‌ಹೆಚ್ಚಾದ ಇನ್‌ಫ್ಲುಯೆಂಜ ಕೇಸ್‌ಗಳು! ಚೀನಾದಲ್ಲಿ ಮತ್ತೆ ಲಾಕ್‌ಡೌನ್?

masthmagaa.com:

ಇತ್ತೀಚಿಗಷ್ಟೇ ಜೀರೋ ಕೋವಿಡ್‌ ನೀತಿ ಅನ್ನೋ ಪಂಜರದಿಂದ ಹೊರಬಂದಿರೋ ಚೀನಾ ಜನರಿಗೆ ಮತ್ತೆ ಲಾಕ್‌ಡೌನ್‌ ಭೀತಿ ಎದುರಾಗಿದೆ. ಕೊರೊನಾ ಬಳಿಕ ಇದೀಗ ಇನ್‌ಫ್ಲುಯೆಂಜಾ ಕೇಸ್‌ಗಳು ಜಾಸ್ತಿಯಾಗ್ತಿವೆ. ಹೀಗಾಗಿ ದೇಶದಲ್ಲಿ ಮತ್ತೆ ಲಾಕ್‌ಡೌನ್‌ ಹೇರಲಾಗುತ್ತೆ ಅಂತ ಅಲ್ಲಿನ ಜನ ಸೋಷಿಯಲ್‌ ಮೀಡಿಯಾದಲ್ಲಿ ಚೀನಾ ಸರ್ಕಾರದ ವಿರುದ್ದ ವ್ಯಂಗ್ಯವಾಗಿ ಮಾತಾಡ್ತಿದಾರೆ. ಯಾಕಂದ್ರೆ ಕಳೆದ ವಾರ 25.1% ಇದ್ದ ಫ್ಲು ಪಾಸಿಟಿವಿಟಿ ರೇಟ್‌, ಇದೀಗ 41.6%ಗೆ ಏರಿಕೆಯಾಗಿದೆ. ಕೇಸ್‌ಗಳು ದಿಢೀರ್‌ಆಗಿ ಏರಿಕೆಯಾಗ್ತಿದ್ದು, ಜನರಿಗೆ ಫ್ಲು ಮೆಡಿಸಿನ್‌ಗಳನ್ನ ಪೂರೈಕೆ ಮಾಡೋಕೆ ಆಗ್ತಿಲ್ಲ ಅಂತ ಹೇಳಲಾಗ್ತಿದೆ. ಅದ್ರಲ್ಲೂ ಈ ಫ್ಲು ಕೇಸ್‌ಗಳು ಜಾಸ್ತಿಯಾಗ್ತಿರೊ ಹಿನ್ನಲೆಯಲ್ಲಿ Shaanxi ಪ್ರಾಂತ್ಯದ ಶಿಯಾನ್‌ ನಗರದಲ್ಲಿ ಬ್ಯುಸಿನೆಸ್‌ಗಳನ್ನ, ಶಾಲೆಗಳನ್ನ ಹಾಗೂ ಇತರ ಜನಭರಿತ ಸ್ಥಳಗಳನ್ನ ಮುಚ್ಚುವಂತೆ ಅನೌನ್ಸ್‌ ಮಾಡಲಾಗಿದೆ. ಇದು ಅಲ್ಲಿನ 1.3 ಕೋಟಿ ಜನರನ್ನ ಚಿಂತೆಗೆ ಹಾಗೂ ಆಕ್ರೋಶಕ್ಕೆ ಒಳಗಾಗುವಂತೆ ಮಾಡಿದೆ. ಮತ್ತೆ ಎಲ್ಲಿ ಕೊರೊನಾ ಟೈಮಲ್ಲಿ ಕೂಡಿ ಹಾಕಿದ ರೀತಿನೇ ಲಾಕ್‌ಡೌನ್‌ ಹೇರಲಾಗುತ್ತೊ ಅಂತ ಕಳವಳ ವ್ಯಕ್ತಪಡಿಸ್ತಿದಾರೆ. ಕೆಲವರು ಲಾಕ್‌ಡೌನ್‌ ಮಾಡುವ ಬದಲು ಜನರಿಗೆ ಲಸಿಕೆಗಳನ್ನ ಕೊಡಬೇಕು ಅಂತ ಸಜೆಸ್ಟ್‌ ಮಾಡಿದ್ದಾರೆ ಅಂತ ವರದಿಯಾಗಿದೆ.
ಇನ್ನೊಂದ್‌ ಕಡೆ ತೈವಾನ್‌ ಸಂಘರ್ಷ ಹಾಗೂ ಇನ್ನಿತರ ಕಾರಣಗಳಿಂದ ಉದ್ವಿಗ್ನತೆ ಹೆಚ್ತಿರೊ ಹಿನ್ನೆಲೆಯಲ್ಲಿ ದೇಶದ ರಕ್ಷಣೆಗೆ ಯುದ್ದಕಾಲದ ಕಾನೂನನ್ನ ಅಂದ್ರೆ ಯುದ್ದದ ಟೈಮಲ್ಲಿ ದೇಶದ ನಿಯಮಗಳು ಹಾಗೂ ಡ್ಯುಟಿಗಳು ಏನ್‌ ಇರಬೇಕು ಅದನ್ನ ಜಾರಿಗೊಳಿಸೋಕೆ ಚೀನಾ ಮುಂದಾಗಿದೆ. ಈ ಕಾನೂನು ಜಾರಿಗೊಳಿಸಿ ದೇಶದ ಸಾರ್ವಭೌಮತೆಯ ರಕ್ಷಣೆಗೆ ಯುದ್ದಸನ್ನದ್ಧತೆಯನ್ನ ತೀವ್ರಗೊಳಿಸುವಂತೆ ಚೀನಾ ಸೇನೆ ಅಲ್ಲಿನ ಸರ್ಕಾರದ ಮೇಲೆ ಒತ್ತಡ ಹಾಕ್ತಿದೆ. ಪ್ರಸ್ತುತ ಚೀನಾದಲ್ಲಿ ನಡೀತಿರೊ ಸಂಸತ್ತಿನ ಅಧಿವೇಶನದಲ್ಲಿ ಪೀಪಲ್ಸ್‌ ಲಿಬರೇಶನ್‌ ಆರ್ಮಿ ಹಾಗೂ ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌ನ ಪ್ರತಿನಿಧಿಗಳು ಯುದ್ದಕಾಲದ ಕಾನೂನನ್ನ ತುರ್ತಾಗಿ ಜಾರಿಗೊಳಿಸುವ ಅಗತ್ಯವಿದೆ ಅಂತ ವಾದಿಸಿದ್ದಾರೆ ಅಂತ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಅಂದ್ಹಾಗೆ ತೈವಾನ್‌ ವಿಷಯದಲ್ಲಿ 2027ರ ಮೊದಲೇ ಯುದ್ದ ಭುಗಿಲೇಳುವ ಸಾಧ್ಯತೆಯಿದೆ ಅಂತ ಅಮೆರಿಕದ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಯುದ್ದಕಾಲದ ಕಾನೂನು ಜಾರಿಗೆ ತರುವಂತೆ ಚೀನಾದಲ್ಲಿ ಆಗ್ರಹ ಹೆಚ್ಚಾಗ್ತಿರೋದಕ್ಕೆ ತೈವಾನ್‌ ಬಿಕ್ಕಟ್ಟೇ ಪ್ರಮುಖ ಕಾರಣ ಅಂತ ಸೇನಾ ತಜ್ಞರು ವಿಶ್ಲೇಷಿಸಿದ್ದಾರೆ.

-masthmagaa.com

Contact Us for Advertisement

Leave a Reply