ಸಮುದ್ರದಲ್ಲಿ ರಾಶಿ ರಾಶಿ ಬೋಟ್​​: ಚೀನಾಗೆ ವಾರ್ನಿಂಗ್‌ ಕೊಟ್ಟ ಅಮೆರಿಕ!

masthmagaa.com:

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಕಾಟ ಜಾಸ್ತಿಯಾಗ್ತಿದೆ ಅಂತ ಫಿಲಿಪ್ಪೀನ್ಸ್​ ಮತ್ತು ತೈವಾನ್​ನಂತಹ ದೇಶಗಳು ಪದೇಪದೆ ಜಗತ್ತಿನ ಗಮನ ಸೆಳೆಯುತ್ತಿರೋ ನಡುವೆಯೇ ಚೀನಾಗೆ ಅಮೆರಿಕ ಖಡಕ್ ವಾರ್ನಿಂಗ್ ಕೊಟ್ಟಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಫಿಲಿಪ್ಪೀನ್ಸ್​ನ ಶಸ್ತ್ರಪಡೆಗಳ ಮೇಲೆ, ಹಡಗುಗಳ ಮೇಲೆ, ಯುದ್ಧವಿಮಾನಗಳ ಮೇಲೆ ಚೀನಾ ಶಸ್ತ್ರಸಜ್ಜಿತ ದಾಳಿ ನಡೆಸುತ್ತಿದೆ. ಇದು ಅಮೆರಿಕ ಮತ್ತು ಫಿಲಿಪ್ಪೀನ್ಸ್​ ನಡುವೆ ಆಗಿರೋ ರಕ್ಷಣಾ ಒಪ್ಪಂದದ ಜವಾಬ್ದಾರಿಗಳನ್ನ ಪ್ರಚೋದಿಸುತ್ತಿದೆ. ಅಂದ್ರೆ ಫಿಲಿಪ್ಪೀನ್ಸ್​ ಪರ ಅಮೆರಿಕ ಧಾವಿಸಬಹುದು ಅನ್ನೋಥರ ಯುಎಸ್​ ಸ್ಟೇಟ್​ ಡಿಪಾರ್ಟ್​​ಮೆಂಟ್​ನ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ. ಅಂದ್ಹಾಗೆ ಮಾರ್ಚ್​ 7ನೇ ತಾರೀಖು ವಿಟ್ಸನ್​ ಜಲಸಂಧಿಯಲ್ಲಿ (Whitsun Reef) ಚೀನಾದ 200 ಬೋಟ್​​ಗಳು ಕಾಣಿಸಿಕೊಂಡಿದ್ದವು. ಅಂದ್ರೆ ಫಿಲಿಪ್ಪೀನ್ಸ್​ಗೆ ತುಂಬಾ ಹತ್ತಿರದಲ್ಲಿದ್ದವು. ಅದಾದ ಬಳಿಕ ಅಷ್ಟೂ ಬೋಟ್​ಗಳು ದಕ್ಷಿಣ ಚೀನಾ ಸಮುದ್ರದ ವಿಶಾಲ ಪ್ರದೇಶಕ್ಕೆ ಚದುರಿಕೊಂಡಿವೆ ಅಂತ ಫಿಲಿಪ್ಪೀನ್ಸ್ ಹೇಳ್ತಿದೆ.

-masthmagaa.com

Contact Us for Advertisement

Leave a Reply