ಕಾಂಗೋದಲ್ಲಿ ಚೀನೀ ನಾಗರಿಕರ ಅಪಹರಣ!

masthmagaa.com:

ಕಾಂಗೋ: ಆಫ್ರಿಕನ್ ದೇಶವಾದ ಕಾಂಗೋದಲ್ಲಿ ಮೈನಿಂಗ್ ಆಪರೇಷನ್​ ಜಾಗದಿಂದ ತನ್ನ ಐವರು ನಾಗರಿಕರನ್ನು ಅಪಹರಿಸಲಾಗಿದೆ ಅಂತ ಚೀನಾ ಮಾಹಿತಿ ನೀಡಿದೆ. ಕಾಂಗೋದಲ್ಲಿರೋ ಚೀನಾ ರಾಯಭಾರಿ ವಿಚಾಟ್​​ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರವಾಂಡ, ಬುರುಡಿ ಮತ್ತು ತಾಂಜೇನಿಯಾ ಗಡಿಯಲ್ಲಿರೋ ಕಿವು ಪ್ರಾಂತ್ಯದ ಮೈನಿಂಗ್ ಜಾಗದಿಂದ ಐವರನ್ನು ಅಪಹರಿಸಲಾಗಿದೆ.

ಜೊತೆಗೆ ಈ ಬಗ್ಗೆ ಕಾಂಗೋದಲ್ಲಿರೋ ಚೀನೀ ರಾಯಭಾರಿ ಕಚೇರಿಯಿಂದ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಕಿವು ಮತ್ತು ಸುತ್ತಮುತ್ತಲಿನ ಪ್ರಾಂತ್ಯದಲ್ಲಿರೋ ಚೀನೀ ನಾಗರಿಕರು ಕೂಡಲೇ ಆ ಸ್ಥಳವನ್ನು ತೊರೆಯಬೇಕು. ಭದ್ರತೆ ಇಲ್ಲದ ಕಾರಣ ಅಪಹರಣದ ವೇಳೆ ರಕ್ಷಣೆ ಒದಗಿಸಲು ಸಾಧ್ಯವಿಲ್ಲವಾದ್ದರಿಂದ ಈ ಕ್ರಮ ಅಂತ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಕಾಂಗೋದಲ್ಲಿರೋ ಎಲ್ಲಾ ಚೀನೀ ನಾಗರಿಕರು ಮತ್ತು ಹೂಡಿಕೆ ಮಾಡಿರೋ ಉದ್ಯಮಗಳು ಅಲ್ಲಿನ ಸ್ಥಳೀಯ ಪರಿಸ್ಥಿತಿಗಳ ಕಡೆಗೆ ಹೆಚ್ಚು ಗಮನ ಹರಿಸಬೇಕು. ತಮ್ಮ ರಕ್ಷಣೆ ಮತ್ತು ತುತು ಪರಿಸ್ಥಿತಿ ಎದುರಿಸಲು ರೆಡಿಯಾಗಿರಬೇಕು. ಅನಗತ್ಯವಾಗಿ ಹೊರಗಿನ ಪ್ರದೇಶಗಳಿಗೆ ಪ್ರಯಾಣಕೈಗೊಳ್ಳಬೇಡಿ ಅಂತ ಕೂಡ ಎಚ್ಚರಿಸಲಾಗಿದೆ.

ಆದ್ರೆ ಅಪಹರಣದ ಬಗ್ಗೆ ಹೆಚ್ಚಿನ ಯಾವುದೇ ಮಾಹಿತಿ ನೀಡಿಲ್ಲ. ಅಪಹರಣಕ್ಕೊಳಗಾದವರು ಯಾರಿಗಾಗಿ ಕೆಲಸ ಮಾಡ್ತಿದ್ರು..? ಅಪಹರಣಕಾರರು ಯಾರು ಅನ್ನೋದರ ಕುರಿತು ಅನುಮಾನ ಇದ್ಯಾ ಅಂತ ಮಾಹಿತಿ ನೀಡಿಲ್ಲ. ಅಂದಹಾಗೆ ಕಾಂಗೋದಲ್ಲಿ ಹಲವು ವರ್ಷಗಳಿಂದ ವಿವಿಧ ಬಂಡುಕೋರ ಗುಂಪುಗಳು ಅಲ್ಲಿನ ನೈಸರ್ಗಿಕ ಸಂಪತ್ತಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಲೇ ಇವೆ. ಇದಕ್ಕಾಗಿ ಆಗಾಗ ದಾಳಿ, ಅಪಹರಣ ಇಂಥಾ ಕೃತ್ಯಗಳನ್ನು ಮಾಡುತ್ತಲೇ ಇರುತ್ತವೆ. ಆದ್ರೆ ಚೀನಾ ಇಲ್ಲಿಂದ ಅಲ್ಲಿವರೆಗೂ ಅತನ್ನ ಕಬಂದಬಾಹು ಚಾಚಿ ಸಂಪತ್ತು ಲೂಟಿ ಮಾಡ್ತಿದೆ. ಹೀಗಾಗಿ ಯಾವುದೋ ಬಂಡುಕೋರ ಸಂಘಟನೆ ಚೀನಾದ ಕಬಂದ ಬಾಹುವಿಗೆ ಬಿಸಿ ಬರೆ ಎಳೆಯಲು ಈ ಕೃತ್ಯ ಎಸಗಿರಬಹುದು ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply