ಅಫ್ಘಾನಿಸ್ತಾನದ ಗಣಿ ಮೇಲೆ ಚೀನಾ ಕಣ್ಣು!

masthmagaa.com:

ಚೀನಾದ ಮೈನಿಂಗ್ ಕಂಪನಿ ಮೆಟಲುರ್ಜಿಕಲ್ ಕಾರ್ಪ್​ ಆಫ್ ಚೀನಾ ಅಫ್ಘಾನಿಸ್ತಾನದ ಕಾಬೂಲ್​​​​​ನಲ್ಲಿ ಕಚೇರಿ ಓಪನ್ ಮಾಡಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಟೇಕೋವರ್ ವೇಳೆಯೇ ಚೀನೀಯರು ಫುಲ್ ನೈಸ್ ಮಾಡೋಕೆ ಶುರು ಮಾಡಿದ್ರು. ಆಗ್ಲೇ ಅಫ್ಘಾನಿಸ್ತಾನದ ಗಣಿ ಸಂಪತ್ತಿನ ಮೇಲೆ ಚೀನಾ ಕಣ್ಣು ಹಾಕಿದೆ ಅಂತ ಹೇಳಲಾಗಿತ್ತು. ಅದಕ್ಕೆ ಸರಿಯಾಗಿ ಕಳೆದ ನವೆಂಬರ್​​ನಲ್ಲಿ ಐದು ಚೀನೀ ಕಂಪನಿಗಳು ವೀಸಾ ತಗೊಂಡು ಅಫ್ಘಾನಿಸ್ತಾನಕ್ಕೆ ಹೋಗಿ ಇನ್​ಸ್ಪೆಕ್ಷನ್ ಮಾಡ್ಕೊಂಡು ಬಂದಿದ್ದವು. ಚೀನಾದಲ್ಲಿ ಸುಮಾರು 1 ಟ್ರಿಲಿಯನ್ ಡಾಲರ್ ಅಂದ್ರೆ ಸುಮಾರು 70 ಲಕ್ಷ ಕೋಟಿ ರೂಪಾಯಿ ಮೊತ್ತದ ಖನಿಜ ಸಂಪತ್ತು ಇದೆ.. ಅದ್ರಲ್ಲೂ ಪ್ರಮುಖವಾಗಿ ಲಿಥಿಯಂ ಹೇರಳವಾಗಿ ಸಿಗುತ್ತೆ. ಹೀಗಾಗಿಯೇ ಅವೆಲ್ಲವನ್ನು ಬಾಚಿಕೊಳ್ಳುವ ಆತುರದಲ್ಲಿದೆ ಚೀನಾ.. ಈ ಬಗ್ಗೆ ಪ್ರತಿಕ್ರಿಯಿಸಿರೋ ಗಣಿ ಮತ್ತು ಪೆಟ್ರೋಲಿಯಂ ಇಲಾಖೆ ವಕ್ತಾರ ಎಸ್ಮತುಲ್ಲಾ ಬುರ್ಹಾನ್​, ಅಫ್ಘಾನಿಸ್ತಾನ ಮೆಸ್ ಅಯ್ನಕ್​ ಕಾಪರ್ ಪ್ರಾಜೆಕ್ಟ್​​​​​ ಸಂಬಂಧ ಒಪ್ಪಂದ ಮಾಡ್ಕೊಂಡಿದೆ. ಇದ್ರಲ್ಲಿ ಯಾವುದೇ ತೊಂದ್ರೆ ಇಲ್ಲ.. ಸದ್ಯದಲ್ಲೇ ಇಲ್ಲಿ ಗಣಿಗಾರಿಕೆ ಶುರುವಾಗುತ್ತೆ ಅಂತ ಹೇಳಿದ್ದಾರೆ. ಅಂದಹಾಗೆ ಈ ಮೆಸ್ ಅಯ್ನಕ್ ಅನ್ನೋದು ಅಫ್ಘಾನಿಸ್ತಾನದ ಅತಿದೊಡ್ಡ ತಾಮ್ರದ ನಿಕ್ಷೇಪ ಇರೋ ಜಾಗವಾಗಿದೆ.

-masthmagaa.com

Contact Us for Advertisement

Leave a Reply