್ತು ಪಾಕಿಸ್ತಾನ ಒಂದೇ ಸಮಯದಲ್ಲಿ ದಾಳಿ ನಡೆಸಿದ್ರೂ ಕೂಡ ಎದುರಿಸಲು ನಾವು ಶಕ್ತವಾಗಿದ್ದೀವಿ ಅಂತ ವಿಆರ್ ಚೌಧರಿ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply