ದುಡ್ಡಿಗಾಗಿ ಗಲಾಟೆ! ಪಾಕ್‌-ಚೀನಾ ದೋಸ್ತಿಯಲ್ಲಿ ಬಿರುಕು!

masthmagaa.com:

ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಅದರ ಬಾಯಿಗೆ ನೀರು ಬಿಟ್ಟು ಚೀನಾ ಕಾಪಾಡ್ತಾ ಬಂದಿದೆ. ಪಾಕ್‌ನ ಚಡ್ಡಿದೋಸ್ತ್‌ ಅಂತಾನೇ ಚೀನಾ ಕರೆಸಿಕೊಳ್ಳುತ್ತೆ. ಆದ್ರೆ ಈಗ ಆಪ್ತಮಿತ್ರರ ಸಂಬಂಧದಲ್ಲಿ ಬಿರುಕು ಮೂಡ್ತಿದೆ. ಪಾಕ್‌ನಲ್ಲಿರೋ ಕಲ್ಲಿದ್ದಲು ಗಣಿ ಕಂಪನಿಯ ಉತ್ಪಾದನೆಯನ್ನ ಕಡಿತಗೊಳಿಸೋಕೆ ಚೀನಾ ಮುಂದಾಗಿದೆ. ಪಾಕ್‌ನಲ್ಲಿ ಕಾರ್ಯನಿರ್ವಹಿಸ್ತಿರೊ‌ ಕೋಲ್ ಮೈನಿಂಗ್‌ ಕಂಪನಿಯ 60 ಮಿಲಿಯನ್‌ ಡಾಲರ್‌ ಅಂದ್ರೆ 492 ಕೋಟಿ ರೂಪಾಯಿ ಪಾವತಿಯನ್ನ ಪಾಕ್‌ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಹಾಗೂ ಅದನ್ನ ಪಾವತಿಸೋಕೆ ಅಲ್ಲಿನ ಸರ್ಕಾರ ವಿಫಲವಾಗಿದೆ. ಹೀಗಾಗಿ ಕಂಪನಿ ತನ್ನ ಅರ್ಧದಷ್ಟು ಉತ್ಪಾದನೆಯನ್ನ ಕಡಿತಗೊಳಿಸ್ತಿದೆ ಅಂತ ಚೀನಾ ಅನೌನ್ಸ್‌ ಮಾಡಿದೆ. ಇತ್ತ ಹಣಕಾಸು ಬಿಕ್ಕಟ್ಟಿನಿಂದ ಪಾಕ್‌ಗೆ ಬಿಲ್‌ಗಳನ್ನ ಪಾವತಿ ಮಾಡೋಕೆ ಆಗ್ತಿಲ್ಲ. ಕಳೆದ ವರ್ಷ ಮೇನಿಂದ ಚೀನಾ ಕಂಪನಿಯ ಬಿಲ್‌ನ್ನ ಪಾಕ್‌ ಪಾವತಿಸಿಲ್ಲ. ಇದು ಚೀನಾ-ಪಾಕಿಸ್ತಾನ ಎಕನಾಮಿಕ್‌ ಕಾರಿಡಾರ್‌ ಯೋಜನೆ ಮೇಲೆ ಪರಿಣಾಮ ಬೀರ್ತಿದೆ. ಹೀಗಾಗಿ ಚೀನಾ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಇನ್ನು ಪಾಕ್‌ನ ಪವರ್‌ ಪ್ಲ್ಯಾಂಟ್‌ಗಳಿಗೆ ಚೀನಾದ ಮೈನಿಂಗ್‌ ಕಂಪನಿ ಕಲ್ಲಿದ್ದಲ್ಲನ್ನ ಪೂರೈಸುತ್ತೆ. ಇದ್ರಿಂದ ಆವ್ರೇಜ್‌ 1,360 ಮೆಗಾವ್ಯಾಟ್‌ನಷ್ಟು ವಿದ್ಯುತ್‌ ಉತ್ಪಾದನೆ ಆಗ್ತಿದೆ. ಆದ್ರೆ ಇದೀಗ ತನ್ನ ಅರ್ಧದಷ್ಟು ಉತ್ಪಾದನೆ ಕಡಿತಗೊಳಿಸೋಕೆ ಚೀನಾ ಮುಂದಾಗಿದ್ದು, ಇದ್ರಿಂದ ಪಾಕ್‌ಗೆ ವಿದ್ಯುತ್‌ ಸಮಸ್ಯೆ ಹೆಚ್ಚಾಗಲಿದೆ. ಈಗಗಾಲೇ ವಿದ್ಯುತ್‌ ವೆಚ್ಚವನ್ನ ಕಡಿಮೆ ಮಾಡೋಕೆ ಅನೇಕ್‌ ಪ್ಲ್ಯಾನ್‌ಗಳನ್ನ ಮಾಡ್ತಿರೊ ಪಾಕ್‌ಗೆ ಚೀನಾದ ಈ ನಿರ್ಧಾರ ದೊಡ್ಡ ಹೊಡೆತ ಕೊಟ್ಟಂತಾಗಿದೆ. ಇನ್ನು ಬಾಕಿ ಉಳಿಸಿಕೊಂಡಿರೊ ಹಣವನ್ನ ಪೇ ಮಾಡಬೇಕು ಅಂದ್ರೂ ಪಾಕ್‌ ಸರ್ಕಾರದ ಬಳಿ ಹಣವಿಲ್ಲ. ಅಲ್ದೇ ಚೀನಾನೇ ಪಾಕ್‌ನ ಜೀವ ಉಳಿಸೋಕೆ ಒಟ್ಟು 1.3 ಬಿಲಿಯನ್‌ ಹಣಕಾಸು ನೆರವು ನೀಡೋಕೆ ಒಪ್ಪಿದ್ದು, ಇತ್ತೀಚಿಗಷ್ಟೇ ಕೊನೆಯ ಕಂತಾಗಿ 300 ಮಿಲಿಯನ್‌ ಡಾಲರ್‌ ಹಣವನ್ನ ನೀಡಿತ್ತು. ಚೀನಾದ ಹಣದಿಂದಲೇ ತನ್ನ ಆಂತರಿಕ ಸಮಸ್ಯೆಯನ್ನ ಮ್ಯಾನೇಜ್‌ ಮಾಡ್ತಿರೊ ಪಾಕ್‌, ಚೀನಾಗೆ ಹಣ ಪಾವತಿಸೋದು ಸದ್ಯಕ್ಕೆ ಆಗದ ಮಾತು. ಚೀನಾಗೆ ಪೇ ಮಾಡೋಕೆ ಮತ್ತೆ ಬೇರೆ ರಾಷ್ಟ್ರಗಳ ಬಳಿ ಭಿಕ್ಷಾಪಾತ್ರೆ ಹಿಡಿದುಕೊಂಡು ಹೋಗಬೇಕಷ್ಟೆ. ಅಂದ್ಹಾಗೆ ಇತ್ತೀಚಿಗಷ್ಟೇ ಚೀನಾದ ನಾಗರಿಕರು ಪಾಕ್‌ನಲ್ಲಿ ನಡೆಸುತ್ತಿರುವ ಕೆಲ ಬ್ಯುಸಿನೆಸ್‌ಗಳನ್ನ ಕರಾಚಿ ಪೊಲೀಸರು ತಾತ್ಕಾಲಿಕವಾಗಿ ಕ್ಲೋಸ್ ಮಾಡೋದಾಗಿ ಹೇಳಿದ್ರು. ಅದಾದ ಕೆಲ ದಿನ ಬಳಿಕ ಚೀನಾ ಈ ನಿರ್ಧಾರ ತೆಗೆದುಕೊಂಡಿದೆ.

-masthmagaa.com

Contact Us for Advertisement

Leave a Reply