ಹಾಂಗ್​​ಕಾಂಗ್​ನಲ್ಲಿ ಕಾಣಿಸಿಕೊಂಡ ಜಾಕ್​​ಮಾ!

masthmagaa.com:

ಅಲಿಬಾಬಾ ಸಂಸ್ಥೆಯ ಸಂಸ್ಥಾಪಕ ಜಾಕ್​ ಮಾ ಮೇಲೆ ಚೀನೀ ಅಧಿಕಾರಿಗಳ ಕಣ್ಣು ಬಿದ್ದ ಮೇಲೆ ಕಾಣಿಸಿಕೊಳ್ಳೋದೇ ಕಡಿಮೆಯಾಗಿದೆ. ಕಳೆದ ವರ್ಷ ಜಾಕ್​ ಮಾ ಚೀನಾ ಸರ್ಕಾರದ ಕೆಲವೊಂದು ನೀತಿಗಳು ಮತ್ತು ಹಣಕಾಸು ಪ್ರಾಧಿಕಾರದ ಕ್ರಮಗಳನ್ನು ವಿರೋಧಿಸಿದ ಬೆನ್ನಲ್ಲೇ ಅವರ ಮೇಲೆ ಮುಗಿಬಿದ್ದಿತ್ತು ಚೀನೀ ಅಧಿಕಾರಿಗಳ ಪಡೆ.. ಇದಾದ ಬಳಿಕ ಜಾಕ್ ಮಾ ಕಾಣಿಸಿಕೊಂಡಿದ್ದೇ ಕಡಿಮೆ. ಇದೀಗ ಜಾಕ್ ಮಾ ಹಾಂಗ್​ಕಾಂಗ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಇಲ್ಲಿ ತಮ್ಮ ಸಂಸ್ಥೆಯ ಸಿಬ್ಬಂದಿ ಜೊತೆ ಮೀಟಿಂಗ್ ಮಾಡಿದ್ದಾರೆ ಅಂತ ಮೂಲಗಳು ಮಾಹಿತಿ ನೀಡಿವೆ. ಆದ್ರೆ ಈ ಬಗ್ಗೆ ಅಲಿಬಾಬಾ ಸಂಸ್ಥೆ ಪ್ರತಿಕ್ರಿಯಿಸಲು ನಿರಾಕರಿಸಿದೆ.

-masthmagaa.com

Contact Us for Advertisement

Leave a Reply