ಪಾಕ್‌ನಲ್ಲಿರೊ ತನ್ನ ರಾಯಭಾರ ಕಚೇರಿಯ ಕಾನ್ಸುಲರ್‌ ವಿಭಾಗ ಮುಚ್ಚಿದ ಚೀನಾ! ಯಾಕೆ?

masthmagaa.com:

ತಾಂತ್ರಿಕ ಸಮಸ್ಯೆಯಿಂದ ಪಾಕಿಸ್ತಾನದಲ್ಲಿರೊ ತನ್ನ ರಾಯಭಾರ ಕಚೇರಿಯ ಕಾನ್ಸುಲರ್‌ ವಿಭಾಗವನ್ನ ಚೀನಾ ತಾತ್ಕಾಲಿಕವಾಗಿ ಮುಚ್ಚಿದೆ. ಈ ಬಗ್ಗೆ ಚೀನಾ ರಾಯಭಾರ ಕಚೇರಿ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ. ಆದ್ರೆ ಸಮಸ್ಯೆ ಏನು ಹಾಗೂ ಎಲ್ಲಿಯವರೆಗೆ ಕಚೇರಿಯನ್ನ ಮುಚ್ಚಲಾಗುತ್ತೆ ಅನ್ನೊ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಅಂದ್ಹಾಗೆ ಇತ್ತೀಚಿಗೆ ಪಾಕ್‌ನಲ್ಲಿರೊ ಚೀನಾ ಪ್ರಜೆಗಳಿಗೆ ಭದ್ರತಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದಿರಿ ಅಂತ ಸೂಚಿಸಲಾಗಿತ್ತು. ಅಲ್ದೇ ಕಳೆದ ವರ್ಷದಿಂದ ಟಿಟಿಪಿ ಅಥ್ವಾ ಪಾಕ್‌ ತಾಲಿಬಾನ್‌ಗಳಿಂದ ಪಾಕ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ತಾಯಿವೆ. ಜೊತೆಗೆ ಕೆಲ ಉಗ್ರ ಗುಂಪುಗಳು ಚೀನಿಯರನ್ನ ಟಾರ್ಗೆಟ್‌ ಮಾಡಿ ದಾಳಿ ಮಾಡಿವೆ. ಹೀಗಾಗಿ ಚೀನಾ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply