ಕಿಡ್ನಾಪ್​ ಆಗಿದ್ದ ಭಾರತೀಯನನ್ನ PPE ಕಿಟ್​ ಸಮೇತ ವಾಪಸ್​ ತಂದು ಬಿಟ್ಟ ಚೀನಾ ಸೇನೆ

masthmagaa.com:

ಅರುಣಾಚಲ ಪ್ರದೇಶದ ಲೈನ್‌ ಆಫ್‌ ಆಕ್ಚುವಲ್​ ಕಂಟ್ರೋಲ್‌ ಬಳಿ ಕಾಣೆಯಾಗಿದ್ದ ಭಾರತೀಯ ಯುವಕ ಮಿರಾಮ್‌ ತರೋನ್‌ ಭಾರತಕ್ಕೆ ವಾಪಸ್​ ಆಗಿದ್ದಾನೆ. ಈತನನ್ನ ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ ಭಾರತೀಯ ಸೇನೆಗೆ ಹಸ್ತಾಂತರಿಸಿದೆ ಅಂತ ಕೇಂದ್ರ ಸಚಿವ ಕಿರಣ್‌ ರಿಜಿಜು ಮಾಹಿತಿ ಕೊಟ್ಟಿದ್ದಾರೆ. ಮಿರಾಮ್​ ತರೋನ್​ಗೆ ಚೀನಾ ಸೇನೆ ಪಿಪಿಇ ಕಿಟ್​ ಧರಿಸಿ ಫುಲ್ ಕವರ್ ಮಾಡಿದೆ, ಅಲ್ಲದೆ ಆತನನ್ನ ಹಸ್ತಾಂತರ ಮಾಡಲು ಬಂದಿದ್ಧ ಚೀನಾ ಸೇನೆಯವರು, ಇತ್ತ ಭಾರತೀಯ ಸೇನೆಯವರು ಎಲ್ಲರೂ ಪಿಪಿಇ ಕಿಟ್​ ಧರಿಸಿ ಫುಲ್​ ಕವರ್ ಆಗಿದ್ರು. ಜನವರಿ 19ರಂದು ಮಿರಾಮ್​ ತರೋನ್​ ನಾಪತ್ತೆಯಾಗಿದ್ದ. ಈತನನ್ನ ಚೀನಾ ಸೇನೆ ಅಪಹರಣ ಮಾಡಿದೆ ಅಂತ ವರದಿಯಾಗಿತ್ತು. ಯಾಕೆ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.

-masthmagaa.com

Contact Us for Advertisement

Leave a Reply