‌ಮಯಾನ್ಮಾರ್ ಗಡಿಯಲ್ಲಿ ಚೀನಾ ಯುದ್ದಾಭ್ಯಾಸ! ದೋಸ್ತಿಗಳ ಮಧ್ಯ ವೈಮನಸ್ಸು!

masthmagaa.com:

ಚೀನಾ-ಮಯನ್ಮಾರ್‌ ಗಡಿಯಲ್ಲಿ ಶನಿವಾರದಿಂದ ಚೀನಾ ಮಿಲಿಟಿರಿ ಅಭ್ಯಾಸ ಶುರು ಮಾಡಿದೆ ಅಂತ ಅಲ್ಲಿನ ಸೇನೆ ಹೇಳಿಕೆ ನೀಡಿದೆ. ಕೆಲವು ದಿನಗಳ ಹಿಂದಷ್ಟೆ ಆಗ್ನೇಯ ದೇಶಗಳಿಗೆ ಹೋಗ್ತಿದ್ದ ಚೀನೀ ಸರಕು ಸಾಗಾಣಿಕೆ ಲಾರಿಗಳಿಗೆ ಮಯನ್ಮಾರ್‌ನಲ್ಲಿ ಬೆಂಕಿ ಹಚ್ಚಲಾಗಿತ್ತು. ಮಯನ್ಮಾರ್‌ ಇದನ್ನ ಬಂಡುಕೋರ ಗುಂಪುಗಳ ದಾಳಿ ಅಂತೇಳಿತ್ತು. ಇದೇ ವಿಚಾರವಾಗಿ ಚೀನಾ ಅಧಿಕಾರಿಯೊಬ್ರು ಮಯನ್ಮಾರ್‌ಗೆ ತೆರಳಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ರು. ಇದರ ಬೆನ್ನಲ್ಲೇ ಮಯನ್ಮಾರ್‌ ಗಡಿ ಬಳಿ ಇರೊ ಮಂಘೈ, ಮಾನ್ಲಿಂಗ್‌ ಹಾಗೂ ಖಿಂಗ್ಶುಹೆ ಎಂಬ ಹಳ್ಳಿಗಳಲ್ಲಿ ಚೀನಾ ಪಡೆಗಳು ಅಭ್ಯಾಸ ನಡೆಸಿವೆ. ಚೀನಾ ತನ್ನ ಭದ್ರತೆಯ ಕಾಳಜಿಯಿಂದ ಈ ಅಭ್ಯಾಸ ಕೈಗೊಳ್ಳಲಾಗಿದೆ ಅಂತ ಹೇಳಿಕೊಂಡಿದೆ.

-masthmagaa.com

Contact Us for Advertisement

Leave a Reply