ಚೀನಾ: ಪಕ್ಕದ ಮನೆಯವನ ಮೇಲಿನ ಸಿಟ್ಟಿಗೆ 1,100 ಕೋಳಿಗಳನ್ನ ಸಾಯಿಸಿ ಜೈಲು ಪಾಲಾದ ವ್ಯಕ್ತಿ

masthmagaa.com:

ಗಂಡ ಹೆಂಡತಿ ಜಗಳದಲ್ಲಿ ಮಗು ಬಡವಾಯ್ತ ಅನ್ನೊ ಗಾದೆಯಿದೆ. ಆದ್ರೆ ನೆರೆಹೊರೆಯವರ ಜಗಳದಲ್ಲಿ ಅಮಾಯಕ ಕೋಳಿಗಳು ಬಲಿಯಾಗಿರೊ ಘಟನೆ ಚೀನಾದಲ್ಲಿ ನಡಡೆದಿದೆ. ಗು ಅನ್ನೊ ವ್ಯಕ್ತಿಯೊಬ್ಬ ತನ್ನ ಪಕ್ಕದ ಮನೆಯವರ 1,100 ಕೋಳಿಗಳನ್ನ ಸಾಯಿಸಿದ ಹಿನ್ನೆಲೆ 6 ತಿಂಗಳ ಜೈಲಿಗೆ ಗುರಿಯಾಗಿದ್ದಾನೆ. ಗು ಹಾಗೂ ಆತನ ಪಕ್ಕದ ಮನೆಯ ಜಾಂಗ್‌ ನಡುವೆ ಕಳೆದ ಏಪ್ರಿಲ್‌ 2022ರಿಂದ ಜಗಳ ನಡಿತಾನೆ ಇದೆ. ಗುʻನ ಅನುಮತಿಯಿಲ್ದೇ ಜಾಂಗ್‌ ಆತನ ಗಿಡಗಳನ್ನ ಕಟ್‌ ಮಾಡಿದ್ದ. ಅದಕ್ಕೆ ಸೇಡು ತೀರಿಸಿಕೊಳ್ಳಲು ಜಾಂಗ್‌ರ ಕೋಳಿ ಫಾರ್ಮ್‌ಗೆ ಹೋಗಿ 1100 ಕೋಳಿಗಳನ್ನ ಗು ಸಾಯಿಸಿದ್ದಾನೆ. ಇದೀಗ ಈತನಿಗೆ ಅಲ್ಲಿನ ಕೋರ್ಟ್‌ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

-masthmagaa.com

Contact Us for Advertisement

Leave a Reply